ಪ್ರೀತಿಯ ಸಂಜೀವ್ ಸರ್
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಇಲ್ಲಿ ನಾನು ಕೆಲವು ಚಿಂತನೆಗಳನ್ನು ಹಂಚಿಕೊಳ್ಳಲು
ಬಯಸುತ್ತೇನೆ.

ಎಸ್.ಟಿ.ಎಫ್ ನಲ್ಲಿನ ಚರ್ಚೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗುವುದು ಮತ್ತು ಕೆಲವು
ಸಮಯದಲ್ಲಿ ಮಿತಿಗಳನ್ನು ಮೀರಿ ನಡೆಯುವಾಗ ಅವುಗಳನ್ನು ನಿರ್ವಹಿಸುವುದು ನಮ್ಮೆಲ್ಲರ ಸಾಮೂಹಿಕ
ಜವಾಬ್ದಾರಿಯಾಗಿದೆ. ಈಗಾಗಲೇ ಹಲವಾರು ಶಿಕ್ಷಕರು ಈ ಜವಾಬ್ದಾರಿಯನ್ನು ನಿರ್ವಹಸುತ್ತಿದ್ದು,
ವೇದಿಕೆಯಲ್ಲಿ ಅನವಶ್ಯಕ ಅಥವಾ ಸುಸಂಬದ್ದವಲ್ಲದ ಚರ್ಚೆಗಳು ನಡೆದಯವಾಗ ಅವುಗಳಿಗೆ
ಪ್ರತಿಕ್ರಿಯಿಸುವುದನ್ನು ಕಾಣುತ್ತಿದ್ದೇವೆ.
ಇಲ್ಲಿ ಐಟಿ ಫಾರ್ ಚೆಂಜ್ ಸಂಸ್ಥೆಯವರದು ವೇದಿಕೆಯ ಚರ್ಚೆಯನ್ನು ಸುಗಮಗಾರಿಕೆ
ಮಾಡುವುದಾಗಿದೆ. ನಾವುಗಳು ವೇದಿಕೆಯ ಎಲ್ಲಾ ಇಮೇಲ್‌ಗಳನ್ನು ಗಮನಿಸಲು ಪ್ರಯತ್ನಿಸುತ್ತೇವೆ.
ಸೂಕ್ತ ಸಮಯದಲ್ಲಿ ಶಿಕ್ಷಕರ ಸಹಕಾರ ಮತ್ತು ಸಹಯೋಜಿತತ್ವಕ್ಕೆ ಪೂರಕವಾಗಿ  ಪ್ರಜಾಪ್ರಬುತ್ವದ
ಸ್ಪೂರ್ತಿಯಲ್ಲಿ  ಕ್ರಮವಹಿಸಲು ಪ್ರಯತ್ನಿಸುತ್ತೇವೆ.
ಕೆಲವು ಸಮಯದಲ್ಲಿ ತಕ್ಷಣಕ್ಕೆ ಇಮೇಲ್‌ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದು. ಏಕೆಂದರೆ
ನಾವುಗಳು ಸಹ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ತಂಡದಲ್ಲಿ ಚರ್ಚಿಸಬೇಕಿರುತ್ತದೆ.

