ಎಪ್ರೀಲ್ ತಿಂಗಳಲ್ಲಿ ನಡೆಯುವ 10 ನೇ ತರಗತಿಯ ಪರೀಕ್ಷೆಯಲ್ಲಿ ಸಾಕಷ್ಟು ಬದಲಾವಣೆ ತರಲು ಮಂಡಳಿಯು ಈ ವರ್ಷ ನಿರ್ಧರಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವ ಉದ್ದೇಶದಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪ್ರತ್ಯಕವಾಗಿ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಇದು ಈ ಹಿಂದೆ ಅನುಸರಿಸುತ್ತಿದ್ದ ಕ್ರಮದಂತಿದೆ. ಈ ವಿಧಾನವು ಪರೀಕ್ಷೆ ಬರೆಯುವ ಮಕ್ಕಳಿಗೆ ಮತ್ತು ಮೌಲ್ಯಮಾಪಕರಿಗೆ ಸ್ನೇಹಮಯಿಯಾಗಿಲ್ಲ. ಪರೀಕ್ಷೆಗೆ ಕುಳಿತ ಮಕ್ಕಳು ಆಕಸ್ಮಿಕವಾಗಿ ಪ್ರಶ್ನೆ ಸಂಖ್ಯೆ ತಪ್ಪು ನಮುದು ಮಾಡುವದು, ಪ್ರಶ್ನೆ ಸಂಖ್ಯೆನ್ನು ಬರೆಯದೇ ಇದ್ದಾಗ ಸಮರ್ಪಕ ಮೌಲ್ಯಮಾಪನವಾಗಲಾರದು.ಹೀಗಾಗಿ ಮಗು ಉತ್ತರ ಬರೆದಾಗ್ಯೂ ಆಕಸ್ಮಿಕ ತಪ್ಪಿನಿಂದ ಅಂಕ ಕಳೆದುಕೋಳ್ಳಬೇಕಾಗುತ್ತದೆ. ಮೌಲ್ಯಮಾಪಕರು ಮೌಲ್ಯಮಾಪನ ಮಾಡುವಾಗಲೂ ಸಹ ಗೊಂದಲಕ್ಕೆ ಒಳಗಾಗುತ್ತಾರೆ. ಸಮಯೂ ಹರಣವಾಗುವದು. ಮಕ್ಕಳು ಪರೀಕ್ಷೆ ಬರಯಲು ಸುಗಮವಾಗಲಿ ಎಂದು ಪರೀಕ್ಷೆ ಕೇಂದ್ರಗಳನ್ನು ಈ ಹಿಂದೆ ವಿಕೇಂದ್ರಿಕರಣ ಮಾಡಲಾಗಿತ್ತು . ಆದರೆ ಈ ವರ್ಷ ತಾಲ್ಲೂಕು, ಹೊಬಳಿ ಹಂತದ ಆಯ್ದ ಕೆಲವೇ ಕೆಲವು ಪರೀಕ್ಷಾ ಕೇಂದ್ರಗಳು ರಚಿಸುವ ಚಿಂತನೆ ನಡೆದಿದೆ. ಜೊತೆಗೆ ಮಕ್ಕಳು ಬೆಳಗಿನ 9 ಗಂಟೆಗೆ ಪರೀಕ್ಷೆ ಕೇಂದ್ರ ತಲುಪಬೇಕಿದೆ. ಪರೀಕ್ಷೆ ಬರೆಯ ಗ್ರಾಮೀಣ ಭಾಗದ ಮಕ್ಕಳು ಸುಮಾರು20 , 30 ಕೀ ಮೀ ದೂರದ ಸ್ಥಳದಿಂದ ಸಾರಿಗೆ ಸಂಪರ್ಕ ಬಳಸಿಕೊಂಡು ಪರೀಕ್ಷೆ ಕೇಂದ್ರ ತಲುಪುವದು ಕಷ್ಟಕರ. ಜೊತೆಗೆ ನಗರಗಳಲ್ಲೂ ಸಂಚಾರಿ ದಟ್ಟಣೆ ಇದ್ದಾಗ ದೂರದ ಪರೀಕ್ಷೆ ಕೇಂದ್ರ ತಲುಪುವ ಸಮಸ್ಯೆ ಉದ್ಬವವಾಗಬಹುದು. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಈ ಕುರಿತು ಸಾಧಕ ಬಾಧಕಗಳನ್ನು ಗಮನದಲ್ಲಿ ಇಟ್ಟುಕೊಂಡು ,ಮಕ್ಕಳು ಪರಿಕ್ಷೆ ಬರೆಯಲು ಯಾವುದೇ ತಾಪತ್ರಯವಾಗದಂತೆ ಮತ್ತು ಮೌಲ್ಯಮಾಪನದಲ್ಲಿ ದೋಷವಾಗದಂತೆ ಈ ಪರೀಕ್ಷೆ ಬದಲಾವಣೆಯನ್ನು ಪರಿಶೀಲನೆ ಮಾಡಿ ಸೂಕ್ತ ಚಿಂತನೆ ನರ್ಧಾರಕ್ಕೆ ಬರುವದು ಸಮಂಜಸವಾಗಿದೆ . ****** ಇಂದ
ಪ್ರಹ್ಲಾದ್. ವಾ. ಪತ್ತಾರ ಮು. ಪೊ :- ಯಡ್ರಾಮಿ ತಾ :- ಜೇವರಗಿ ಜಿ:- ಕಲಬುರ್ಗಿ ಮೊ ಸಂ :- 9980900810 **"**""" -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAOouN1zB1WtYiLWsNw6W3n8m-xVRFiHdAPPeqxiOxSrB0YMqvQ%40mail.gmail.com. For more options, visit https://groups.google.com/d/optout.
