ಇಂದು ವಿಶ್ವ ಜನಸಂಖ್ಯಾ ದಿನ ತನ್ನಿಮಿತ್ತ ನಾನು ಬರೆದ ಲೇಖನ

ವಿಶ್ವ ಭೂಪಟದಲ್ಲಿ ಭಾರತದ ಜನಸಂಖ್ಯೆ



ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಟಿ ಆರ್ ಮಾಲ್ಥಾಸ್ ರವರ ಹೇಳಿಕೆಯಂತೆ ಪ್ರಪಂಚದ
ಜನಸಂಖ್ಯೆಯು ಗುಣಾಕಾರದಲ್ಲಿ ಬೆಳೆಯುತ್ತಿದ್ದರೆ ಸಂಪನ್ಮೂಲಗಳು ಸಂಕಲನ ರೂಪದಲ್ಲಿ
ಬೆಳೆಯುತ್ತಿವೆ ಅದಕ್ಕೆ ಪ್ರಸ್ತುತ ನಮ್ಮ ಪ್ರಪಂಚದ ಜನಸಂಖ್ಯೆಯು ೭೫೦ ಕೋಟಿ ತಲುಪಿದ್ದು
೨೦೩೦ಕ್ಕೆ ೮೫೦ ಕೋಟಿ ತಲುಪುತ್ತಿರುವುದೇ ಸಾಕ್ಷಿ .

ಕಳೆದ ೧೭ವರ್ಷಗಳಿಂದ ಪ್ರತಿ ವರ್ಷವೂ ಜೂನ್ ೧೧ ರಂದು ವಿಶ್ವಜನಸಂಖ್ಯಾ ದಿನಾಚರಣೆಯನ್ನು
ಆಚರಿಸಲಾಗುತ್ತಿದೆ ಆದರೂ ಬಹುತೇಕ ಜನರಿಗೆ ಈ ಜನಸಂಖ್ಯಾ ದಿನದ ಮಹತ್ವ ಮತ್ತು ಅದರ
ಆಶೊತ್ತರಗಳನ್ನು ಅರಿಯದೇ ಹೋಗಿರುವುದು ದುರದೃಷ್ಟಕರ.

ಜಗತ್ತಿನ ಜನಸಂಖ್ಯೆ ಕ್ಷಣ ಕ್ಷಣವೂ ಹೆಚ್ಚುತ್ತಲೇಇದೆ ಇದು ಹಲವಾರು ಸಮಸ್ಯೆಗಳ ಮೂಲವಾಗಿದೆ .
"ಸುರಕ್ಷಿತ ಮತ್ತು ಸ್ವಯಂಪ್ರೇರಿತವಾಗಿ ಕುಟುಂಬ ಯೋಜನೆ ಒಂದು ಮಾನವ ಹಕ್ಕು, ಇದು
ಲಿಂಗಸಮಾನತೆ ಮತ್ತು ಮಹಿಳಾ ಸಬಲೀಕರಣದಲ್ಲಿಪ್ರಮುಖ ಅಂಶ ಹಾಗೂ ಬಡತನವನ್ನು ನಿರ್ಮೂಲನೆ
ಮಾಡಲು ನಮಗಿರುವ ಅಸ್ತ್ರ" ಎಂದು ವೀಶ್ವ ಸಂಸ್ಥೆ ಘೋಷಣೆ ಮಾಡಿ ವರ್ಷಗಳೇ ಕಳೆದರೂ ನಿರೀಕ್ಷಿತ
ಬದಲಾವಣೆ ಆಗಿಲ್ಲ ಇದನ್ನು ಮನಗಂಡು ಈ ವರ್ಷವೂ ವಿಶ್ವಸಂಸ್ಥೆಯ ಜನಸಂಖ್ಯೆ ದಿನದ
ದ್ಯೇಯವಾಕ್ಯವಾಗಿ "ಕುಟುಂಬ ಯೋಜನೆ, ಜನರ ಸಬಲೀಕರಣ,ರಾಷ್ಟ್ರಗಳ ಅಭಿವೃದ್ಧಿ"(family
planning empowering people, developing nations) ಎಂದು ಆಯ್ಕೆ ಮಾಡಿಕೊಂಡಿದೆ .

