ಬಲ್ಲವರು ಬಲಿಷ್ಟ ಉತ್ತರ ಹುಡುಕಿಕೊಡಿ ..


ಕಲಿಕೆ ಗರಿಷ್ಠ ಮಟ್ಟದಲ್ಲಿ ಫಲಪ್ರದವಾಗಲೆಂದು ಹಂಬಲಿಸುವ ವಿಷಯ ಶಿಕ್ಷಕ ಎಷ್ಟು  ಶಂಕ
ಕುಟ್ಟಿ ಜಾಗಡೆ ಬಾರಿಸಿದರೂ ಏನು ಪ್ರಯೋಜನ .. ?  ಕಲಿಕೆಯಲ್ಲಿ ತೊಡಗಿಸಿಕೊಳ್ಳದ  ಇಂದಿನ
 ಗ್ರಾಮೀಣ ಸರ್ಕಾರಿ ಮಕ್ಕಳಿಗೆ ಏನು ಹೇಳಿದರೆನು ಫಲಪ್ರದ ? ನೀರೆ ಇಳಿಯದ ಗಂಟಲು ಕಡುಬು
ತುರುಕಿದ ಪರಸ್ಥಿತಿ..   ಶಿಕ್ಷಕರದ್ದು. ..
IQ ಹೆಚ್ಚಿರುವ ಪ್ರತಿಭಾವಂತ ತೀಕ್ಷಣ ಮತಿಯ 8/10 ವರ್ಷದ &  ಓದು ಬರಹ ಬಲ್ಲ ಮಗುವಿಗೆ
ಸುಲಭವಾಗಿ   ಎರಡು ತಿಂಗಳಲ್ಲೇ  ಮಾರ್ಗದರ್ಶನ ನೀಡಿದರೆ ಸಾಕು .. ಹತ್ತನೆ ತರಗತಿಯ ಸಮಾಜ
ವಿಜ್ಞಾನ  ಪಾಸು ಮಾಡಿಸಬಹುದು .ಆದರೆ ಜೀನ್ಸ್ ನಲ್ಲೇ ವ್ಯತ್ಯಾಸ ವಿದ್ದು IQ ಕಡಿಮೆ ಇರುವ ,
ಓದಿಗೆ ಪ್ರೋತ್ಸಾಹ   ಪೂರಕ ಪರಿಸರ ಇಲ್ಲದಾಗ,,.. ಸೂತಾರಾಂ ಕಲಿಯಲ್ಲ ಅಂತ ಭಂಢ ತನ  ಮಾಡುವ
ಮಕ್ಕಳಿಗೆ ಶಿಕ್ಷಕನಾದರೂ  ಏನು ಮಾಡಿಯಾನು  ?  ಆದರೆ ..  ಪ್ರಸ್ತುತ ಪರಸ್ಥಿತಿಯಲ್ಲಿ
 ಕಲಿಯಲೂ ಕಿಂಚಿತ್ತೂ ಆಸಕ್ತಿ ಇಲ್ಲದ ಮಕ್ಕಳಿಗೆ ಹೇಗೆ ಪಾಸು ಮಾಡಲು ಪ್ರಯತ್ನಿಸುವದು ?
ಪಾಸು ಮಾಡಲೇ ಬೇಕು ಎನ್ನುವ ಅಧಿಕಾರಯುತ ವಾಣಿಗೆ ಬೆಷರತ್ತಾಗಿ  ಅಧಿಕಾರವರ್ಗದ ಮನಮೆಚ್ಚುಗೆಯ
ಪಲಿತಾಂಶ ನೀಡುವದಾದರೂ ಹೇಗೆ ?
ನನ್ನಲ್ಲಿ...  ನಿಮ್ಮೆಲ್ಲರಿಂದಲೂ ಎರವಲು ಪಡೆದ ‌.....
ವಿಧವಿಧವಾದ ಮುದ್ರಣ, ಆಡಿಯೋ ,ವಿಡಿಯೋ  ಸಂಕ್ಷಿಪ್ತ ಸರಳಾತಿ ಸರಳವಾದ  ಪಾಸಿಂಗ್ ಪ್ಯಾಕ್ ..
