Very beautiful story. Thanks Mam On Mar 22, 2017 11:04 PM, "garjilingappa k" <garji1...@gmail.com> wrote: > > Super madam > > On 22-Mar-2017 10:23 PM, "Sameera samee" <mehak.sa...@gmail.com> wrote: >> >> ಕನ್ನಡ ಅನುವಾದ...""ವಿಚ್ಚೇದನಕ್ಕೂ ಮುನ್ನ"" >> ನೀವು ಮದುವೆಯಾಗಿರಿ, ಅಥವಾ ಆಗದೇ ಇರಿ..ತಪ್ಪದೇ ಈ ಕಥೆಯನ್ನು ಒಮ್ಮೆ ಪೂರ್ತಿಯಾಗಿ ಓದಿ... >> >> ನಾನು ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಾಗ ನನ್ನ ಹೆಂಡತಿ ನಗುತ್ತಾ ಬಾಗಿಲು ತೆಗೆದು ಊಟ ಬಡಿಸಿದಳು..ನಾನು ಅವಳ ಕೈ ಹಿಡಿದು ನಿನ್ನ ಹತ್ತಿರ ಒಂದು ವಿಷಯ ಹೇಳಬೇಕು ಎಂದೇ..ಅವಳು ನಿಧಾನವಾಗಿ ಕೆಳಗೆ ಕುಳಿತು ಹೇಳಿ ಎಂದು ಸಣ್ಣದ್ವನಿಯಲ್ಲಿ ಕೇಳಿದಳು..ಅವಳ ಕಣ್ಣನ್ನು ತುಂಬ ಹತ್ತಿರದಿಂದ ನೋಡಿದಾಗ ಅವಳಿಗೆ ಏನೋ ನೋವಿರುವುದು ಗೊತ್ತಾಯಿತು..ಆದರೆ ನಾನು ನನ್ನ ಮಾತನ್ನು ಮುಂದುವರೆಸಿ..ನನಗೆ ನಿನ್ನಿಂದ ವಿಚ್ಚೇದನ ಬೇಕು, ನಾನು ರಾಣಿ ಎಂಬುವಳನ್ನು ಪ್ರೇಮಿಸುತ್ತಿದ್ದಿನಿ..ಅವಳನ್ನು ಮದುವೆಯಾಗಬೇಕು ಎಂದೇ ಅಷ್ಟೆ.. ಆ ರಾತ್ರಿ ಇಡೀ ಇಬ್ಬರೂ ಮೌನ, ಅವಳು ಅಳುತ್ತಿದ್ದರೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ..ಹೋಗಿ ಮಲಗಿ ಬಿಟ್ಟೆ.. ಮಾರನೇ ದಿನ ಎದ್ದಾಗ ಮತ್ತೆ ಆದೇ ಮೌನ, ತಿಂಡಿ ತಿನ್ನಬೇಕು ಎಂದು ಅನಿಸಲಿಲ್ಲ..ಅವಳೇನು ತನ್ನ ಕರ್ಮ ಎಂದು ಮಾಡಿರಬೇಕು.. ನಾನು ನನ್ನ ಪ್ರಿಯತಮೆಯ ಮನೆಗೆ ಹೋಗಿ ತಿಂಡಿ ತಿಂದು ಕೆಲಸ ಮಾಡಿ ರಾತ್ರಿ ಮನೆಗೆ ಬಂದೆ.. ನನ್ನ ಹೆಂಡತಿ ನನಗೆ ವಿಚ್ಚೇದನ ನೀಡಲು ಒಪ್ಪಿದಳು..ನನಗೆ ಖುಷಿಯಾಗಿ ಇದನ್ನು ನನ್ನ ರಾಣಿಗೆ ಹೇಳಿ ಮಲಗಲು ಹೋದೆ... ಇವಳು ರೂಮಿನಲ್ಲಿ ಏನನ್ನೋ ಗೀಚುತ್ತಿದ್ದಳು..ನನಗೇನು ನನಗೆ ಬೇಕಾದ್ದು ಸಿಕ್ಕಿತು ಎಂದು ಮಲಗಿದೆ.. ಮಧ್ಯದಲ್ಲಿ ಎಚ್ಚರವಾದಗಲೂ ನನ್ನ ಹೆಂಡತಿ ಇನ್ನು ಬರೆಯುತ್ತಲೇ ಇದ್ದಳು.. ತಲೆ ಕೆಡಿಸಿಕೊಳ್ಳದೆ ಮಗ್ಗಲಿಗೆ ತಿರುಗಿ ಮಲಗಿಬಿಟ್ಟೆ..ಬೆಳಿಗ್ಗೆ ಎದ್ದಾಗ ನನ್ನ ಹೆಂಡತಿ ತಾನು ಬರೆದಿರುವ ವಿಚ್ಚೇದನದ ಪತ್ರವನ್ನು ನೀಡಿದಳು.. ನಾನು ಓದಿದೆ ಅವಳು ಕೆಲವು ಷರತ್ತುಗಳನ್ನು ಹಾಕಿದ್ದಳು..ನಾನು ಅವಳಿಗೆ ತೊಂದರೆಯಾಗಬಾರದು ಎಂದು ಈಗಿರುವ ಮನೆ, ಕಾರು ಮತ್ತು ನನ್ನ ವ್ಯವಹಾರದಲ್ಲಿ 30% ಲಾಭಾಂಶ ಕೊಡಲು ಒಪ್ಪಿದ್ದೆ.ಆದರೆ ಅವಳು ಅದೇನು ಬೇಡವೆಂದು ವಿಚ್ಚೇದನದ ವಿಷಯವನ್ನು ಒಂದು ತಿಂಗಳು ಮುಂಚಿತವಾಗಿ ತಿಳಿಸಬೇಕೆಂದು, ಮುಂದಿನ ಒಂದು ತಿಂಗಳು ನಾವು ಗಂಡ ಹೆಂಡತಿಯಾಗಿಯೇ ಇರಬೇಕೆಂದು ಬರೆದಿದ್ದಳು..ಕಾರಣ ನಮ್ಮ ಮಗನಿಗೆ ಮುಂದಿನ ತಿಂಗಳೂ ಪೂರ್ತಿ ಪರೀಕ್ಷೆ ಇರುವ ಕಾರಣ ಅವನಿಗೆ ನಮ್ಮಿಬ್ಬರ ವಿಚ್ಚೇದನದ ವಿಷಯ ತಿಳಿಯಬಾರದು ಇದು ಅವನ ವ್ಯಾಸಂಗಕ್ಕೇ ಅಡ್ಡಿಯಾಗಬಾರದು ಎಂಬುದು ನನ್ನ ಹೆಂಡತಿಯ ಉದ್ದೇಶವಾಗಿತ್ತು. ನನಗೆ ಸರಿ ಎನಿಸಿ ಒಪ್ಪಿಗೆ ಕೊಟ್ಟೆ.. ಆಗೆ ಒಪ್ಪಿದ ತಕ್ಷಣ ತನ್ನನ್ನು ಎತ್ತಿಕೊಂಡು ಹೋಗುವಂತೆ ಬೇಡಿಕೆ ಇಟ್ಟಳು..ಪ್ರತಿ ದಿನ ಹೀಗೆ ಮಾಡಬೇಕು ಎಂಬುದು ಅವಳ ಆಸೆಯಾಗಿತ್ತು.. ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಅವಳನ್ನು ಎತ್ತಿಕೊಂಡು ಹಾಸಿಗೆ ಮೇಲೆ ಮಲಗಿಸುತ್ತಿದ್ದೆ.. ಇದನ್ನು ನನ್ನ ಮಗ ಕುತೂಹಲದಿಂದ ನೋಡುತ್ತಿದ್ದ..ಅವನಿಗೇ ಏನಾಗುತ್ತಿದೇ ಎಂದು ಗೊತ್ತಿಲ್ಲಾ..ಹೀಗೆ ದಿನ ಕಳೆಯ ತೊಡಗಿತು..ನಾನು ನನ್ನ ರಾಣಿಯ ಜೊತೆ ಎಲ್ಲಕಡೆ ಸುತ್ತಾಡಿ ಎಂಜಾಯ್ ಮಾಡಿ ಮನೆಗೆ ಬಂದು ಮಲಗುತ್ತಿದ್ದೇ..