ಆತ್ಮೀಯ ಶಿಕ್ಷಕ ಬಂಧುಗಳೇ,

ಶೈಕ್ಷಣಿಕ ಸಂಪನ್ಮೂಲ ಹಂಚಿಕೆ ಮತ್ತು ವಿಚಾರವಿನಿಮಯಗಳ ಮೂಲಕ ಶಿಕ್ಷಕರ ವೃತ್ತಿಪರ ಬೆಳವಣಿಗಾಗಿ ಸೃಷ್ಟಿಯಾದ ವಿಷಯ ಶಿಕ್ಷಕರ ವೇದಿಕೆಯಲ್ಲಿ ಇತ್ತೀಚೆಗೆ ಶೈಕ್ಷಣಿಕವಲ್ಲದ ವಿಷಯಗಳ ಇಮೇಲ್ ಗಳೇ ಹೆಚ್ಚು ಹರಿದಾಡುತ್ತಿರುವುದನ್ನು ಗಮನಿಸುತ್ತಿದ್ದೀರಿ. ವರ್ಗಾವಣೆ, ಇಮೇಲ್ ಗುಂಪಿಗೆ ಸೇರಲು ಕೋರಿಕೆ, ವಾಟ್ಸಪ್ ಗುಂಪಿಗೆ ಸೇರಲು ಕೋರಿಕೆಗಳ ಇಮೇಲ್‌ಗಳೇ ಹೆಚ್ಚಾಗಿವೆ.

STF ಇಮೇಲ್ ಗುಂಪಿಗೆ ಅಥವಾ ವಾಟ್ಸಪ್ /ಟೆಲಿಗ್ರಾಮ್/ಹೈಕ್ ಗುಂಪಿಗೆ ಸೇರಲು ಅಥವಾ ತಮ್ಮ ಸಹೋದ್ಯೋಗಿಗಳನ್ನು ಸೇರಿಸಲು STF ಗುಂಪಿನಲ್ಲಿ ಇಮೇಲ್ ಕಳುಹಿಸುವ ಬದಲು ಈ ಕೆಳಗಿನಂತೆ ಅನುಸರಿಸಿ :- ೧. ನೀವು ಬೋಧಿಸುವ ವಿಷಯದ STF ಗುಂಪಿನಲ್ಲಿ ಸದಸ್ಯರಾಗಲು ಅಥವಾ ನಿಮ್ಮ ಸ್ನೇಹಿತರನ್ನು ಈ ವೇದಿಕೆ ಸೇರ್ಪಡೆಗೊಳಿಸಲು ಈ ಗೂಗಲ್ ಫಾರಂ ಅನ್ನು ಭರ್ತಿಮಾಡಿ ರವಾನಿಸಿರಿ.ಒಂದು ವಾರದ ಒಳಗಾಗಿ ನಿಮ್ಮನ್ನು ಗುಂಪಿಗೆ ಸೇರಿಸಲಾಗುತ್ತದೆ. ಗೂಗಲ್ ಫಾರ್ಮ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ
https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform

ನೀವು ವಾಟ್ಸಪ್‌ ಗುಂಪು ಸೇರಲು ಬಯಸಿದರೆ ದಯವಿಟ್ಟು ಆ ವಾಟ್ಸಪ್ ಗುಂಪಿನ ವ್ಯವಸ್ಥಾಪಕರ ಪೋನ್ ನಂಬರ್‌ಗೆ ಅಥವಾ ಇಮೇಲ್ ಗೆ ಮಾತ್ರವೇ ಮನವಿ ಕಳುಹಿಸಿರಿ. ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ WhatsApp,Hike,teligram ಗುಂಪುಗಳ ಪಟ್ಟಿಯನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ . https://docs.google.com/spreadsheets/d/1zDz-tx6BgQcgV5bJm5n1u7QgqWhrOQWh8Rj1773ew2g/edit#gid=654293179

ಈ ಪಟ್ಟಿಯಲ್ಲಿರುವ ಗುಂಪುಗಳನ್ನು ಸೇರಲು ಆಯಾ ಗ್ರೂಪ್ ನ ಅಡ್ಮಿನ್ ರವರ ಮೊಬೈಲ್ ಸಂಖ್ಯೆಗೆ ನಿಮ್ಮ ಪೂರ್ಣ ಹೆಸರು, ನಿಮ್ಮ ಶಾಲಾ / ಸಂಸ್ಥೆ ಹೆಸರು , ನೀವು ಬೋಧಿಸುವ ವಿಷಯ, ಜಿಲ್ಲಾ/ತಾಲೂಕಿನ ಹೆಸರು, ಮೊಬೈಲ್ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಯನ್ನು ಒಳಗೊಂಡ ಸಂದೇಶವನ್ನು ರವಾನಿಸಿ.(ಇದಕ್ಕೆ ಮೇಲ್ ಮಾಡುವ ಅಗತ್ಯವಿಲ್ಲ). ಇದಕ್ಕೆ ಪೂರಕವಾಗಿ WhatsApp,Hike,telegram ಗುಂಪುಗಳ ಅಡ್ಮಿನ್ ಗಳು ತಮ್ಮ ಗುಂಪುಗಳ ಬಗೆಗೆ ಮಾಹಿತಿ ನೀಡಬಹುದು, ಈ ಮೂಲಕ ಇನ್ನು ಹೆಚ್ಚಿನ ಶಿಕ್ಷಕರಿಗೆ ಈಗಾಗಲೇ ಚಾಲನೆಯಲ್ಲಿರುವ ಗುಂಪುಗಳ ಮಾಹಿತಿ ದೊರೆಯುತ್ತದೆ. ಅಡ್ಮಿನ್‌ಗಳು ತಮ್ಮ ಗುಂಪುಗಳ ಬಗೆಗೆ ಮಾಹಿತಿ ನೀಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
 
https://docs.google.com/forms/d/1u4m3U9J9Xq7m3sXjkAiVmAOHoGRtS3cufSNVBec253o/viewform