ಸಂಪನ್ಮೂಲದ ಭಂಡಾರವೇ ಇದೆ .. ಕಲಿಸಬೇಕು ಎಂಬ ಹಂಬಲ ಉತ್ಕಷ ಅಭಿಲಾಸೆ ಇದ್ದು ..ಮಕ್ಕಳಿಗೆ
ಏನಾದರೂ ಮಾಡಬೇಕು ಎಂಬ ಉತ್ಕಟ ಇಚ್ಚಾ ಶಕ್ತಿಯೂ ಇದೆ.., ಕುಗ್ರಾಮಗಳಲ್ಲಿ ಸೌಲಭ್ಯಗಳೇ
ಇಲ್ಲದೇ ಇರುವ ಕುಟುಂಬಗಳ ಮಕ್ಕಳಿಗೆ ಕಿಂಚಿತ್ತಾದರೂ ಜೀವನಮಟ್ಟ ಬದಲಾಯಿಸಲು  ಹೆಬ್ಬಯಕೆ
ಇದೆ.. ಇಷ್ಟೆಲ್ಲ ಕನಸು ಇರುವ ಪ್ರಯತ್ನಿಸುವ ಶಿಕ್ಷಕರಿಗೆ  ಅಥವಾ  ನನಗೆ ನಿರುತ್ಸಾಹದ
ಕಾರ್ಮೊಡ ಕವಿದಂತೆ ಕಾಣುತ್ತಿದೆ.  ಕಾರಣ...ಮಕ್ಕಳಲ್ಲಿ  ಓದುವ ಉತ್ಸುಕತೆಯೇ ಆಸಕ್ತಿ
ಆಂತರಿಕ ಅಭಿಪ್ರೇರಣೆ  ಇಲ್ಲದೇ ಹೋಗಿದೆ.. ಮಕ್ಕಳ ಮುಂದೆ ಯಾವ ಸಂಪನ್ಮೂಲ ಸಾಹಿತ್ಯ ..
ಸಿದ್ದಮಾಡಿ ಸುಲಿದು . ಇಟ್ಟರೂ ಏನು ಪ್ರಯೋಜನವಸಗುತ್ತಿಲ್ಲ..?  ಕೊಣದ  ಮುಂದೆ ಕಿನ್ನರಿ
ಬಾರಿಸಿದಂತೆ .. ಬೊರ್ಗಲ್ಲ ಮೇಲೆ ಮಳೆ ಸೂರಿದಂತೆ ಎಲ್ಲವೂ ನಿಷ್ಪಲ.. ವ್ಯರ್ಥ ಪ್ರಯತ್ನ ..
ಗಾಳಿಗೆ  ಗುದ್ದಿ ಮೈ ನುಸಿಕೊಳ್ಳುವ ಮೊಂಡು ಪ್ರಯತ್ನ ಅಷ್ಟೆ ..

* ಒಂದು ಕುಂದುರೆ ನೀರಡಿಸಿದೆ ಎಂದು  ನಾವೆ ಕಲ್ಪಿಸಿಕೊಂಡು ನೀರು ಹತ್ತಿರ ಕರೆದುಕೊಂಡು
ಹೋಗಬಹುದು..ಪಾಪ ಅದರ  ಆರೋಗ್ಯ  ಸರಿ ಇಲ್ಲ  ಎಂದು ಭ್ರಮಿಸಿಕೊಂಡು  .ನಾವೇ .ಕುದುರೆಯ
ಬಾಯ್ದೆರೆದು  ಗೊಟುಕು ಹಾಕಬಹುದು.ಆದರೆ, ಕುಡಿಯಲು ಶಕ್ತಿ ಸಾಮರ್ಥ್ಯ ವೇ ಇಲ್ಲದಾಗ ..