ನನ್ನ ಮಗ ಬಂದು ಅಪ್ಪ ಇವತ್ತು ಅಮ್ಮನ್ನು ಎತ್ತಿಕೊಳ್ಳಲೇ ಇಲ್ಲ ಎಂದು ಕೇಳುತ್ತಿದ್ದ.. ಅವನಿಗೆ ಅನುಮಾನ ಬರಬಾರದು ಎಂದು ಅವಳ ಆಸೆ ಪೂರೈಸುತ್ತಿದ್ದೆ...ಪ್ರತಿದಿನ ಅವಳನ್ನು ಎತ್ತುವಾಗ ಹೂವು ಎತ್ತುತಿದ್ದ ಹಾಗೇ ಅನಿಸತೊಡಗಿತು.. ಆದರೆ ನನ್ನ ರಾಣಿಯ ಒಡನಾಟದಲ್ಲಿ ಕುರುಡನಾಗಿದ್ದೇ, ಅವಳ ಪ್ರೇಮದ ಬಲೆಯಲ್ಲಿ ಬಿದ್ದು ನನ್ನನ್ನೇ ಕಳೆದುಕೊಂಡಿದ್ದೆ.. ಹೀಗೆ ಇಪ್ಪತು ದಿನ ಕಳೆದಿರಬೇಕು..ನನ್ನ ಹೆಂಡತಿ ಸ್ವಲ್ಪ ಊಟ ಕಡಿಮೆ ಮಾಡತೊಡಗಿದ್ದಾಳೆ ಅನಿಸಿತು..ಅವಳ ಭಾರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು.. ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಇರುತ್ತಿದ್ದೇವೂ...ಅವಳು ಆಗಾಗ ಅಳುವುದು ಕೇಳಿಸುತ್ತಿತ್ತು..ಇನ್ನು ಕೇವಲ 10 ದಿನ ಮಾತ್ರ ಉಳಿದಿದೆ ಅದಕ್ಕೇ ಅಳುತ್ತಿದ್ದಾಳೆ ಇದೆಲ್ಲಾ ನನ್ನನ್ನು ತನ್ನ ಕಡೆಗೆ ಸೆಳೆಯುವ ಪ್ರಯತ್ನ..ಆದರೆ ನಾನು ಮಾತ್ರ ಸೋಲಲಿಲ್ಲ.. ನನ್ನ ರಾಣಿಯ ಬಾಹುಬಂಧನದಲ್ಲಿ ಮುಳುಗಿ ಹೋಗಿದ್ದೇ.. >> ಒಂದು ದಿನ ನನ್ನ ಹೆಂಡಿತಿ ಇದ್ದಕ್ಕಿದ್ದ ಹಾಗೆ ನನ್ನ ಮಗ ಮನೆಯಲ್ಲಿ ಇಲ್ಲದ ವೇಳೆ ಬಂದು ನನ್ನ ಎದೆಯ ಮೇಲೆ ತಲೆ ಇಟ್ಟು ಮಲಗಿದಳು.. ಅದು ಏಕೋ ನನಗೆ ಅವಳಾಡುತ್ತಿರುವ ನಾಟಕ ಅನಿಸಲಿಲ್ಲಾ.. ಅವಳ ಭಾರವಾದ ತಲೆ ನನ್ನ ಎದೆಯನ್ನು ಒತ್ತುತ್ತಿತ್ತು.. ಅವಳು ಬಿಸಿ ಉಸಿರು ನನಗೆ ಏನನ್ನೋ ಹೇಳುತ್ತಿತ್ತು..ಅವಳ ಎದೆಯ ಬಡಿತ ನನ್ನ ಬಡಿತಕ್ಕಿಂತ ಹೆಚ್ಚಾಗಿತ್ತು...ಅವಳ ಮೌನ ನನ್ನನ್ನು ಕೊಲ್ಲುತ್ತಿತ್ತು..ಹಾಗೇ ಅವಳ ತಲೆಯನ್ನು ಸವರುತ್ತಾ ಏನು ಹೇಳಬೇಕೆಂದು ತೋಚದೇ..