Super madam On 22 Mar 2017 11:04 p.m., "garjilingappa k" <garji1...@gmail.com> wrote:
> Super madam > On 22-Mar-2017 10:23 PM, "Sameera samee" <mehak.sa...@gmail.com> wrote: > >> ಕನ್ನಡ ಅನುವಾದ...""ವಿಚ್ಚೇದನಕ್ಕೂ ಮುನ್ನ"" >> ನೀವು ಮದುವೆಯಾಗಿರಿ, ಅಥವಾ ಆಗದೇ ಇರಿ..ತಪ್ಪದೇ ಈ ಕಥೆಯನ್ನು ಒಮ್ಮೆ ಪೂರ್ತಿಯಾಗಿ ಓದಿ... >> >> ನಾನು ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಾಗ ನನ್ನ ಹೆಂಡತಿ ನಗುತ್ತಾ ಬಾಗಿಲು ತೆಗೆದು ಊಟ >> ಬಡಿಸಿದಳು..ನಾನು ಅವಳ ಕೈ ಹಿಡಿದು ನಿನ್ನ ಹತ್ತಿರ ಒಂದು ವಿಷಯ ಹೇಳಬೇಕು ಎಂದೇ..ಅವಳು >> ನಿಧಾನವಾಗಿ ಕೆಳಗೆ ಕುಳಿತು ಹೇಳಿ ಎಂದು ಸಣ್ಣದ್ವನಿಯಲ್ಲಿ ಕೇಳಿದಳು..ಅವಳ ಕಣ್ಣನ್ನು ತುಂಬ >> ಹತ್ತಿರದಿಂದ ನೋಡಿದಾಗ ಅವಳಿಗೆ ಏನೋ ನೋವಿರುವುದು ಗೊತ್ತಾಯಿತು..ಆದರೆ ನಾನು ನನ್ನ ಮಾತನ್ನು >> ಮುಂದುವರೆಸಿ..ನನಗೆ ನಿನ್ನಿಂದ ವಿಚ್ಚೇದನ ಬೇಕು, ನಾನು ರಾಣಿ ಎಂಬುವಳನ್ನು >> ಪ್ರೇಮಿಸುತ್ತಿದ್ದಿನಿ..ಅವಳನ್ನು ಮದುವೆಯಾಗಬೇಕು ಎಂದೇ ಅಷ್ಟೆ.. ಆ ರಾತ್ರಿ ಇಡೀ ಇಬ್ಬರೂ >> ಮೌನ, ಅವಳು ಅಳುತ್ತಿದ್ದರೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ..ಹೋಗಿ ಮಲಗಿ ಬಿಟ್ಟೆ.. ಮಾರನೇ >> ದಿನ ಎದ್ದಾಗ ಮತ್ತೆ ಆದೇ ಮೌನ, ತಿಂಡಿ ತಿನ್ನಬೇಕು ಎಂದು ಅನಿಸಲಿಲ್ಲ..ಅವಳೇನು ತನ್ನ ಕರ್ಮ >> ಎಂದು ಮಾಡಿರಬೇಕು.. ನಾನು ನನ್ನ ಪ್ರಿಯತಮೆಯ ಮನೆಗೆ ಹೋಗಿ ತಿಂಡಿ ತಿಂದು ಕೆಲಸ ಮಾಡಿ >> ರಾತ್ರಿ ಮನೆಗೆ ಬಂದೆ.. ನನ್ನ ಹೆಂಡತಿ ನನಗೆ ವಿಚ್ಚೇದನ ನೀಡಲು ಒಪ್ಪಿದಳು..ನನಗೆ ಖುಷಿಯಾಗಿ >> ಇದನ್ನು ನನ್ನ ರಾಣಿಗೆ ಹೇಳಿ ಮಲಗಲು ಹೋದೆ... ಇವಳು ರೂಮಿನಲ್ಲಿ ಏನನ್ನೋ >> ಗೀಚುತ್ತಿದ್ದಳು..ನನಗೇನು ನನಗೆ ಬೇಕಾದ್ದು ಸಿಕ್ಕಿತು ಎಂದು ಮಲಗಿದೆ.. ಮಧ್ಯದಲ್ಲಿ >> ಎಚ್ಚರವಾದಗಲೂ ನನ್ನ ಹೆಂಡತಿ ಇನ್ನು ಬರೆಯುತ್ತಲೇ ಇದ್ದಳು.. ತಲೆ ಕೆಡಿಸಿಕೊಳ್ಳದೆ >> ಮಗ್ಗಲಿಗೆ ತಿರುಗಿ ಮಲಗಿಬಿಟ್ಟೆ..ಬೆಳಿಗ್ಗೆ ಎದ್ದಾಗ ನನ್ನ ಹೆಂಡತಿ ತಾನು ಬರೆದಿರುವ >> ವಿಚ್ಚೇದನದ ಪತ್ರವನ್ನು ನೀಡಿದಳು.. ನಾನು ಓದಿದೆ ಅವಳು ಕೆಲವು ಷರತ್ತುಗಳನ್ನು >> ಹಾಕಿದ್ದಳು..ನಾನು ಅವಳಿಗೆ ತೊಂದರೆಯಾಗಬಾರದು ಎಂದು ಈಗಿರುವ ಮನೆ, ಕಾರು ಮತ್ತು ನನ್ನ >> ವ್ಯವಹಾರದಲ್ಲಿ 30% ಲಾಭಾಂಶ ಕೊಡಲು ಒಪ್ಪಿದ್ದೆ.ಆದರೆ ಅವಳು ಅದೇನು ಬೇಡವೆಂದು ವಿಚ್ಚೇದನದ >> ವಿಷಯವನ್ನು ಒಂದು ತಿಂಗಳು ಮುಂಚಿತವಾಗಿ ತಿಳಿಸಬೇಕೆಂದು, ಮುಂದಿನ ಒಂದು ತಿಂಗಳು ನಾವು ಗಂಡ >> ಹೆಂಡತಿಯಾಗಿಯೇ ಇರಬೇಕೆಂದು ಬರೆದಿದ್ದಳು..ಕಾರಣ ನಮ್ಮ ಮಗನಿಗೆ ಮುಂದಿನ ತಿಂಗಳೂ ಪೂರ್ತಿ >> ಪರೀಕ್ಷೆ ಇರುವ ಕಾರಣ ಅವನಿಗೆ ನಮ್ಮಿಬ್ಬರ ವಿಚ್ಚೇದನದ ವಿಷಯ ತಿಳಿಯಬಾರದು ಇದು ಅವನ >> ವ್ಯಾಸಂಗಕ್ಕೇ ಅಡ್ಡಿಯಾಗಬಾರದು ಎಂಬುದು ನನ್ನ ಹೆಂಡತಿಯ ಉದ್ದೇಶವಾಗಿತ್ತು. ನನಗೆ ಸರಿ >> ಎನಿಸಿ ಒಪ್ಪಿಗೆ ಕೊಟ್ಟೆ.. ಆಗೆ ಒಪ್ಪಿದ ತಕ್ಷಣ ತನ್ನನ್ನು ಎತ್ತಿಕೊಂಡು ಹೋಗುವಂತೆ ಬೇಡಿಕೆ >> ಇಟ್ಟಳು..ಪ್ರತಿ ದಿನ ಹೀಗೆ ಮಾಡಬೇಕು ಎಂಬುದು ಅವಳ ಆಸೆಯಾಗಿತ್ತು.. ನಾನು ಮನಸ್ಸಿಲ್ಲದ >> ಮನಸ್ಸಿನಲ್ಲಿ ಅವಳನ್ನು ಎತ್ತಿಕೊಂಡು ಹಾಸಿಗೆ ಮೇಲೆ ಮಲಗಿಸುತ್ತಿದ್ದೆ.. ಇದನ್ನು ನನ್ನ ಮಗ >> ಕುತೂಹಲದಿಂದ ನೋಡುತ್ತಿದ್ದ..ಅವನಿಗೇ ಏನಾಗುತ್ತಿದೇ ಎಂದು ಗೊತ್ತಿಲ್ಲಾ..ಹೀಗೆ ದಿನ ಕಳೆಯ >> ತೊಡಗಿತು..ನಾನು ನನ್ನ ರಾಣಿಯ ಜೊತೆ ಎಲ್ಲಕಡೆ ಸುತ್ತಾಡಿ ಎಂಜಾಯ್ ಮಾಡಿ ಮನೆಗೆ ಬಂದು >> ಮಲಗುತ್ತಿದ್ದೇ..