ಈಗಿನ ಆಧುನಿಕತೆಯ ಕಾಲದಲ್ಲಿ ನಾವೆಷ್ಟೆ ತಿಳುವಳಿಕೆ  ಹೊಂದಿದ್ದರೂ ಕುಟುಂಬ ಕಲ್ಯಾಣ
,ನಿರೋಧ್ ,ವಂಕಿ ಮುಂತಾದವುಗಳ ಬಗ್ಗೆ ಮಾತನಾಡುವಾಗ ಮುಜುಗರ ಅನುಭವಿಸುತ್ತಿರುವ ಉದಾಹರಣೆಗಳು
ನಮ್ಮ ಮುಂದಿರುವಾಗ ಇನ್ನೂ ಅನಕ್ಷರಸ್ಥ ಜನರ ಪಾಡು ನೀವೆ ಊಹಿಸಿ.

ಕುಟುಂಬ ಯೋಜನೆಯು‌ ಜನರ ಸಬಲೀಕರಣ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿರುವುದು ಕೆಲ
ಮುಂದುವರಿದ ದೇಶಗಳ ನೋಡಿದರೆ ನಮಗೆ ಅರಿವಾಗುತ್ತದೆ.

ಒಂದು ಕಾಲದಲ್ಲಿ ಜನಸಂಖ್ಯೆಯು ಆ ದೇಶದ ಎಲ್ಲಾ ಸಮಸಗಳಿಗೆ ಕಾರಣವೆಂದು ತಿಳಿಯಲಾಗಿತ್ತು
 ಅದರಲ್ಲಿ ನಿರುದ್ಯೋಗವು ಒಂದು ಆದರೆ ಇಂದಿನ ಆಟೋಮೇಷನ್ ಯುಗದಲ್ಲಿ ಮತ್ತು ಕೃತಕ
ಬುದ್ಧಿಮತ್ತೆ (artificial intelligence) ಪರಿಣಾಮವಾಗಿ  ನಿರುದ್ಯೋಗವು ಸೃಷ್ಟಿ
ಆಗಿರುವುದು ಕಂಡುಬರುತ್ತದೆ

ಆದ್ದರಿಂದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲ ಆಗಿ ಪರಿವರ್ತನೆ ಮಾಡಿದರೆ ಬಹುತೇಕ
ಸಮಸ್ಯೆಗಳನ್ನು ಪರಿಹರಿಸಬಹುದು .ನಮ್ಮ ಪ್ರಸ್ತುತ ಪ್ರದಾನ ಮಂತ್ರಿಗಳಾದ ಮೋದೀಜಿಯವರು
ಹೇಳುವಂತೆ ನಮ್ಮ ದೇಶದ ೧೨೭ ಕೋಟಿ ಜನಸಂಖ್ಯೆಯು ನಮ್ಮ ಶಕ್ತಿ  ಈ ಶಕ್ತಿಯನ್ನು ಸಂಪೂರ್ಣವಾಗಿ
ಬಳಕೆ ಮಾಡಿಕೊಂಡು ಇಂದಿನ ಸಮಾಜದಲ್ಲಿ ಇರುವ ಕೆಲ ಸಮಸ್ಯೆಗಳನ್ನು ಬಗೆಹರಿಸಲ ಪ್ರಾಮಾಣಿಕ
ಪ್ರಯತ್ನವನ್ನು ಮಾಡಿದರೆ ನಮ್ಮ ದೇಶದ ಜನಸಂಖ್ಯೆಯು ಶಾಪವಾಗುವ ಬದಲಿಗೆ ವರವಾಗುವುದರಲ್ಲಿ
ಸಂದೆಹವಿಲ್ಲ .

ಸಿ.ಜಿ.ವೆಂಕಟೇಶ್ವರ

ಗೌರಿಬಿದನೂರು

೯೯೦೦೯೨೫೫೨೯

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
For more options, visit https://groups.google.com/d/optout.

Reply via email to