GOOD article sir On 15-Jun-2017 6:30 am, "Siddaramappa s m Sri" <[email protected]> wrote:
> ಯಾವಾಗಲಾದರೂ ಒಮ್ಮೆ ಹಿಮಾಲಯದ ತಪ್ಪಲು ಪ್ರದೇಶಕ್ಕೆ ಭೇಟಿ ನೀಡುವ ಅದೃಷ್ಟ ಒಲಿದರೆ, > ಅಲ್ಲಿನ ಕಾನನಗಳಲ್ಲಿ ಜೋಡಿಗಳು ಹಾಡುವ ಇಂಪಾದ ದನಿ ನಿಮ್ಮನ್ನು ಮಂತ್ರಮುಗ್ಧಗೊಳಿಸದೆ > ಬಿಡದು. ಪರಿಚಿತವಲ್ಲದ ಈ ಧ್ವನಿಯನ್ನು ಕೇಳಿ ನೀವು ಯಾರೋ ಸಂಗೀತಗಾರ ಪರಿಕರವನ್ನು > ಸಿದ್ಧಪಡಿಸುತ್ತಿರಬಹುದು ಎಂದು ಭಾವಿಸಿದರೆ ತಪ್ಪಾದೀತು. ಭಾವಪರವಶಗೊಳಿಸುವಂತಹ ಈ ನಾದದ > ಗುಟ್ಟು ಬೇರೆಯೇ ಇದೆ. ಪ್ರೇಮಿಗಳಿಬ್ಬರು ಶಿಳ್ಳೆಯನ್ನೇ ಗುಪ್ತಭಾಷೆಯನ್ನಾಗಿ ಬಳಸಿ ಪ್ರೇಮ > ಸಲ್ಲಾಪ ನಡೆಸುವ ಪರಿ ಇದು. > > ಹಮಂಗ್ ಬುಡಕಟ್ಟು ಸಮುದಾಯದ ಜನರು ಶಿಳ್ಳೆಯನ್ನೇ ಭಾಷೆಯನ್ನಾಗಿ ಬಳಸುತ್ತಾರೆ. > ಸಾಮಾನ್ಯವಾಗಿ ಅಲ್ಲಿನ ರೈತರು ಗದ್ದೆಗಳಲ್ಲಿ ಕೆಲಸ ಮಾಡುವಾಗ ಪರಸ್ಪರ ಸಂವಹನ ನಡೆಸಲು ಹಾಗೂ > ಬೇಟೆಗಾರರು ಕಾಡುಗಳಲ್ಲಿ ಶಿಕಾರಿ ನಡೆಸುವಾಗ ಒಬ್ಬರನ್ನೊಬ್ಬರು ಕರೆಯಲು ಶಿಳ್ಳೆಯನ್ನು > ಬಳಸುತ್ತಾರೆ. ಆದರೆ, ಅವರ ಈ ಭಾಷೆ ಹೆಚ್ಚು ಆಪ್ಯಾಯಮಾನವಾಗಿ ವ್ಯಕ್ತವಾಗುವುದು > ಅಪರೂಪಕ್ಕೊಮ್ಮೆ ಮಾತ್ರ ನಡೆಸುವ ಪ್ರೇಮ ನಿವೇದನೆ ಪ್ರಸಂಗಗಳಲ್ಲಿ. ಮುಸ್ಸಂಜೆಯಾಗುತ್ತಲೇ > ಆಸುಪಾಸಿನ ಗ್ರಾಮಗಳಲ್ಲಿ ಅಂಡಲೆಯುವ ಹುಡುಗರು ಬೀದಿಗಳಲ್ಲಿ ಹಾದು ಹೋಗುವಾಗ ತಮ್ಮಿಷ್ಟದ > ಹಾಡುಗಳನ್ನು ಶಿಳ್ಳೆಯ ರೂಪದಲ್ಲಿ ಹಾಡುತ್ತಾ ಹೋಗುತ್ತಾರೆ. ಹುಡುಗಿಯ ಕಡೆಯಿಂದಲೂ ಇದಕ್ಕೆ > ಹಸಿರು ನಿಶಾನೆ ಸಿಕ್ಕಿತೆಂದರೆ ಮುಗಿಯಿತು; ಅಲ್ಲೇ ಅವರಿಬ್ಬರ ಪ್ರೇಮ ಸಲ್ಲಾಪ ಶುರು. ಅವರ > ಅಷ್ಟೂ ಸರಸ ಸಲ್ಲಾಪ ನಡೆಯುವುದು ಶಿಳ್ಳೆಯ ಮೂಲಕವೇ! > > ಸರಸ ಸಲ್ಲಾಪಕ್ಕೆ ಪರಿಪೂರ್ಣವಾದ ಪರಿಭಾಷೆಯಾಗುವ ಈ ಮನಮೋಹಕ ಶಿಳ್ಳೆಯ ಹಾಡುಗಳಲ್ಲಿ > ಇನ್ನೊಂದು ವೈಶಿಷ್ಟ್ಯವಿದೆ. ಜೋಡಿಗಳು ಬಳಸುವ ಈ ಭಾಷೆಯನ್ನು ಬೇರೆಯವರು ಅರ್ಥೈಸಿಕೊಳ್ಳಲು > ಸಾಧ್ಯವೇ ಇಲ್ಲ. ಹಾಗಾಗಿ ಅವರ ಪ್ರೇಮದ ಪರಿಭಾಷೆ ಇತರರ ಪಾಲಿಗೆ ಅಜ್ಞಾತವಾಗಿಯೇ ಉಳಿಯುತ್ತದೆ. > ‘ಈ ಜೋಡಿಗಳು ತೀರಾ ಖಾಸಗಿ ಸಂಕೇತಗಳನ್ನೂ ರೂಪಿಸಿಕೊಳ್ಳುತ್ತಾರೆ. ಕದ್ದಾಲಿಸುವ ಕಳ್ಳರಿಗೆ > ಅವರ ಮಾತುಗಳ ಗೂಡಾರ್ಥ ತಿಳಿಯಬಾರದು ಎಂಬ ಕಾರಣಕ್ಕೆ ಕೆಲವು ಅಸಂಬದ್ಧ ಶಬ್ದಗಳನ್ನೂ > ಪೋಣಿಸುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಪದಗಳಲ್ಲಿನ ಕೆಲವು ಅಕ್ಷರಗಳನ್ನು ಅದಲು ಬದಲು > ಮಾಡುವ ಮೂಲಕ ಪೋಷಕರನ್ನು ಬೇಸ್ತು ಬೀಳಿಸುವಂತೆಯೇ ಇದು ಕೂಡ. ಈ ರೀತಿ ಮಾಡುವುದು ಈ ಜೋಡಿಗಳ > ನಡುವೆ ಆತ್ಮೀಯ ಭಾವನೆ ಹೆಚ್ಚಿಸುತ್ತದೆ’ ಎನ್ನುತ್ತಾರೆ ದಶಕಗಳ ಹಿಂದೆ ಹಿಮಾಲಯದ > ತಪ್ಪಲಿನಲ್ಲಿ ಪ್ರವಾಸ ಕೈಗೊಂಡಿದ್ದ ಫ್ರಾನ್ಸ್‌ನ ಗ್ರೆನೋಬಲ್ ವಿಶ್ವವಿದ್ಯಾಲಯದ ಸಂಶೋಧಕ > ಜೂಲಿಯನ್ ಮೆಯೆರ್. > > ‘ಈ ಪದ್ಧತಿ ಮಾನವತೆಯ ಅದ್ಭುತ ಭಾಷಾ ವೈವಿಧ್ಯದ ಬಹುಮುಖ್ಯ ಅಂಶವೂ ಹೌದು. ಹಾಗೆಯೇ ಮನುಷ್ಯ > ಸಂವಹನದ ಇತಿಮಿತಿಯನ್ನು ಅರಿತುಕೊಳ್ಳುವುದಕ್ಕೂ ಇದು ಸಹಕಾರಿ. ಅನೇಕ ಕಡೆಗಳಲ್ಲಿ ಇನ್ನೊಬ್ಬರ > ಗಮನ ಸೆಳೆಯುವ ಕಾರ್ಯಕ್ಕಿಂತಲೂ ಹೆಚ್ಚಿನದಾದ ಉದ್ದೇಶಗಳಿಗೆ ಶಿಳ್ಳೆ ಬಳಕೆಯಾಗುತ್ತದೆ. ಅಗಾಧ > ಅರ್ಥವನ್ನು ತುಂಬಿಕೊಡಲು ಇದು ಅತ್ಯಂತ ಸರಳವಾದ ವಿಧಾನ. ವಿಶ್ವದಾದ್ಯಂತ 70ಕ್ಕೂ ಹೆಚ್ಚು > ಜನಾಂಗಗಳು ಭಾವನೆಗಳನ್ನು ವ್ಯಕ್ತಪಡಿಸಲು ಸಹಜ ಮಾತುಕತೆಯಷ್ಟೇ ಸುಲಲಿತವಾಗಿ ಶಿಳ್ಳೆಯನ್ನೂ > ಬಳಸುತ್ತವೆ’ ಎನ್ನುತ್ತಾರೆ ಅವರು. > >  > > ಈ ನಿಗೂಢ ಭಾಷೆಗಳು ಹೊಸ ಸಂಕೇತ ರೂಪದ ಮಾಹಿತಿಯನ್ನು ಗ್ರಹಿಸುವ ಮಿದುಳಿನ ಅಗಾಧ > ಸಾಮರ್ಥ್ಯಕ್ಕೂ ಕನ್ನಡಿ ಹಿಡಿಯುತ್ತವೆ. ನರವಿಜ್ಞಾನಿಗಳು ಮಿದುಳಿನ ಸಂರಚನೆ ಕುರಿತ ಮೂಲ > ಗ್ರಹಿಕೆಯನ್ನೇ ಮತ್ತೆ ಪರಾಮರ್ಶಿಸಬೇಕಾದ ಹೊಸ ಹೊಳಹುಗಳಿಗೂ ಇವು ಕಾರಣವಾಗಿವೆ. ಅವರ ಈ > ಸಂಶೋಧನೆ ಭಾಷೆಯ ಉಗಮದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಒಂದು ಪರಿಕಲ್ಪನೆ ಪ್ರಕಾರ, ಮಾನವನ > ಮೊದಲ ತೊದಲ್ನುಡಿ ಹಮಂಗ್ ಬುಡಕಟ್ಟಿನ ಪ್ರೇಮ ನಿವೇದನೆಯ ಶಿಳ್ಳೆ ಹಾಡುಗಳಂತೆಯೇ ಇದ್ದಿರುವ > ಸಾಧ್ಯತೆಯೂ ಇದೆ. > > ಕ್ಯಾನರಿ ದ್ವೀಪವೊಂದರಲ್ಲಿ ಬಳಕೆಯಲ್ಲಿದ್ದ ಸ್ಪ್ಯಾನಿಷ್ ಭಾಷೆಯ ‘ಸಿಲ್ಬೊ ಗೊಮೆರೊ’ ಎಂಬ > ಶಿಳ್ಳೆಯ ಪರಿಭಾಷೆಯ ಕುರಿತು, 40 ವರ್ಷ ಹಿಂದೆ ಅಮೆರಿಕದಲ್ಲಿ ಪ್ರಕಟವಾದ ವೈಜ್ಞಾನಿಕ ಲೇಖನ > ಓದಿದ ಬಳಿಕ ಮೆಯೆರ್ ಅವರಿಗೆ ಶಿಳ್ಳೆ ಭಾಷೆ ಬಗ್ಗೆ ಆಸಕ್ತಿ ಕೆರಳಿತು. ಕುರಿಗಾಹಿಗಳು > ಕಡಿದಾದ ಕಣಿವೆಗಳ ನಡುವೆ ಸಂವಹನ ನಡೆಸಲು ಚೇತೋಹಾರಿ ಶಿಳ್ಳೆಗಳನ್ನು ಬಳಸುತ್ತಿದ್ದರು. ಅದು > ಹೆಚ್ಚೂ ಕಡಿಮೆ, ಸ್ಥಳೀಯ ಹಕ್ಕಿಗಳ (ಬ್ಲಾಕ್‌ಬರ್ಡ್) ಭಾಷೆಯಂತೆಯೇ ಇತ್ತು. ಮನುಷ್ಯರ > ಮಾತುಗಳನ್ನು ಅನುಕರಿಸುವುದಕ್ಕೆ ಈ ಹಕ್ಕಿಗಳು ಹೆಸರುವಾಸಿ. > > ಈ ವಿಚಾರ ಸಹಜವಾಗಿಯೇ ಮೆಯೆರ್ ಅವರ ಕುತೂಹಲ ಕೆರಳಿಸಿತ್ತು. ಅವರು ಈ ವಿಷಯದ ಕುರಿತೇ > ಪಿಎಚ್.ಡಿ ಪದವಿ ಪಡೆದರು. ಇದಾಗಿ ಒಂದು ದಶಕದ ಬಳಿಕವೂ ಅವರು ಶಿಳ್ಳೆಯ ಗುಂಗಿನಿಂದ ಹೊರಗೆ > ಬಂದಿಲ್ಲ. ‘ಮುಂದೊಂದು ದಿನ ಇದೇ ನನಗೆ ಉದ್ಯೋಗವನ್ನೂ ನೀಡುತ್ತದೆ ಎಂದು ನಾನು ಕನಸಿನಲ್ಲೂ > ಕಲ್ಪಿಸಿರಲಿಲ್ಲ’ ಎನ್ನುತ್ತಾರೆ ಮೆಯೆರ್. > > ಮೆಯೆರ್ ಅವರ ಹೆಚ್ಚಿನ ಸಂಶೋಧನೆಗಳು ಜಗತ್ತಿನಾದ್ಯಂತ ಶಿಳ್ಳೆಯ ಪರಿಭಾಷೆಗಳನ್ನು > ಗುರುತಿಸುವುದರ ಬಗ್ಗೆಯೇ ಕೇಂದ್ರೀಕೃತವಾಗಿವೆ. ಪ್ರಾಚೀನ ಇತಿಹಾಸ ಪುಸ್ತಕಗಳಲ್ಲೂ ಈ ಕುರಿತ > ಕೆಲವು ಉಲ್ಲೇಖಗಳಿದ್ದವು. ಉದಾಹರಣೆಗೆ, ಕ್ರಿಸ್ತಪೂರ್ವ 5ನೇ ಶತಮಾನದ ಗ್ರೀಕ್ ಇತಿಹಾಸಕಾರ > ಹೆರೋಡೋಟಸ್ ಅವರು, ಗುಹೆಗಳಲ್ಲಿ ವಾಸಿಸುತ್ತಿದ್ದ ಇಥಿಯೋಪಿಯನ್ನರ ಗುಂಪಿನ ಬಗ್ಗೆ > ವಿವರಿಸಿದ್ದರು. ‘ಅವರ ಭಾಷೆಯಂತಹ ಇನ್ನೊಂದು ಭಾಷೆ ಜಗತ್ತಿನ ಬೇರೆಲ್ಲೂ ಇರಲು ಸಾಧ್ಯವಿಲ್ಲ. > ಅದು ಬಾವಲಿಗಳ ಕೀರಲು ಧ್ವನಿಯಂತೆಯೇ ಇದ್ದವು’ ಎಂದು ಅವರು ಬರೆದಿದ್ದರು. ಯಾವ ಜನಾಂಗದ > ಬಗ್ಗೆ ಅವರು ವಿವರಿಸಿದ್ದರು ಎಂಬ ಬಗ್ಗೆ ಖಚಿತತೆ ಇಲ್ಲ. ಆದರೆ, ಮೆಯೆರ್ ಅವರ ಪ್ರಕಾರ > ಇಥಿಯೋಪಿಯಾದ ಓಮೊ ಕಣಿವೆಯಲ್ಲಿ ಈಗಲೂ ಅನೇಕ ವಿಧದ ಶಿಳ್ಳೆ ಭಾಷೆಗಳು ಬಳಕೆಯಲ್ಲಿವೆ. > > ಜಗತ್ತಿನ ಎಲ್ಲ ಮೂಲೆಗಳಲ್ಲೂ ಶಿಳ್ಳೆ ಭಾಷೆ ಚಾಲ್ತಿಯಲ್ಲಿರುವುದನ್ನು ಮೆಯೆರ್ > ಗುರುತಿಸಿದ್ದಾರೆ. ಮಾತಿಗಿಂತಲೂ ಹೆಚ್ಚು ದೂರಕ್ಕೆ ಶಿಳ್ಳೆ ಕೇಳಿಸಬಲ್ಲುದು. ಮುಕ್ತ > ವಾತಾವರಣದಲ್ಲಿ ಮಾತು 5 ಕಿ.ಮೀ ದೂರದವರೆಗೆ ಕೇಳಿಸಿದರೆ, ಶಿಳ್ಳೆ 8 ಕಿ.ಮೀ.ಯಷ್ಟು ದೂರ > ಕೇಳಿಸಬಲ್ಲುದು. ಹಾಗಾಗಿಯೇ, ಕಣಿವೆ ಪ್ರದೇಶಗಳಲ್ಲಿ ಕುರಿಗಾಹಿಗಳು ಹಾಗೂ ರೈತರು > ಕಣಿವೆಗಳಾಚೆಗೆ ಸಂದೇಶ ರವಾನಿಸಲು ಸಾಮಾನ್ಯವಾಗಿ ಶಿಳ್ಳೆ ಭಾಷೆಯನ್ನೇ ಬಳಸುತ್ತಾರೆ. > > ಶಿಳ್ಳೆಯ ಸದ್ದು ಅಮೆಜಾನ್‌ನಂತಹ ದಟ್ಟಾರಣ್ಯದೊಳಗೂ ಸರಾಗವಾಗಿ ನುಸುಳಬಲ್ಲುದು. ಇಲ್ಲಿನ > ದಟ್ಟ ಹಸಿರು ಕಾನನದ ನಡುವೆಯೂ ಪರಸ್ಪರ ಗುರುತಿಸಿಕೊಳ್ಳಲು ಬೇಟೆಗಾರರು ಶಿಳ್ಳೆಯನ್ನೇ > ಬಳಸುತ್ತಾರೆ. ‘ಪ್ರತಿಧ್ವನಿಗಳು ಒಂದಕ್ಕೊಂದು ಕೂಡಿಕೊಂಡು ಗೊಂದಲ ಉಂಟಾಗುವುದನ್ನು > ತಪ್ಪಿಸಲು ಶಿಳ್ಳೆಗಳು ಸಹಕಾರಿ’ ಎನ್ನುತ್ತಾರೆ ಮೆಯೆರ್. > > ‘ಮಾತನಾಡಿದರೆ ಶಿಕಾರಿಯ ಪ್ರಾಣಿ ಬೆದರಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ, > ಶಿಳ್ಳೆಯಿಂದ ಅವು ವಿಚಲಿತವಾಗುವುದಿಲ್ಲ. ಸಮುದ್ರದಲ್ಲಿ ನಡೆಸುವ ಬೇಟೆಗೂ ಈ ಭಾಷೆ ಸಹಕಾರಿ. > ಕೆಲವು ಎಸ್ಕಿಮೊ ಜನರು ತಿಮಿಂಗಿಲಗಳನ್ನು ಬೇಟೆಯಾಡುವಾಗ ಶಿಳ್ಳೆಯ ಮೂಲಕವೇ ಪರಸ್ಪರ ಆದೇಶ > ನೀಡುತ್ತಾರೆ’ ಎಂದು ಅವರು ಹೇಳುತ್ತಾರೆ. > > ಇಂತಹ ಗೂಢಭಾಷೆ ಯುದ್ಧದ ಅಸ್ತ್ರವಾಗಿ ಬಳಕೆಯಾದರೂ ಅಚ್ಚರಿ ಪಡಬೇಕಾಗಿಲ್ಲ. ಅಟ್ಲಾಸ್ > ಪರ್ವತ ಶ್ರೇಣಿಯ ಬರ್ಬೆರ್ ಜನಾಂಗದವರು (ಅಮೇಜಿಗ್ ಎಂದೂ ಕರೆಯುತ್ತಾರೆ) ಫ್ರೆಂಚರ ವಿರುದ್ಧ > ದಂಗೆ ಸಾರಿದ ಸಂದರ್ಭದಲ್ಲಿ ಸಂದೇಶಗಳನ್ನು ರವಾನಿಸಲು ಶಿಳ್ಳೆಯನ್ನೇ ಬಳಸಿದ್ದರು. ಈ ನಿಗೂಢ > ಭಾಷೆಯನ್ನು ಜಪಾನೀ ಗೂಢಚರರು ಗ್ರಹಿಸಬಾರದು ಎಂಬ ಉದ್ದೇಶದಿಂದ ಆಸ್ಟ್ರೇಲಿಯಾದ ಸೇನೆ > ರೇಡಿಯೊಗಳ ಮೂಲಕ ಶಿಳ್ಳೆಯ ಸಂದೇಶಗಳನ್ನು ಪ್ರಸಾರ ಮಾಡಲು ಪಪುವ ನ್ಯೂಗಿನಿಯ ಪರಿಣತರನ್ನು > ನೇಮಿಸಿಕೊಂಡಿದೆ. > > ಹಮಂಗ್ ಜನಾಂಗದವರು ಪ್ರೇಮ ನಿವೇದನೆಗೆ ಶಿಳ್ಳೆಯನ್ನು ಮೋಹಕವಾಗಿ ಬಳಸುವಂತೆಯೇ > ಧಾರ್ಮಿಕವಾಗಿಯೂ ಇದು ಬಳಕೆಯಲ್ಲಿದೆ. ಚೀನಾದ ಪ್ರಾಚೀನ ಸಾಹಿತ್ಯದಲ್ಲಿ ಟಾವೊ ತತ್ವಪದಗಳನ್ನು > ಜನ ಶಿಳ್ಳೆಗಳ ಮೂಲಕವೇ ಹಾಡುತ್ತಿದ್ದರು. ಈ ಅಭ್ಯಾಸ ಅವರನ್ನು ಒಂದು ಬಗೆಯ ವಿಶಿಷ್ಟ > ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತಿತ್ತು. ಚೀನಾದ ದಕ್ಷಿಣ ಭಾಗದಲ್ಲಿ ವೈವಿಧ್ಯಮಯ > ಶಿಳ್ಳೆಗಳನ್ನು ಬಳಸುವ ಹಮಂಗ್ ಹಾಗೂ ಆಖಾದಂತಹ ಅನೇಕ ದೇಸಿ ಅಲ್ಪಸಂಖ್ಯಾತ ಸಮುದಾಯಗಳು ಈಗಲೂ > ಇವೆ. > > ಲಕ್ಷಾಂತರ ಜನರ ಪಾಲಿಗೆ ಶಿಳ್ಳೆ ಈಗಲೂ ಅತ್ಯಂತ ಶಕ್ತಿಶಾಲಿ ಸಂವಹನ ವಿಧಾನ. ಶಿಳ್ಳೆಯನ್ನು > ಬಳಸುವವರು ಸಾಮಾನ್ಯವಾಗಿ ಎರಡರಲ್ಲೊಂದು ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ಮೆಯೆರ್ > ಕಂಡುಕೊಂಡಿದ್ದಾರೆ. ಇವೆರಡರಲ್ಲೂ, ಶ್ರುತಿಯನ್ನು