ಎಷ್ಟು ಪ್ರಯತ್ನ ಮಾಡಿದರು  ಏನು ಪ್ರಯೋಜನ  ... ?  ಬ್ರೆನ್ ಡೆಡ್ ಆದ ಕೋಮಾದಲ್ಲಿ ಇರುವ
ರೋಗಿಯಂತೆ .. ವ್ಯರ್ಥ ಪ್ರಯತ್ನ ..  ಸರ್ಕಾರಿ ಕುಳು ತಿನ್ನುವದರಿಂದ ಇಚ್ಚೆ ಇದ್ದೊ
ಇಲ್ಲದೆಯೋ .. ಕಾಗೆ ಕಪ್ಪು ಅಂತ ವಾದ ಮಾಡದೆ ಬೆಳ್ಳಗೆ ಇದೆ ಎಂದೂ ಹೂ ಗುಟ್ಟುತ್ತಾ ಸಾಗಬೇಕು
.
* ಜ್ಞಾನದ ಹೊಟ್ಟೆ ಹಸಿವಿದ್ದವನಿಗೆ ಊಟ ಹಾಕಬಹುದು ಹೊಟ್ಟೆ ಹಸಿವೇ ಇಲ್ಲದವನಿಗೆ
 ಮೃಷ್ಟಾನ್ನ ಭೋಜನ ಮುಂದೆ ಇಟ್ಟರೂ ಅದನ್ನು ತಿನ್ನಲು ಅಪೆಕ್ಷೆ ಪಡಲು ಸಾದ್ಯವೇ ?  ...
ಹೀಗೆ ತರತರವಾಗಿ ಪ್ರಸ್ತುತ ಮಕ್ಕಳ ಮನಸ್ತಿತಿ  ಬಗ್ಗೆ ಮತ್ತು ಶೈಕ್ಷಣಿಕ ವ್ಯವಸ್ಥೆ ಬಗ್ಗೆ
ಕಟುವಾಗಿ ವೇದನೆಯಿಂದ ಕಳಕಳಿಯಿಂದ ನಿವೆದಿಸಬಹುದು ... ನಾನು ನಿರುತ್ಸಾಹದಿಂದ ಈ ಮಾತು
ಹೇಳುತ್ತಿಲ್ಲ .. ವಾಸ್ತವ ಅರುಹುತ್ತಿರುವೆ..
ನಾನು ( ನಾವು ) ಎಷ್ಟೇ ಪ್ರಯತ್ನ ಪಟ್ಟರೂ ಶ್ರಮವಹಿಸಿದರೂ ಎಂಥಾ ಪ್ರಯೋಗಗಳು ಮಾಡಿದರೂ
...ಏನು ಹರಸಾಹಸ ಪಟ್ಟರೂ  ಶಕ್ತಿ ಮೀರಿ ನಮ್ಮ ಸಾಮರ್ಥ್ಯ ಒರೆಗೆ ಹಚ್ಚಿ , ಶತ ಪ್ರಯತ್ನ
ಪಟ್ಟರೂ   ೧೦ ನೇ ತರಗತಿಯಲ್ಲಿ ನಿರಿಕ್ಷಿತ ಪಲಿತಾಂಶದ .. ಫಲ ದೊರಕುತ್ತಿಲ್ಲ. ನನಗೆ
ಅನಿಸಿದಂತೆ  ಪ್ರತಿಯೊಬ್ಬ ಶಿಕ್ಷಕನೂ  ಹೀಗೆ ಒಂದು ಕ್ಷಣ ಬೆಸರ ಹತಾಶೆ ನಿರುತ್ಸಾಹ
ಖಿನ್ನತೆಯ ಭಾವ  ಆಗುತ್ತೆ ಅನ್ನೊಂದು ನನ್ನ ಭಾವನೆ ?  ( ಕುತಂತ್ರ , ತಮತ್ರಗಾರಿಗೆ
ಪರಿಕ್ಷಾ ರಣತಂತ್ರ ಹೊರತಾಗಿ ಚಿಂತನೆ ಮಾಡುವದು ಅಗತ್ಯ ... ಇದನ್ನು ಅನುಸರಿಸಿದರೆ ೧೦೦
ಕ್ಕೆ ನೂರು ಪಲಿತಾಂಶ ಸುಲಬವಾಗಿ ಪಡಿಬಹುದು ಅದು ಅಪ್ರಸ್ತುತ)
ನನ್ನ ಈ ಚಿಂತೆಗೆ ಕಾರಣ ಹತ್ತು ಹಲವು ... ನಾನು ಈ ವರ್ಷ ಕೈಗೊಂಡ ಕ್ರಮಗಳು...
೧)ಬೇಸಿಗೆ ರಜೆಯಲ್ಲೆ ೩/೪ ಅಂಕದ ಪ್ರಶ್ನೋತ್ತರ ಝರಾಕ್ಸ  ಮಕ್ಕಲಿಗೆ ಅನುಕುಲವಾಗಲಿ ಎಂದು
ನೀಡಿದ್ದು
೨) ೯ ನೇ ತರಗತಿಯಲ್ಲೇ ( ಮಾರ್ಚ್ ೨೦೧೬) ಸರಳವಾದ ೨/೩ ಪಾಠ ಪರಿಚಯ ಮಾಡಿದ್ದು
೩) ನವಂಬರ್ ನಲ್ಲೆ ಸೆಲೆಬಸ್ ಪೂರ್ಣ ಪೂರ್ಣ ಮಾಡಿದ್ದು
೪) ಎಲ್ಲಾ ಪಾಠಗಳನ್ನು ಪಿ ಪಿ ಟಿ ಮೂಲಕ ಪ್ರಾತ್ಯಕ್ಷಿಕೆ ಮಾಡಿದ್ದು
೪)೪೦ ಪಾಠಗಳ  ೧೦/ ೧೫ ಅಂಕಗಳ ಕಿರು ಪರಿಕ್ಷೆಗಳು ಮಾಡಿದ್ದು
೫) ಕ್ವಿಜ್ ಗಳು , ಪದಬಂದ ಲಕ್ಕಿ ನಂಬರ್, ಜಾಕ್ ಪಟ್ ..ಆಟದ ಮೂಲಕ ಪಾಠ ಮಾಡಿದ್ದು
೬) ಪ್ರತಿ ಪಾಠದ ಸಾರವನ್ನು ನಾಲ್ಕಾರು ಬಾರಿ ರಿವಿಜನ್ ಮಾಡಿದ್ದು
೭) ಪಾಠಕ್ಕೆ ಪೂರಕ ವಿಡಿಯೋ ತೊರಿಸಿದ್ದು
೮) ಸಮಯದ ಟಾರ್ಗೆಟ್ ನೀಡಿ ಪಾಸಿಂಗ್ ಪ್ಯಾಕ್  ಮೂಲಕ ಓದಿಸಿದ್ದು
೯) ಹಾಡಿನ ಮೂಲಕ ೩ ಅಂಕದ ಪ್ರಶ್ನೆ ಹಾಡಿಸಿದ್ದು
೧೦) ಬ್ಲೂಪ್ರಿಂಟ್ ಪ್ರಕಾರ ಓದಲು ಹೇಳಿದ್ದು
೧೧) ೩ ಅಂಕದ ೬ ಪಾಠಗಳ ಇಟ್ಟು ೧೮ ಪ್ರಶ್ನೆ ಮಾತ್ರ ಓದಲು ತಿಳಿಸಿದ್ದು
೧೨)ನಕ್ಷೆಯನ್ನೂ  ೪ ವಿದದಲ್ಲಿ ಬರೆಯಲು ಹೇಳಿಕೊಟ್ಟು   ೧೫  ಸ್ಥಳ ಮಾತ್ರ ಗುರುತಿಸಲು
ತಿಳಿಸಿದ್ದು
೧೩) ೪ ಅಂಕದ ಕೇವಲ ೭ ಪ್ರಶ್ನೆ  ಪುನಃರಾವರ್ತನೆ ಮಾಡಿಸಿದ್ದು
೧೪) ೬ ಸರಣಿ ಪರಿಕ್ಷೆ ಮಾಡಿದ್ದು
೧೫) ೧೫ ಮಾದರಿ ಪ್ರಶ್ನೆ ಪತ್ರಿಕೆ ಪ್ರ್ಯಾಕ್ಟೀಸ್ ಮಾಡಿಸಿದ್ದು
೧೬) ಸಿಮಿಲರ್ ಪ್ರಶ್ನೆಗೆ ಒಂದೇ ಉತ್ತರ ಬರೆಸಿದ್ದು
೧೭) ಮಕ್ಕಳ ಮನೆಗೆ ಬೇಟಿ ನೀಡಿದ್ದು
೧೮)ಪ್ರಿತಿಯಿಂದ ತಿದ್ದಿ ಬುದ್ದಿ ಹೇಳಿದ್ದು
೧೯) ಬೈದು ಹೊಡೆದು ಹೇಳಿದ್ದು
೨೦) ಭವಿಷ್ಯದ ಶಿಕ್ಷಣದ ಬಗ್ಗೆ ಸಲಹೆ ಸೂಚನೆ ಹೆಳಿದ್ದು