ನನ್ನ ಮಗ ಬಂದು ಅಪ್ಪ ಇವತ್ತು ಅಮ್ಮನ್ನು ಎತ್ತಿಕೊಳ್ಳಲೇ ಇಲ್ಲ ಎಂದು >> ಕೇಳುತ್ತಿದ್ದ.. ಅವನಿಗೆ ಅನುಮಾನ ಬರಬಾರದು ಎಂದು ಅವಳ ಆಸೆ ಪೂರೈಸುತ್ತಿದ್ದೆ...ಪ್ರತಿದಿನ >> ಅವಳನ್ನು ಎತ್ತುವಾಗ ಹೂವು ಎತ್ತುತಿದ್ದ ಹಾಗೇ ಅನಿಸತೊಡಗಿತು.. ಆದರೆ ನನ್ನ ರಾಣಿಯ >> ಒಡನಾಟದಲ್ಲಿ ಕುರುಡನಾಗಿದ್ದೇ, ಅವಳ ಪ್ರೇಮದ ಬಲೆಯಲ್ಲಿ ಬಿದ್ದು ನನ್ನನ್ನೇ >> ಕಳೆದುಕೊಂಡಿದ್ದೆ.. ಹೀಗೆ ಇಪ್ಪತು ದಿನ ಕಳೆದಿರಬೇಕು..ನನ್ನ ಹೆಂಡತಿ ಸ್ವಲ್ಪ ಊಟ ಕಡಿಮೆ >> ಮಾಡತೊಡಗಿದ್ದಾಳೆ ಅನಿಸಿತು..ಅವಳ ಭಾರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು.. ಒಂದೇ >> ಮನೆಯಲ್ಲಿದ್ದರೂ ಅಪರಿಚಿತರಂತೆ ಇರುತ್ತಿದ್ದೇವೂ...ಅವಳು ಆಗಾಗ ಅಳುವುದು >> ಕೇಳಿಸುತ್ತಿತ್ತು..ಇನ್ನು ಕೇವಲ 10 ದಿನ ಮಾತ್ರ ಉಳಿದಿದೆ ಅದಕ್ಕೇ ಅಳುತ್ತಿದ್ದಾಳೆ >> ಇದೆಲ್ಲಾ ನನ್ನನ್ನು ತನ್ನ ಕಡೆಗೆ ಸೆಳೆಯುವ ಪ್ರಯತ್ನ..ಆದರೆ ನಾನು ಮಾತ್ರ ಸೋಲಲಿಲ್ಲ.. >> ನನ್ನ ರಾಣಿಯ ಬಾಹುಬಂಧನದಲ್ಲಿ ಮುಳುಗಿ ಹೋಗಿದ್ದೇ.. >> ಒಂದು ದಿನ ನನ್ನ ಹೆಂಡಿತಿ ಇದ್ದಕ್ಕಿದ್ದ ಹಾಗೆ ನನ್ನ ಮಗ ಮನೆಯಲ್ಲಿ ಇಲ್ಲದ ವೇಳೆ ಬಂದು >> ನನ್ನ ಎದೆಯ ಮೇಲೆ ತಲೆ ಇಟ್ಟು ಮಲಗಿದಳು.. ಅದು ಏಕೋ ನನಗೆ ಅವಳಾಡುತ್ತಿರುವ ನಾಟಕ >> ಅನಿಸಲಿಲ್ಲಾ.. ಅವಳ ಭಾರವಾದ ತಲೆ ನನ್ನ ಎದೆಯನ್ನು ಒತ್ತುತ್ತಿತ್ತು.. ಅವಳು ಬಿಸಿ ಉಸಿರು >> ನನಗೆ ಏನನ್ನೋ ಹೇಳುತ್ತಿತ್ತು..ಅವಳ ಎದೆಯ ಬಡಿತ ನನ್ನ ಬಡಿತಕ್ಕಿಂತ ಹೆಚ್ಚಾಗಿತ್ತು...ಅವಳ >> ಮೌನ ನನ್ನನ್ನು ಕೊಲ್ಲುತ್ತಿತ್ತು..ಹಾಗೇ ಅವಳ ತಲೆಯನ್ನು ಸವರುತ್ತಾ ಏನು ಹೇಳಬೇಕೆಂದು >> ತೋಚದೇ..