ಏನಿದೆಲ್ಲಾ ಎಂದು ಕೇಳಿದೆ.. ಅವಳ ಕಣ್ಣಿಂದ ಜಾರಿದ ಬಿಸಿಯಾದ ಕಣ್ಣಿರು ನನ್ನ ಎದೆಯನ್ನು ಒದ್ದೆ ಮಾಡಿತ್ತು... ಆ ಕ್ಷಣವೇ ನಾನು ತಪ್ಪು ಮಾಡುತ್ತಿದ್ದೇನೆ ಎಂದು ಅನಿಸತೊಡಗಿತು.. ನನ್ನ ಅವಳ 10ವರ್ಷದ ದಾಂಪತ್ಯ ಇನ್ನು ಹತ್ತೇ ದಿನದಲ್ಲಿ ಮುರಿದು ಹೋಗುತ್ತದೆ ಎಂಬ ಭಯ ನನ್ನನ್ನು ಕಾಡತೊಡಗಿತು... ಅವಳನ್ನು ಎತ್ತಿಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದೇ..ಅಂದು ನನ್ನ ಪ್ರಥಮ ರಾತ್ರಿಯಲ್ಲಿ ಅವಳನ್ನು ಎತ್ತಿದ ಅನುಭವವಾಗಿ ಅವಳು ಮತ್ತಷ್ಟು ಹಗುರವಾಗಿದ್ದಾಳೆ ಎನಿಸಿ ಕೇಳಿದೆ..ಯಾಕೆ ತೂಕ ಕಡಿಮೆಯಾಗಿದೆ ಸರಿಯಾಗಿ ಊಟ ಮಾಡಲ್ವಾ ಅಂತ..ಅದಕ್ಕವಳು ನಕ್ಕು ಸುಮ್ಮನಾದಳು...ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ.. ಯೋಚಿಸಿದೆ ನಾನು ಮಾಡುತ್ತಿರುವುದು ತಪ್ಪು ಎನಿಸಿತು.. ಅಸಹ್ಯ ಎನಿಸಿತು.. ಮೋಹದ ಬಲೆಯಲ್ಲಿ ಹುಚ್ಚನಾಗಿದ್ದ ನಾನು ಪ್ರೀತಿ ಅಂತ ತಿಳಿದು ಮೋಸ ಮಾಡಲು ಹೋಗಿದ್ದೇ.. ಬೆಳಗಾಗುತ್ತಿದ್ದಾ ಹಾಗೇ ರಾಣಿಯ ಮನೆಗೆ ಹೋಗಿ ನನ್ನಿಂದ ನನ್ನ ಹೆಂಡತಿಯನ್ನು ಬಿಟ್ಟು ಬದುಕುವ ಶಕ್ತಿಯಿಲ್ಲಾ, ನಾನು ಅವಳಿಗೆ ಮೋಸ ಮಾಡಲಾರೆ, ನನ್ನನ್ನು ಮರೆತು ಬಿಡು, ಕ್ಷಮಿಸಿ ಬಿಡು ಎಂದು ಅಂಗಲಾಚಿದೆ.. ಅವಳು ನನ್ನನ್ನು ಬೈದು ಕೆನ್ನಗೆ ಬಾರಿಸಿ ಮನೆ ಬಾಗಿಲು ಹಾಕಿಕೊಂಡಲು..ಅವಮಾನವಾದರೂ ಹೆಂಡತಿಗೆ ದ್ರೋಹ ಮಾಡುವುದು ತಪ್ಪಿತು ಎಂದು ಸಮಾಧಾನ ಮಾಡಿಕೊಂಡು ಒಂದೇ ಉಸಿರಿನಲಿ ಅಲ್ಲಿಂದ ಬರುತ್ತಿದ್ದೇ...ದಾರಿಯಲ್ಲಿ ನೆನಪಾಗಿ ನನ್ನ ಹೆಂಡತಿಗೆ ಇಷ್ಟವಾದ ಹೂವನ್ನು ಕೊಂಡುಕೊಳ್ಳುತ್ತಿದ್ದೆ..ಪಕ್ಕದಲ್ಲೇ ಒಂದು ಗ್ರೀಟಿಂಗ್ ಕಾರ್ಡ್ ಅಂಗಡಿ..ಅಲ್ಲಿಗೆ ಹೋಗಿ ಕಾರ್ಡ್ ಆರಿಸುತ್ತಿದ್ದಾಗ ಅಂಗಡಿಯವ ಹೇಳಿದ ನಿಮ್ಮ ಮನಸಿನಲ್ಲಿ ಏನಾದರೂ ಇದ್ದರೇ ಅದನ್ನೇ ಬರೆದು ಕೊಂಡಿ ಅಂತ.. ನಾನು ಒಂದು ಕಾರ್ಡ್ ಪಡೆದು ಬರೆದೆ.. >> "ನನ್ನ ಉಸಿರಿರುವ ತನಕ ನಿನ್ನನ್ನು ನಾನು ಎತ್ತಿಕೊಂಡೇ ಓಡಾಡುತ್ತೇನೆ" ನನ್ನ ಕಣ್ಣು ತೆರೆಸಿದ ದೇವತೆ ನೀನು.. ನನ್ನನ್ನು ಕ್ಷಮಿಸು ಎಂದು.. ಹೂವು ಗ್ರೀಟಿಂಗ್ ಎರಡು ಹಿಡಿದುಕೊಂಡು ಒಂದೇ ಸಮನೆ ಮನೆಯ ಬಂದೇ...ಯಾಕೋ ಕೈಕಾಲುಗಲು ಅಲ್ಲಾಡಲೇ ಇಲ್ಲ ಮನೆಯ ಬಾಗಿಲ ಮುಂದೆ ಬಿದ್ದು ಬಿಟ್ಟೆ ..ಮತ್ತೇ ಮೇಲೆ ಎಳಲು ನನಗೆ ಸಾಧ್ಯವಾಗಲೇ ಇಲ್ಲ.. ನನಗೆ ಎಲ್ಲ ಇದ್ದರೂ ಏನೂ ಇಲ್ಲದಂತಾಗಿತ್ತು....ಅಂತಹ ಪರಿಸ್ಥಿತಿ..ಕಾರಣ ನನ್ನ ಹೆಂಡತಿ ಅದಾಗಲೇ ಚಿರನಿದ್ರೆಗೆ ಜಾರಿ ಬಿಟ್ಟಿದ್ದಳು...ನೆನ್ನೆ ರಾತ್ರಿ ಅವಳನ್ನು ಎತ್ತಿ ಮಲಗಿಸಿ ಹೋದವನಿಗೆ ಮತ್ತೆ ಜೀವನ ಪರ್ಯಂತ ಅವಳನ್ನು ಎತ್ತಿಕೊಳ್ಳವ ಅವಕಾಶವೇ ಇಲ್ಲದಂತಾಯಿತು..ಅಯ್ಯೋ.. ಅವಳ ದೇಹದ ಪಕ್ಕದಲ್ಲಿ ಒಂದು ಮೆಡಿಕಲ್ ರಿರ್ಫೋಟ್ ಅದರಲ್ಲಿ ಬರೆದಿತ್ತು..ಬೋನ್ ಕ್ಯಾನ್ಸರ್ ಅಂತ..ಆಗ ತಿಳಿಯಿತು ಪ್ರತಿದಿನ ಅವಳ ತೂಕ ಯಾಕೆ ಕಡಿಮೆಯಾಗುತ್ತಿತ್ತು ಎಂದು.. ಮೋಹದ ಕಣ್ಣಿಗೆ ಅದು ತೋಚಲಿಲ್ಲಾ..ಅವಳ ಕೊನೆಗೆ ನಗು ಎಲ್ಲವನ್ನು ನನ್ನಿಂದ ಮರೆಮಾಚಿತ್ತು.. ನನ್ನ ಮಗ ಬಳಿ ಬಂದು ಅಪ್ಪಾ..ಇವತ್ತು ಅಮ್ಮನನ್ನು ನೀವೊಬ್ಬರೆ ಎತ್ತಿಕೊಂಡು ಹೋಗಬೇಕಂತೆ ಇದು ಅಮ್ಮನ ಕಡೆ ಆಸೆಯಂತೆ ಎಂದು ಜೋರಾಗಿ ಆಳತೊಡಿಗಿದ.ಅವನ ಮುಖವನ್ನು ನೋಡಲು ನನ್ನಿಂದ ಸಾದ್ಯವಾಗಲಿಲ್ಲಾ..ಮಗನ ದೃಷ್ಟಿಯಲ್ಲಿ ನನ್ನನ್ನು ಹೀರೋ ಮಾಡಿಹೋಗಿದ್ದಳು ನನ್ನ ದೇವತೆ... >> ಕಡೆಯದಾಗಿ ಒಂದು ಮಾತು ಮದುವೆಯಾಗೋದು, ವಿಚ್ಚೇದನ ಪಡೆಯೋದು ಕೇವಲ ಕೆಲ ನಿಮಿಷದ ಕೆಲಸ ಒಮ್ಮೆ ಯೋಚಿಸಿ ನಂಬಿಕೆ ಅನ್ನೋದು ಎಲ್ಲಕ್ಕಿಂತ ದೊಡ್ಡದು...ಈ ಕಥೆಯಿಂದ ಒಂದಾದರೂ ವಿಚ್ಚೇದನ ನಿಂತರೆ ಅಷ್ಟೇ ಸಾಕು.. ಆ ನಂಬಿಕೆ ಇದೆ ಅದ್ದರಿಂದ ಎಲ್ಲರಿಗೂ ಶೇರ್ ಮಾಡಿ.. >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout.
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.