೨೧) ಉತ್ತರ ಬರೆಯುವ ಶೈಲಿ ಬಗ್ಗೆ ಪದೆ ಪದೆ ಹೇಳಿದ್ದು
೨೨) ವೈಯಕ್ತಿಕವಾಗಿ ತಪ್ಪು ಕರೆದು ತಪ್ಪು ತಿದ್ದಿದಗದು
೨೩)ಹೇಗೆ ಎಷ್ಟು ಯಾವಾಗ ಓದು ಬರಹ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದ್ದು
೨೪) ಓದಲು ಕುಳ್ಳಿರಿಸಿ ವಾಚ್ ಮಾಡಿದ್ದು
೨೫)  ಅರ್ದಗಂಟೆ ಕಂಠಪಾಠ ಮಾಡಲು ಹೇಳಿ ಉತ್ತರ ಕೇಳಿದ್ದು
ಹೀಗೆ  ನಾನಾ ವಿಧದಲ್ಲಿ ತರತರವಾಗಿ ನನ್ನ ವಿವೆಚನೆ ಶಕ್ತಿಮೀರಿ   ಕಲಿಕೆಯಲ್ಲಿ ಹಿಂದುಳಿದ
ಮಕ್ಕಳನ್ನು ಪರಿಕ್ಷೆಯಲ್ಲಿ ಪಾಸುಮಾಡಲೇ ಬೆಕೆಂದು  ಒಂದ್ ತರ ಬಂಡತನದಿಂದ ಪ್ರಯತ್ನ ಮತ್ತು
ಪ್ರಯೋಗ ಮಾಡಿದರೂ ... ಪ್ರತಿಫಲ ಮಾತ್ರ .. ನಿರಿಕ್ಷೆಗೆ ತಕ್ಕಂತೆ ಸಾಧಿಸಲು ಸಾದ್ಯವಾಗದೇ
ಕೈ  ಚೆಲ್ಲಿ ಕುಳಿತಿರುವೆ ..
ತಿಳಿದವರು ಯಾರಾದರೂ ಹಿಮ್ಮಾಹಿತಿ ನೀಡಿ  ...
ಗರಿಷ್ಟಮಟ್ಟದ ಪಲಿತಾಂಶಕ್ಕಾಗಿ  ಇರುವ ತಂತ್ರ ಸಾಧನಗಳ ತಮಗೆ ತಿಳಿದಿದ್ದರೆ ಮಾಹಿತಿ ನೀಡಿ ..
ಏನಾದರೂ ಒಂದಿಷ್ಟು ಸಧಿಸಲು ಹೊಸಬದಲಾವಣೆಯ ದಾವಂತ ತುಡಿತ ಮಿಡಿತ ಹಂಬಲ ಇರುವ ಶಿಕ್ಷಕರಿಗೆ
(ನನಗೆ )ಮಾರ್ಗದರ್ಶನ ನೀಡಿ. ಪಠ್ಯೇತರ ಮತ್ತು ಪಠ್ಯಪೂರಕ  ಚಟುವಟಿಕೆ ಹೊರತಾದ ಸರ್ವತೋಮುಖ
ಅಭಿವೃದ್ದಿ ಸಾಧಿಸಲು ಹೊರಟವರಿಗೆ ವಾಸ್ತವ ಮತ್ತು ಪ್ರಾಯೋಗಿಕ ನೆಲಗಟ್ಟಿನಲ್ಲಿ
ಉತ್ತರಹುಡುಕಿಕೊಡಿ ..
****
ಇಂದ
ಪ್ರಹ್ಲಾದ್ .ವಾ . ಪತ್ತಾರ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
For more options, visit https://groups.google.com/d/optout.

Reply via email to