ನಾವು ಪ್ರತಿಯೊಬ್ಬರ ದೃಷ್ಟಿಕೋನಗಳನ್ನು ಸಹ ಗಮನಿಸಬೇಕು, ವೇದಿಕೆಯಲ್ಲಿ  31000 ಹೆಚ್ಚು
ಇಮೇಲ್‌ಗಳು ಹಂಚಿಕೆಯಾಗಿದ್ದು ಬಹುತೇಕ ಸಂಪನ್ಮೂಲಗಳುಳ್ಳ ಇಮೇಲ್‌ಗಳೇ ಆಗಿವೆ.
ನಕಾರಾತ್ಮಕವಾದ ಇಮೇಲ್‌ಗಳ ಸಂಖ್ಯೆ ಬಹಳ ಕಡಿಮೆ ಇದೆ. ಕಳೆದ 5 ವರ್ಷದಲ್ಲಿ ಕೇವಲ 2
ಪ್ರಕರಣದಲ್ಲಿ ಮಾತ್ರ  ಸದಸ್ಯರನ್ನು ಗುಂಪಿನಿಂದ ತೆಗದುಹಾಕಲಾಗಿದೆ. ಹಾಗು ಯಾವುದೇ
ಸದಸ್ಯರು  ಪುನಃ ಪುನಃ ವೇದಿಕೆಯ ನಿಯಮಗಳನ್ನು ಮೀರಿ ಇಮೇಲ್ ಮಾಡಿದರೆ, ಅಂಥವರನ್ನು
"Moderation" ಇಡಲಾಗುತ್ತದೆ.

ಇಲ್ಲಿ ತಾವು ಒಂದರೆರಡು ಒರಟು ಪದಗಳನ್ನು ಬಳಸಿದ್ದಾಗಿ ಕಾಣುತ್ತದೆ. ದಯವಿಟ್ಟು ಈ ಪದಗಳ
ಬಳಕೆಯನ್ನು ತಪ್ಪಸಿಬಹುದೇ ಎಂಬದು ನನ್ನ ಕೋರಿಕೆ.

ಎಲ್ಲಾ ಶಿಕ್ಷಕರಲ್ಲಿ ನನ್ನ ಮನವಿಯಂದರೆ, ಸಂಪನ್ಮೂಲಗಳನ್ನು, ವಿಚಾರಗಳನ್ನು ಹಂಚಿಕೊಳ್ಳುವ
ಮೂಲಕ ಮತ್ತು ಶೈಕ್ಷಣಿಕವಾಗಿ ಒಬ್ಬರಿಗೊಬ್ಬರು ಹಿಮ್ಮಾಹಿತಿ ನೀಡುವ ಮೂಲಕ ನಮ್ಮೆಲ್ಲರ
ಬಳಕೆಗಾಗಿ ಈ ಗುಂಪನ್ನು ಇನ್ನು ಉಪಯುಕ್ತವಾಗಿಸಲು ನಾವೆಲ್ಲರೂ ಸೇರಿ
ಕಾರ್ಯನಿರ್ವಹಿಸಬೇಕಿದೆ.

ಈ ಗುಂಪಿನಲ್ಲಿ ಇನ್ನೊಬ್ಬರ ಭಾವನೆಗಳಿಗೆ ನೋವುಂಟು ಮಾಡದ ರೀತಿಯಲ್ಲಿ ನಾವು
ಸಂಪನ್ಮೂಲಗಳನ್ನು ವಿಚಾರಗಳನ್ನು ಹಂಚಿಕೊಳ್ಳಲು ವಿಶೇಷ ಕಾಳಜಿ ವಹಿಸೋಣ.ಈ ವೇದಿಕೆಯನ್ನು
ಸಂಪನ್ಮೂಲಭರಿತವಾಗಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.