ಶಿಕ್ಷಕರಾದ ನಾವೆಲ್ಲಾ ವಿಷಯ ಶಿಕ್ಷಕರ ವೇದಿಕೆಯಿಂದ ಒಂದಲ್ಲಾ ಒಂದು ರೀತಿಯ ಉಪಯೋಗ ಪಡೆಯುತ್ತಿದ್ದೇವೆ. STF ಸಮುದಾಯವು ವಿಶಾಲವಾಗಿದ್ದು. ಇಷ್ಟ ವಿಶಾಲವಾಗಿ ಬೆಳೆಯುವಲ್ಲಿ ನಮ್ಮೆಲ್ಲರ ಶ್ರಮ ಮತ್ತು ಪ್ರಯತ್ನ ಬಹಳ ಪ್ರಮುಖವಾದದ್ದು. STF ಸಮುದಾಯವು ಜಾಗತಿಕ ಮಟ್ಟದಲ್ಲಿ ಬೃಹತ್ ಸ್ವರೂಪದ ವೃತ್ತಿಪರಕಲಿಕಾ ಸಮುದಾಯವಾಗಿದ್ದು, ಇದನ್ನು ಕಲಿಕಾ ವೇದಿಕೆಯಾಗಿ ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ವಿಷಯ ಶಿಕ್ಷಕರ ವೇದಿಕೆ ಸಮೂದಾಯವು ಗ್ರಾಮ ಸಭೆಯಂತೆ ಕಾರ್ಯ ನಿರ್ವಹಿಸುತ್ತಿದ್ದು ಪ್ರತಿಯೊಬ್ಬ ಶಿಕ್ಷಕರು ತಮ್ಮ ಶಾಲಾ ಸಮಸ್ಯೆ, ಸಾಮಾಜಿಕ ಶೈಕ್ಷಣಿಕ ಸಮಸ್ಯೆ, ಶೈಕ್ಷಣಿಕ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತ ಪಡಿಸುವ, ಹಂಚಿಕೊಳ್ಳುವ, ಮುಕ್ತವಾಗಿ ಚರ್ಚಿಸುವ ಮತ್ತು ಪ್ರಶ್ನಿಸುವ ಹಕ್ಕನ್ನು ಹೊಂದಿರುತ್ತಾರೆ. ಇದರಲ್ಲಿ ತುಂಬಾ ಉಪಯುಕ್ತ ಸಂಪನ್ಮೂಲಗಳನ್ನು ಹಂಚಿಕೆಯಾಗುತ್ತಿವೆ ಮತ್ತು ಅನೇಕ ಶಿಕ್ಷಕರು ಇದರಿಂದ ನೇರ ಉಪಯೋಗವನ್ನು ಪಡೆದು ಕೊಂಡಿದ್ದಾರೆ. ಬೃಹತ್ ಸಂಖ್ಯೆಯ ಶಿಕ್ಷಕರು ಈ ವೇದಿಕೆಯಲ್ಲಿದ್ದು, ಒಮ್ಮೊಮ್ಮೆ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗು ಆದರಿಂದ ನಾವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ಮೂಲಕ ಪ್ರತಿಯೊಬ್ಬರು ತಾಳ್ಮೆಯಿಂದಿದ್ದು ಪ್ರತಿಯೊಬ್ಬರ ಕಲಿಕೆಗೆ ಅವಕಾಶ ನೀಡಬೇಕಿದೆ.

ವಿಷಯ ಶಿಕ್ಷಕರ ವೇದಿಕೆಯಲ್ಲಿನ ಇಮೇಲ್ ಗಳನ್ನು ಪರಿಣಾಮಕಾರಿಗೊಳಿಸಲು ಕೆಲವು ಮಾರ್ಗ ಸೂಚಿಗಳನ್ನು ಸಲಹೆ ನೀಡಲಾಗಿದ್ದು, ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದಾಗಿದೆ.
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

ಈ ಬಗ್ಗೆ ತಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ತಿಳಿಸಿ.

ಧನ್ಯವಾದಗಳು
--

*ವೆಂಕಟೇಶ್ ಟಿ ಗೌಡ Venkatesh T Gowda *|
Programme Associate | <http://www.ITforChange.net/>IT for Change <http://www.itforchange.net/> (/In special consultative status with the United Nations ECOSOC) //91-80-26654134 | 9945147359 | Fax 91-80-41461055
Email: venkat...@itforchange.net/
Blog: http://geluvejeevana.blogspot.in////
ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ 
ಪಡೆಯೋಣ...
“Let children be children,” “The work of a child is to play,” and “Children learn best through play.”//////////

--
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/98a72d38-7a36-0f32-5c6d-1c2527d06b52%40gmail.com.
For more options, visit https://groups.google.com/d/optout.

Reply via email to