ಏನಿದೆಲ್ಲಾ ಎಂದು ಕೇಳಿದೆ.. ಅವಳ ಕಣ್ಣಿಂದ ಜಾರಿದ ಬಿಸಿಯಾದ ಕಣ್ಣಿರು ನನ್ನ >> ಎದೆಯನ್ನು ಒದ್ದೆ ಮಾಡಿತ್ತು... ಆ ಕ್ಷಣವೇ ನಾನು ತಪ್ಪು ಮಾಡುತ್ತಿದ್ದೇನೆ ಎಂದು >> ಅನಿಸತೊಡಗಿತು.. ನನ್ನ ಅವಳ 10ವರ್ಷದ ದಾಂಪತ್ಯ ಇನ್ನು ಹತ್ತೇ ದಿನದಲ್ಲಿ ಮುರಿದು >> ಹೋಗುತ್ತದೆ ಎಂಬ ಭಯ ನನ್ನನ್ನು ಕಾಡತೊಡಗಿತು... ಅವಳನ್ನು ಎತ್ತಿಕೊಂಡು ಹೋಗಿ ಮಂಚದ ಮೇಲೆ >> ಮಲಗಿಸಿದೇ..ಅಂದು ನನ್ನ ಪ್ರಥಮ ರಾತ್ರಿಯಲ್ಲಿ ಅವಳನ್ನು ಎತ್ತಿದ ಅನುಭವವಾಗಿ ಅವಳು >> ಮತ್ತಷ್ಟು ಹಗುರವಾಗಿದ್ದಾಳೆ ಎನಿಸಿ ಕೇಳಿದೆ..ಯಾಕೆ ತೂಕ ಕಡಿಮೆಯಾಗಿದೆ ಸರಿಯಾಗಿ ಊಟ >> ಮಾಡಲ್ವಾ ಅಂತ..ಅದಕ್ಕವಳು ನಕ್ಕು ಸುಮ್ಮನಾದಳು...ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ.. >> ಯೋಚಿಸಿದೆ ನಾನು ಮಾಡುತ್ತಿರುವುದು ತಪ್ಪು ಎನಿಸಿತು.. ಅಸಹ್ಯ ಎನಿಸಿತು.. ಮೋಹದ ಬಲೆಯಲ್ಲಿ >> ಹುಚ್ಚನಾಗಿದ್ದ ನಾನು ಪ್ರೀತಿ ಅಂತ ತಿಳಿದು ಮೋಸ ಮಾಡಲು ಹೋಗಿದ್ದೇ.. ಬೆಳಗಾಗುತ್ತಿದ್ದಾ >> ಹಾಗೇ ರಾಣಿಯ ಮನೆಗೆ ಹೋಗಿ ನನ್ನಿಂದ ನನ್ನ ಹೆಂಡತಿಯನ್ನು ಬಿಟ್ಟು ಬದುಕುವ ಶಕ್ತಿಯಿಲ್ಲಾ, >> ನಾನು ಅವಳಿಗೆ ಮೋಸ ಮಾಡಲಾರೆ, ನನ್ನನ್ನು ಮರೆತು ಬಿಡು, ಕ್ಷಮಿಸಿ ಬಿಡು ಎಂದು ಅಂಗಲಾಚಿದೆ.. >> ಅವಳು ನನ್ನನ್ನು ಬೈದು ಕೆನ್ನಗೆ ಬಾರಿಸಿ ಮನೆ ಬಾಗಿಲು ಹಾಕಿಕೊಂಡಲು..ಅವಮಾನವಾದರೂ >> ಹೆಂಡತಿಗೆ ದ್ರೋಹ ಮಾಡುವುದು ತಪ್ಪಿತು ಎಂದು ಸಮಾಧಾನ ಮಾಡಿಕೊಂಡು ಒಂದೇ ಉಸಿರಿನಲಿ ಅಲ್ಲಿಂದ >> ಬರುತ್ತಿದ್ದೇ...ದಾರಿಯಲ್ಲಿ ನೆನಪಾಗಿ ನನ್ನ ಹೆಂಡತಿಗೆ ಇಷ್ಟವಾದ ಹೂವನ್ನು >> ಕೊಂಡುಕೊಳ್ಳುತ್ತಿದ್ದೆ..ಪಕ್ಕದಲ್ಲೇ ಒಂದು ಗ್ರೀಟಿಂಗ್ ಕಾರ್ಡ್ ಅಂಗಡಿ..ಅಲ್ಲಿಗೆ ಹೋಗಿ >> ಕಾರ್ಡ್ ಆರಿಸುತ್ತಿದ್ದಾಗ ಅಂಗಡಿಯವ ಹೇಳಿದ ನಿಮ್ಮ ಮನಸಿನಲ್ಲಿ ಏನಾದರೂ ಇದ್ದರೇ ಅದನ್ನೇ >> ಬರೆದು ಕೊಂಡಿ ಅಂತ.. ನಾನು ಒಂದು ಕಾರ್ಡ್ ಪಡೆದು ಬರೆದೆ.. >> "ನನ್ನ ಉಸಿರಿರುವ ತನಕ ನಿನ್ನನ್ನು ನಾನು ಎತ್ತಿಕೊಂಡೇ ಓಡಾಡುತ್ತೇನೆ" ನನ್ನ ಕಣ್ಣು >> ತೆರೆಸಿದ ದೇವತೆ ನೀನು.. ನನ್ನನ್ನು ಕ್ಷಮಿಸು ಎಂದು.. ಹೂವು ಗ್ರೀಟಿಂಗ್ ಎರಡು >> ಹಿಡಿದುಕೊಂಡು ಒಂದೇ ಸಮನೆ ಮನೆಯ ಬಂದೇ...