ಬದಲಿಸುವ ಮೂಲಕ ಮಾತಿನ ಭಾಷೆಯ > ಹಂದರವನ್ನು ಮಾತ್ರ ಸೃಷ್ಟಿಸಲಾಗುತ್ತದೆ. ನಿತ್ಯವೂ ಬಳಸುವ ಮಾತು ಎಷ್ಟು ಲಯಬದ್ಧವಾಗಿದೆ > ಎಂಬುದನ್ನು ಇದು ಅವಲಂಬಿಸಿದೆ. ಕೆಲವು ದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಏಷ್ಯಾದಲ್ಲಿ > ಒಂದು ಪದದ, ಒಂದೊಂದು ಅಕ್ಷರದ ಶ್ರುತಿಯ ವ್ಯತ್ಯಾಸವೂ ಅರ್ಥವನ್ನೇ ಬದಲಾಯಿಸಬಲ್ಲುದು. ಇದರ > ಪರಿಣಾಮ ಮಾತನಾಡುವ ವಾಕ್ಯದಲ್ಲಿ ಅಂತರ್ಗತವಾಗಿರುವ ಲಯವನ್ನೇ ಶಿಳ್ಳೆಯೂ ಅನುಸರಿಸುತ್ತದೆ. > ಆದರೆ, ಸ್ಪ್ಯಾನಿಷ್ ಅಥವಾ ಟರ್ಕಿಯಂತಹ ಭಾಷೆಗಳು ಸಹಜವಾಗಿಯೇ ಲಯಬದ್ಧವಾಗಿಲ್ಲ. ಇಂತಹ > ಪ್ರಕರಣಗಳಲ್ಲಿ ಶಿಳ್ಳೆ ಸ್ವರಾಕ್ಷರಗಳ ವಿಭಿನ್ನ ಧ್ವನಿಯ ಕಂಪನವನ್ನು ಅನುಕರಿಸುತ್ತದೆ. > ವ್ಯಂಜನಗಳ ವ್ಯತ್ಯಾಸಕ್ಕೆ ಅನುಗುಣವಾಗಿ ಶ್ರುತಿಯಿಂದ ಶ್ರುತಿಗೆ ಶಿಳ್ಳೆ ಹಠಾತ್ > ಏರಿಳಿತವಾಗುತ್ತದೆ. > > ವಿಭಿನ್ನ ಪದಗಳನ್ನು ಬೇರ್ಪಡಿಸಲು ಸಹಾಯವಾಗುವ ಅನೇಕ ಸಂಕೇತಗಳು ಶಿಳ್ಳೆಯಲ್ಲಿ ಇಲ್ಲ. > ಆದರೂ, ಅವುಗಳಲ್ಲಿ ಗ್ರಾಹ್ಯ ಸಂದೇಶಗಳು ಅಡಕವಾಗಿರುತ್ತವೆ ಎಂಬುದನ್ನು ಹೊರಗಿನವರು > ನಂಬುವುದೂ ಕಷ್ಟ. ನುರಿತ ಶಿಳ್ಳೆಗಾರರು ವಾಕ್ಯಗಳನ್ನು ಶೇಕಡಾ 90ಕ್ಕಿಂತಲೂ ಹೆಚ್ಚು > ನಿಖರವಾಗಿ ಗ್ರಹಿಸಬಲ್ಲರು ಎಂಬುದನ್ನು ಮೆಯೆರ್ ಕಂಡುಕೊಂಡಿದ್ದಾರೆ. ಕಿಕ್ಕಿರಿದಿರುವ > ಕೊಠಡಿಯಲ್ಲಿ ಸಂಭಾಷಣೆ ನಡೆಸುವುದಕ್ಕೆ ಅಥವಾ ಪಿಸುಮಾತನ್ನು ಅರ್ಥೈಸುವುದಕ್ಕೆ ನರಮಂಡಲ ಹೇಗೆ > ನೆರವಾಗುತ್ತದೆಯೋ ಅದೇ ರೀತಿ ಶಿಳ್ಳೆಯ ವಿಚಾರದಲ್ಲೂ ಆಗುತ್ತದೆ ಎಂದು ಅವರು > ವಿವರಿಸುತ್ತಾರೆ. > >  > > (ಚಿತ್ರ: ವಿಜಯ ಕುಮಾರಿ ಆರ್.) > > ‘ಅಡಚಣೆಗಳಿಂದ ಕರ್ಕಶವಾಗುವ ಪದಗಳ ಮರುಜೋಡಿಸುವ ಸಾಮರ್ಥ್ಯವನ್ನು ಮಿದುಳು ಹೊಂದಿದೆ’ > ಎನ್ನುತ್ತಾರೆ ಅವರು. ಬರವಣಿಗೆಯಲ್ಲೂ ಇದನ್ನು ಗಮನಿಸಬಹುದು. ಇಂಗ್ಲಿಷ್ ಭಾಷೆಯ ಅಕ್ಷರಗಳು > ಅದಲುಬದಲಾದರೂ, ಅಥವಾ ಕೆಲವೊಂದು ಸ್ವರಾಕ್ಷರಗಳನ್ನು ಕೈಬಿಟ್ಟರೂ ಮಿದುಳು ಅದನ್ನು > ಸರಿಮಾಡಿಕೊಂಡು ಓದುತ್ತದೆ. > > ಈ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನ ನಡೆದದ್ದೇ ಆದರೆ, ನರರೋಗ ತಜ್ಞರು > ಮಿದುಳಿನ ಸಂರಚನೆಯ ಕುರಿತ ಗ್ರಹಿಕೆಯ ಬಗ್ಗೆಯೇ ಮರುಚಿಂತನೆ ನಡೆಸಬೇಕಾಗುತ್ತದೆ. > > ದಶಕಗಳ ಕಾಲ ಮಿದುಳಿನ ಪ್ರತಿಯೊಂದು ಪಾರ್ಶ್ವವೂ ನಿರ್ದಿಷ್ಟ ಸವಾಲುಗಳನ್ನು ನಿಭಾಯಿಸಲು > ಸೀಮಿತವಾಗಿದೆ ಎಂದೇ ಸಂಶೋಧಕರು ಗ್ರಹಿಸಿದ್ದರು. ಭಾಷೆ ಕುರಿತ ಕ್ರಿಯೆಗಳು ನಡೆಯುವುದು ಎಡ > ಪಾರ್ಶ್ವದಲ್ಲಿ ಮಾತ್ರ ಎಂಬ ಗ್ರಹಿಕೆ ಈಗಲೂ ಇದೆ. ಈ ಗ್ರಹಿಕೆ ಶಿಳ್ಳೆಗಳ ವಿಚಾರದಲ್ಲೂ > ಅನ್ವಯವಾಗುತ್ತದೆಯೇ ಎಂಬುದನ್ನು ಪರೀಕ್ಷಿಸಲು ಜರ್ಮನಿಯ ಬೋಚುಂನ ರುಹ್ರ್ > ವಿಶ್ವವಿದ್ಯಾಲಯದ ಗುಂಟುರ್‌ಕುನ್ ಬಯಸಿದರು. > > ಹಕ್ಕಿಗಳ ಗ್ರಾಮ > ಈ ಬಗ್ಗೆ ಶೋಧ ಆರಂಭಿಸಿದ ಗುಂಟುರ್‌ಕುನ್, ಕಪ್ಪು ಸಮುದ್ರದ ಬಳಿಯ ಕಣಿವೆಯೊಂದರಲ್ಲಿರುವ > ಕುಸ್ಕೋಯ್‌ಗೆ, ಅಂದರೆ ಹಕ್ಕಿಗಳ ಗ್ರಾಮಕ್ಕೆ ಪ್ರಯಾಣ ಬೆಳೆಸಿದರು. > > ‘ಸಿಲ್ಬೊ ಗೊಮೆರೊ’ದ ಜನರಂತೆಯೇ ಇಲ್ಲೂ ಕುರಿಗಾಹಿಗಳು ಪರ್ವತಗಳ ಪ್ರಸ್ಥಭೂಮಿಯಲ್ಲಿ ಸಂದೇಶ > ರವಾನೆಗಾಗಿ ಶಿಳ್ಳೆ ಹೊಡೆಯುತ್ತಾರೆ. ಈ ಕಣಿವೆಯಲ್ಲಿ ಧುಮ್ಮಿಕ್ಕುವ ನದಿಯ ಗರ್ಜನೆಯ > ನಡುವೆಯೂ ಸಂವಹನ ನಡೆಸುವುದಕ್ಕೆ ಮೀನುಗಾರರು ಶಿಳ್ಳೆಯನ್ನೇ ಬಳಸುತ್ತಾರೆ. ಶಿಳ್ಳೆಯ ಮೂಲಕ > ನಡೆಯುವ ಸಂಭಾಷಣೆಯನ್ನು ಮೊದಲ ಬಾರಿ ವೀಕ್ಷಿಸಿದಾಗ ಆದ ರೋಮಾಂಚನವನ್ನು ಗುಂಟುರ್‌ಕುನ್ > ಅವರು ಇನ್ನೂ ಮರೆತಿಲ್ಲ. > > ‘ಮಾಮೂಲಿ ಭಾಷೆಗಿಂತ ವಿಭಿನ್ನವಾದ, ಸಾಕಷ್ಟು ಅರ್ಥಪೂರ್ಣವಾದ ಸಂಭಾಷಣೆಯನ್ನು ಆಲಿಸಿದಾಗ > ನನ್ನೆದುರು ಜಾದೂ ನಡೆಯುತ್ತಿದೆಯೇನೋ ಎಂದು ಅನಿಸಿತ್ತು’ ಎನ್ನುತ್ತಾರೆ ಅವರು. > > ಭಾರಿ ಗಾತ್ರವನ್ನು ಹೊಂದಿರುವ ಬ್ರೈನ್ ಸ್ಕ್ಯಾನರ್ ಉಪಕರಣವನ್ನು ಜರ್ಮನಿಯಿಂದ ಈ > ಕುಗ್ರಾಮಕ್ಕೆ ಕೊಂಡೊಯ್ಯುವುದು ಸುಲಭವಾಗಿರಲಿಲ್ಲ. ಹಾಗಾಗಿ ಗುಂಟುರ್‌ಕುನ್ ಅವರು > ಒಬ್ಬೊಬ್ಬರ ಕಿವಿಯಲ್ಲಿ ಬೇರೆ ಬೇರೆ ಅಕ್ಷರವನ್ನು ಉಸುರಿ, ಏನು ಕೇಳಿಸಿತು ಎಂದು ಅವರಿಂದ > ಹೇಳಿಸುವ ಸರಳವಾದ ಶ್ರವಣ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದರು. ಎಡ ಕಿವಿಯಲ್ಲಿ > ಕೇಳಿಸಿಕೊಂಡರೆ ಅದು ಮಿದುಳಿನ ಬಲಭಾಗವನ್ನು ತಲುಪುತ್ತದೆ. ದೇಹದ ಈ ವಿಶಿಷ್ಟ ವ್ಯೂಹ > ವ್ಯವಸ್ಥೆಯನ್ನು ಕೇಂದ್ರೀಕರಿಸಿ ಅವರ ಪ್ರಯೋಗ ನಡೆದಿತ್ತು. > > ಬಲಕಿವಿಯಲ್ಲಿ ಕೇಳಿಸಿಕೊಂಡ ಅಕ್ಷರವು ಮಿದುಳಿನ ಹೆಚ್ಚು