ಧನ್ಯವಾದಗಳು
ಗುರು

On Friday, November 18, 2016 at 8:21:48 PM UTC+5:30, sanjay.kundagol wrote:
>
> ಈ ವೇದಿಕೆ ನಿಮಾ೯ಣ ಮಾಡಿದ್ದು ಏಕೆ ?
>
> ಕೆಲವು ಕುಚೋದ್ಯ ಮನಸ್ಸಿನ so called ಅಪ್ರಾಪ್ತ ಬುದ್ದಿಜೀವಿಗಳು ಈ ವೇದಿಕೆಯನ್ನು
> ಕೆಲಸಕ್ಕೆ ಬಾರದ ರಾಜಕೀಯ ಚಚೆ೯ಗಳನ್ನು ಹರಟುತ್ತ ರಾಜ್ಯದ ಸಮಸ್ತ ಶಿಕ್ಷಕರ ಸಮಯವನ್ನು ಹಾಳು
> ಮಾಡುತ್ತ ಮಜಾ ತಗೋತಾ ಇದ್ದರೂ ನೋಡಿಯೂ ನೋಡದವರ ಹಾಗೆ STF ಆಡಳಿತ ವಗ೯ ಏಕೆ ಕುಳಿತುಕೊ೦ಡಿದೆ.
>
> ಈ ಹಿ೦ದೆ ವಗಾ೯ವಣೆ ಪ್ರಸ್ತಾಪಗಳನ್ನು ಮಾಡದ೦ತೆ ತೆಡೆದು ಈಗ ಹೀಗೆ ಗಾ೦ಧಾರಿ ಹಾಗೆ
> ಕಣ್ಣಿದ್ದು ಕುರುಡರ೦ತೆ ಏಕೆ ಸುಮ್ಮನಿದ್ದೀರಿ?
>
> ನಾನು ಗಮನಿಸದ೦ತೆ ಈ ವೇದಿಕೆ ಈ ಮೊದಲು ಬೇರೆ ವಿಷಯ ವೇದಿಕೆಗಳನ್ನು ಮೀರಿಸುವ೦ತಿತ್ತು ಈಗ
> ಏನಾಗಿದೆ .?
>
> ಕೆಲವರು ಮುಟ್ಟಿದ್ದೆ ತೌಡು ಕುಟ್ಟೊದನ್ನು ನೋಡುವದು ಬಿಟ್ಟರೆ ಬೇರೆ ಏನನ್ನು ನಿರೀಕ್ಷೆ
> ಮಾಡುವ ಹಾಗಿಲ್ಲ.
> ಈ ಪುರುಷಾಥ೯ಕ್ಕೆ ಈ ಮೇಲ್ ಗ್ರೂಪ್ ನ ಇನ್ನು ಏಕೆ ಜೀವ೦ತವಾಗಿದೆ .?
>
> ಪ್ರತಿದಿನಕ್ಕೆ ಎರಡು ಮೂರು ಸಾರಿ ಮೇಲ್ ಚೆಕ್ ಮಾಡುತ್ತಿದ್ದವರು ಈಗ ಯಾರೋ ಕಿತ್ತೋದವನ
> ಕುಚೋದ್ಯ ಕ್ಕೆ ಮೇಲ್ ಬ೦ದರು ನೋಡೋಕೆ ಮನಸಾಗತಿಲ್ಲ.ಹೀಗಿದ್ದರು ಈ ದಿವ್ಯ ಮೌನ ಏಕೆ ಸರ್. ?
> ನಾನು ಹೇಳಿದ್ದು ಸರಿ/ತಪ್ಪು ಇದ್ದರೆ ವಿಮಶೆ೯ಗಳಿಗೆ ಸ್ವಾಗತ
>
> ಗುರುಮೂತಿ೯ ಸರ್ ಈ ವೇದಿಕೆಯನ್ನು ಸರಿ ಮಾಡಿ ರಾಜ್ಯದ ಶಿಕ್ಷಕರಿಗೆ ಸ೦ಪನ್ಮೂಲ ಸುನಾಮಿ
> ಹರಿದು ಬರುವ ಹಾಗೆ ಮಾಡಿ. ಇಲ್ಲ ವಿಸಜಿ೯ಸಿ
> ಮತ್ತೆ ದಿವ್ಯ ಮೌನ ವಹಿಸಿದರೆ ಪಯಾ೯ಯ ಮೇಲ್ ಗ್ರೂಪ್ ಉದಯ ಆದರೂ ಆಶ್ಚಯ೯ ಇಲ್ಲ
>

Education Team
IT for Change
Bangalore
www.ITforChange.net
080 26654134

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CA%2BZ52kZzYno4%2BMqP0iwBgkpWDbDeZ0dyWW%3DQDCTcistRdw1P9Q%40mail.gmail.com.
For more options, visit https://groups.google.com/d/optout.

Reply via email to