ಯಾಕೋ ಕೈಕಾಲುಗಲು ಅಲ್ಲಾಡಲೇ ಇಲ್ಲ ಮನೆಯ ಬಾಗಿಲ >> ಮುಂದೆ ಬಿದ್ದು ಬಿಟ್ಟೆ ..ಮತ್ತೇ ಮೇಲೆ ಎಳಲು ನನಗೆ ಸಾಧ್ಯವಾಗಲೇ ಇಲ್ಲ.. ನನಗೆ ಎಲ್ಲ >> ಇದ್ದರೂ ಏನೂ ಇಲ್ಲದಂತಾಗಿತ್ತು....ಅಂತಹ ಪರಿಸ್ಥಿತಿ..ಕಾರಣ ನನ್ನ ಹೆಂಡತಿ ಅದಾಗಲೇ >> ಚಿರನಿದ್ರೆಗೆ ಜಾರಿ ಬಿಟ್ಟಿದ್ದಳು...ನೆನ್ನೆ ರಾತ್ರಿ ಅವಳನ್ನು ಎತ್ತಿ ಮಲಗಿಸಿ ಹೋದವನಿಗೆ >> ಮತ್ತೆ ಜೀವನ ಪರ್ಯಂತ ಅವಳನ್ನು ಎತ್ತಿಕೊಳ್ಳವ ಅವಕಾಶವೇ ಇಲ್ಲದಂತಾಯಿತು..ಅಯ್ಯೋ.. ಅವಳ >> ದೇಹದ ಪಕ್ಕದಲ್ಲಿ ಒಂದು ಮೆಡಿಕಲ್ ರಿರ್ಫೋಟ್ ಅದರಲ್ಲಿ ಬರೆದಿತ್ತು..ಬೋನ್ ಕ್ಯಾನ್ಸರ್ >> ಅಂತ..ಆಗ ತಿಳಿಯಿತು ಪ್ರತಿದಿನ ಅವಳ ತೂಕ ಯಾಕೆ ಕಡಿಮೆಯಾಗುತ್ತಿತ್ತು ಎಂದು.. ಮೋಹದ >> ಕಣ್ಣಿಗೆ ಅದು ತೋಚಲಿಲ್ಲಾ..ಅವಳ ಕೊನೆಗೆ ನಗು ಎಲ್ಲವನ್ನು ನನ್ನಿಂದ ಮರೆಮಾಚಿತ್ತು.. ನನ್ನ >> ಮಗ ಬಳಿ ಬಂದು ಅಪ್ಪಾ..ಇವತ್ತು ಅಮ್ಮನನ್ನು ನೀವೊಬ್ಬರೆ ಎತ್ತಿಕೊಂಡು ಹೋಗಬೇಕಂತೆ ಇದು >> ಅಮ್ಮನ ಕಡೆ ಆಸೆಯಂತೆ ಎಂದು ಜೋರಾಗಿ ಆಳತೊಡಿಗಿದ.ಅವನ ಮುಖವನ್ನು ನೋಡಲು ನನ್ನಿಂದ >> ಸಾದ್ಯವಾಗಲಿಲ್ಲಾ..ಮಗನ ದೃಷ್ಟಿಯಲ್ಲಿ ನನ್ನನ್ನು ಹೀರೋ ಮಾಡಿಹೋಗಿದ್ದಳು ನನ್ನ ದೇವತೆ... >> ಕಡೆಯದಾಗಿ ಒಂದು ಮಾತು ಮದುವೆಯಾಗೋದು, ವಿಚ್ಚೇದನ ಪಡೆಯೋದು ಕೇವಲ ಕೆಲ ನಿಮಿಷದ ಕೆಲಸ >> ಒಮ್ಮೆ ಯೋಚಿಸಿ ನಂಬಿಕೆ ಅನ್ನೋದು ಎಲ್ಲಕ್ಕಿಂತ ದೊಡ್ಡದು...ಈ ಕಥೆಯಿಂದ ಒಂದಾದರೂ >> ವಿಚ್ಚೇದನ ನಿಂತರೆ ಅಷ್ಟೇ ಸಾಕು.. ಆ ನಂಬಿಕೆ ಇದೆ ಅದ್ದರಿಂದ ಎಲ್ಲರಿಗೂ ಶೇರ್ ಮಾಡಿ.. >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.