ಶಕ್ತಿಯುತವಾದ ಎಡಪಾರ್ಶ್ವಕ್ಕೆ > ತಕ್ಷಣ ರವಾನೆಯಾಗುತ್ತದೆ. ಹಾಗಾಗಿ ಅದು ಹೆಚ್ಚು ಗಮನ ಸೆಳೆಯಬೇಕು. ಎಡ ಕಿವಿಯಲ್ಲಿ ‘ಫ’ > ಎಂದು ಹಾಗೂ ಬಲಕಿವಿಯಲ್ಲಿ ‘ಠ’ ಎಂದು ಉಸುರಿದರೆ ನಿಮಗೆ ‘ಠ’ ಮಾತ್ರ ಕೇಳಿಸುತ್ತದೆ. > ಏಕೆಂದರೆ ಭಾಷಾ ಪ್ರಕ್ರಿಯೆ ನಡೆಯುವ ಎಡಪಾರ್ಶ್ವಕ್ಕೆ ಅದು ತಕ್ಷಣ ತಲುಪುತ್ತದೆ. ಈಗಿನ > ಸಿದ್ಧಾಂತ ಇರುವುದೇ ಹೀಗೆ. ಆದರೆ, ಗುಂಟುರ್‌ಕುನ್ ಶಿಳ್ಳೆಯ ರೂಪದ ಸ್ವರ ಹೊರಡಿಸಿದಾಗ > ಕುಸ್ಕೋಯ್ ಜನರಿಗೆ ಹಾಗೆ ಆಗಲೇ ಇಲ್ಲ. ಎರಡು ಕಿವಿಗಳಲ್ಲಿ ಉಸುರಿದ ಶಿಳ್ಳೆಯ ಸ್ವರಗಳನ್ನೂ > ಅವರು ಪ್ರತ್ಯೇಕವಾಗಿ ಗುರುತಿಸಿದರು. ಸಂಕೇತಗಳನ್ನು ಗ್ರಹಿಸುವಾಗ ಮಿದುಳಿನ ಎರಡೂ > ಪಾರ್ಶ್ವಗಳೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದು ಕಂಡುಬಂತು. ‘ಮಿದುಳಿನ ಅಸಮ ಪಾರ್ಶ್ವದ > (ಎರಡು ಪಾರ್ಶ್ವಗಳು ಒಂದೇ ಸಮ ಇಲ್ಲ) ಸಿದ್ಧಾಂತ ಇಲ್ಲಿ ಸೋತುಹೋಯಿತು. ಎರಡೂ ಪಾರ್ಶ್ವಗಳು > ಕೆಲಸವನ್ನು ಸಮನಾಗಿ ಹಂಚಿಕೊಂಡವು’ ಎನ್ನುತ್ತಾರೆ ಗುಂಟುರ್‌ಕುನ್. > > 2015ರಲ್ಲಿ ಪ್ರಕಟವಾದ ಈ ಫಲಿತಾಂಶ, ಮಿದುಳು ಒಗ್ಗಿಕೊಳ್ಳುವ ಸಾಮರ್ಥ್ಯವನ್ನು > ಶ್ರುತಪಡಿಸುವುದಕ್ಕೆ ಮಾತ್ರ ಸೀಮಿತ ಅಲ್ಲ. ಪಾರ್ಶ್ವವಾಯುವಿಗೆ ಒಳಗಾದ ರೋಗಿಗಳು ಆ ಬಳಿಕವೂ > ಬದುಕನ್ನು ಮತ್ತೆ ಕಟ್ಟಿಕೊಳ್ಳುವುದಕ್ಕೂ ಇದು ನೆರವಾಗಬಲ್ಲುದು. ಎಡ ಪಾರ್ಶ್ವ > ಹಾನಿಗೊಳಗಾದರೆ ಕೆಲವರು ಮಾತನಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಆದರೆ, ಅವರು > ಶಿಳ್ಳೆಯ ಭಾಷೆಯ ಮೂಲಕ ಮಾತನಾಡಬಹುದು ಎಂಬ ಸಾಧ್ಯತೆಯನ್ನು ಗುಂಟುರ್‌ಕುನ್ ಅವರು ಕಂಡುಕೊಂಡ > ಅಂಶಗಳು ತೋರಿಸಿಕೊಟ್ಟಿವೆ. > > ಈ ಗ್ರಾಮದ ಹೊರಗಿನ ವ್ಯಕ್ತಿಗಳೂ ‘ಹಕ್ಕಿಗಳ ಭಾಷೆ’ಯನ್ನು ನಿರಂತರವಾಗಿ ಆಲಿಸಿದರೆ, ಅದನ್ನು > ಕಲಿಯಲು ಸಾಧ್ಯವಿದೆ. ಗುಂಟುರ್‌ಕುನ್ ಅವರು ಪ್ರವಾಸ ಮುಗಿಸಿ ಹಿಂತಿರುಗುವ ವೇಳೆ ಅವರು > ಸ್ಥಳೀಯರು ಸಂಭಾಷಣೆಗೆ ಬಳಸುವ ಶಿಳ್ಳೆ ಭಾಷೆಯ ಕೆಲವು ವಿಶಿಷ್ಟ ಪದಗಳನ್ನು ಗುರುತಿಸಲು > ಸಾಮರ್ಥ್ಯ ಗಳಿಸಿದ್ದರು. > > ‘ಶಿಳ್ಳೆ ಭಾಷೆಯ ಬಗ್ಗೆ ಗಂಧಗಾಳಿ ಇಲ್ಲದವರೂ ಅದರ ನಿರ್ದಿಷ್ಟ ಸ್ವರವು ಯಾವುದಕ್ಕೆ > ಸಂಬಂಧಿಸಿದ್ದು ಎಂಬುದನ್ನು ಕಲಿಯಬಲ್ಲರು. ಇದಕ್ಕೆ ಕುಸ್ಕೋಯ್ ಜನರಂತೆ ಹಕ್ಕಿಗಳ ಭಾಷೆ > ಕಲಿಯಲು ಆ ಪ್ರದೇಶದಲ್ಲೇ ಹುಟ್ಟಿಬೆಳೆಯಬೇಕಾಗಿಲ್ಲ’ ಎಂದು ಮೆಯೆರ್ ಅವರು ಅಧ್ಯಯನದ ಮೂಲಕ > ಕಂಡುಕೊಂಡಿದ್ದರು. ಗುಂಟುರ್‌ಕುನ್ ಅವರ ಅನುಭವವು ಇದನ್ನೂ ಪುಷ್ಟೀಕರಿಸುವಂತಿದೆ. > > ಶಿಳ್ಳೆಯ ಭಾಷೆ ಸಂಗೀತದ ಬಗ್ಗೆ ಅಧ್ಯಯನ ನಡೆಸುತ್ತಿರುವ ನರವಿಜ್ಞಾನಿಗಳ ಕುತೂಹಲವನ್ನೂ > ಕೆರಳಿಸಿದೆ. ಭಾಷೆ ಮತ್ತು ಸಂಗೀತಗಳೆರಡೂ ಮಿದುಳಿನ ಒಂದೇ ಭಾಗದಲ್ಲಿ ಗ್ರಹಿಸಲ್ಪಡುತ್ತವೆ > ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗುತ್ತಿವೆ. > > ಮಾನವನ ಭಾಷೆ ಬೆಳೆದುಬಂದ ಹಾದಿಯು ದೊಡ್ಡ ಜಿಗಿತಗಳ ಬದಲು ಸಣ್ಣ ಸಣ್ಣ ಹೆಜ್ಜೆಗಳನ್ನು > ಒಳಗೊಂಡಿದೆ. ಈ ಆಲೋಚನೆ ವಿಕಾಸವಾದದ ಬೆನ್ನುಹತ್ತಿದ ಜೀವವಿಜ್ಞಾನಿಗಳಿಗೆ ಹೆಚ್ಚು > ಆಕರ್ಷಕವಾಗಿ ಕಾಣಿಸಿದೆ. ಆಖಾ ಹಾಗೂ ಹಮಂಗ್ ಜನರ ಸಂಸ್ಕೃತಿಯನ್ನು ಗಮನಿಸಿದರೆ, ಆದಿ ಭಾಷೆ > ಸಂಗೀತದ ಬದಲು ಶಿಳ್ಳೆಯೇ ಆಗಿರಬಹುದೋ ಏನೋ ಎಂದೆನಿಸುತ್ತದೆ! > > ಮೆಯೆರ್ ಅವರ ಸಂಶೋಧನೆ ಒಂದನ್ನಂತೂ ಖಚಿತವಾಗಿ ಶ್ರುತಪಡಿಸುತ್ತದೆ. ಬಹುದೂರದವರೆಗೆ ಸಂವಹನ > ನಡೆಸಲು ಬೇಟೆ ಹಾಗೂ ಭಕ್ಷಕ ಪ್ರಾಣಿಗಳ ಗಮನಕ್ಕೆ ಬಾರದಂತೆ ಸಂವಹನ ನಡೆಸಲು ಶಿಳ್ಳೆ ಭಾಷೆ > ಸೂಕ್ತ. ಈ ಅನುಕೂಲಗಳು ನಮ್ಮ ಪೂರ್ವಜರು ಬದುಕುಳಿಯುವುದಕ್ಕೂ ನೆರವಾಗಿರಬಹುದು. ಕ್ರಮೇಣ > ಮನುಷ್ಯ ಧ್ವನಿಪೆಟ್ಟಿಗೆ ಮೇಲೆ ಹಿಡಿತ ಸಾಧಿಸಿರಬಹುದು. ಮಾನವನ ಬೆಳವಣಿಗೆಯ ಸಮಗ್ರ > ಸಂಪುಟವನ್ನು ಪರಿಗಣಿಸಿದರೆ ಶಿಳ್ಳೆಯ ಭಾಷೆಗೆ ಅದರದ್ದೇ ಆದ ಮಹತ್ವವಿದೆ. > ಆದರೆ, ಚಿಂತನೆ ಬಗ್ಗೆ ವೈಜ್ಞಾನಿಕವಾಗಿ ಒಮ್ಮತವಿಲ್ಲ. > > ಆಧುನೀಕರಣದ ಕಬಂಧಬಾಹು ಎಲ್ಲೋ ಕಾಡಿನ ಮೂಲೆಯಲ್ಲಿರುವ ಸಮುದಾಯಗಳನ್ನೂ > ಆಕ್ರಮಿಸಿಕೊಳ್ಳುತ್ತಿರುವಾಗ ಇಂತಹ ಭಾಷೆಗಳನ್ನು ಕಾಪಾಡಲು ತಕ್ಷಣವೇ ಮುಂದಾಗಬೇಕಾಗುತ್ತದೆ. > ಇತಿಹಾಸದ ಈ ಮಾರ್ದನಿಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಮುನ್ನವೇ ನಾವು > ಎಚ್ಚೆತ್ತುಕೊಳ್ಳಬೇಕು. > ಸಿದ್ದರಾಮಪ್ಪ. ಎಸ್.ಎಂ > ಸ ಶಿ ಸಪ್ರೌ ಶಾಲೆ ಗಂಜಿಗೆರೆ > ಕೆ ಆರ್ ಪೇಟೆ ತಾ ಮಂಡ್ಯ ಜಿಲ್ಲೆ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
