Tumba chenagide kavana

On Sep 9, 2017 4:28 PM, "SURESH JAKATI" <jakatisur...@gmail.com> wrote:

> ಬಲಿ(ಗೌರಿ ಲಂಕೇಶರ ಹತ್ಯೆ) ಖಂಡಿಸಿ.
> --by ಸುರೇಶ ಜಕಾತಿ.ಜಮಖಂಡಿ
>
> ಓ ಸದ್ಗುರುವೇ
> ನೀನು ಹೇಳಿದ್ದು ಪುಣ್ಯಕೋಟಿಯ ಹಾಡು
> ಪಾಪಿಗಳ ಪ್ರಾಯಶ್ಚಿತ್ತ
> ಭಂಡರು,ಪುಂಡರು,ಪ್ರಚಂಡರು
> ಬೈರಾಗಿಗಳಾಗುವ ಮಾತು.
> ಬೌಧ್ದಿಕ ವಿವೇಚನಾರಹಿತ
> ಭಂಡರು,ಸೋಗಲಾಡಿಗಳಿಗೆ
> ಕಿವಿ ಹಿಂಡುವರಾರು?
>
> ಓ ಸದ್ಗುರುವೇ
> ನೀನು ಕಲಿಸಿದ್ದು ಮೌನ,ಧ್ಯಾನ
> ,ಪ್ರಾರ್ಥನೆಯಂತಹ ಚಿಂತನೆ
> ಜಗದ ಜನರ ಕೊಲ್ಲುವ ಪರಿಪಾಠ
> ಹನುಮನ ಬಾಲದಂತೆ ಬಳೆಯುತ್ತಿದೆ
> ಸಮುದಾಯದಲ್ಲಿ!
> ಎದೆಹಾಲು ನೀಡಿದ ತಾಯಿಯೇ
> ಕತ್ತು ಹಿಸುಕಿ ಕೊಂದು ಸಾಯಿಸುವಂತೆ.
> ಕಾರ್ಕೋಟಕ ವಿಷ ಸರ್ಪಕ್ಕೂ
> ಕರುಣೆ,ಅಂತಃಕರಣ ಇದೆ.
> ಒಣ ಮಾತು ಹೇಳುವ ಮನಜರಲ್ಲಿ
> ಮಮಕಾರದ ಮಾತು ಇನ್ನೆಲ್ಲಿ?
>
> ಓ ಸದ್ಗುರುವೇ
> ಮಾರುಕಟ್ಟೆಯಲ್ಲಿ ಈಗ ಸಾಲು
> ಸಾಲಾದ ಕೊಲೆಗಳು
> ಕೊಂಡು ಕೊಳ್ಳುವವರೆಲ್ಲರು ಬಕಾಸುರರು
> ಸಮಾಜ ತಿದ್ದುವ ಸೋಗಲಾಡಿಗಳು
> ಮಂಚದ ಮೇಲೆ ಮಲಗಿದ್ದಾರೆ
> ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ
> ನೇತುಹಾಕಿದ್ದಾರೆ ಅದಕ್ಕೆ
> ಬಹಳ ಬೆಲೆ ಕಡಿಮೆ.
> ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು
> ತುಂಬಾ ಬೆಲೆಯುಳ್ಳ
> ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ.
> ಯಾವುದನ್ನು ಖರೀದಿಸಲಿ.
>
> ಓ ಸದ್ಗುರುವೇ
> ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ
> ಹಸಿದ ಹೆಬ್ಬುಲಿಯೊಂದು
> ಹುಸಿಯಾಗಿ ನುಡಿಯದ ತಾಯಿ ಹೃದಯದ
> ಗೋವಿನ ಹಾಡು.
> ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು
> ಹೊಂಚು ಹಾಕಿ ತಿನ್ನದೆಯೇ
> ಹಸಿವೆಯಿಂದ ಬಳಲುತ್ತಿತ್ತು.
> 'ಸತ್ಯಂ ವದ ದರ್ಮಂ ಚರ'ಎಂದು
> ಹಸಿದ ಹುಲಿ ಹಾರಿ ನೆಗೆಯಿತು.
> ಆದರೆ
> ಇಂದೇಕೆ ಬಲಯಾದಳು ಆ ಗೌರಿ.?
>
> ಓ ಸದ್ಗುರುವೇ
> ಹುಟ್ಟು ಆಕಸ್ಮಿಕ ಸಾವು ಸಹಜ
> ಇದು ನೀನು ಕಲಿಸಿದ ದಿವ್ಯಪಾಠ
> ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ.
> ಹೋದವರೆಲ್ಲರೂ
> ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ
> ಮರುಳು ಸಾಮ್ರಾಟರು.
> ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ
> ಬದುಕಿದ್ದವಳು ನಮ್ಮ ಗೌರಿ
> ಹೇಳು ಗುರುವೇ
> ಗಜಮುಖನೇ ಬಲಿತೆಗೆದುಕೊಂಡನೇ?
>
> ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ
> ಧ್ಯೇಯ ಮಹಾವಾಕ್ಯ
> ನೆನಪಾಗುತ್ತಿದೆ ಇಂದು ನನಗೆ
> ಓ ಸದ್ಗುರುವೇ
> ಇಂದೇ ದೀಕ್ಷೆ ನೀಡು ನನಗೆ ,
> ಪಾತಕಿಗಳನ್ನು ಕೊಲ್ಲಲೇ?
> ವೈಚಾರಿಕ ಕ್ರಾಂತಿ ಎಬ್ಬಿಸಲೇ?
> ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ?
> ಹೇಳು ಓ ಸದ್ಗುರುವೆ ನೀನೊಬ್ಬನೇ
> ವೈಚಾರಿಕ ಪುರುಷೋತ್ತಮ.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to