ಬಹಳ ಚೆನ್ನಾಗಿರುವ ಕಥೆ On 14-Oct-2017 4:58 pm, "Anasuya M R" <anasuy...@gmail.com> wrote:
> ಸುಂದರವಾದ ಕಥೆ ಇಷ್ಟವಾಯಿತು ಹಂಚಿಕೊಳ್ಳುವ > > ಮಿ. ರಾವ್ ತಮ್ಮ ವ್ಯವಹಾರ ಉತ್ತಮವಾಗಿರುವಾಗಲೇ ಪಟ್ಟಣದ ಹೊರಗೆ ಒಂದು ಜಾಗ ಖರೀದಿಸಿ > ಉತ್ಕ್ರಷ್ಟವಾದ ಒಂದು ದೊಡ್ಡ ಮನೆಯನ್ನು ಕಟ್ಟಿಸಿದ್ದರು. ಈಗ ನಿವ್ರತ್ತಿಯ ಬಳಿಕ ಅದೇ > ಮನೆಯಲ್ಲಿವಾಸ. ಮನೆ ಅಂದರೆ ಮೂರಂತಸ್ತಿನ ಅರಮನೆ. ಹೂದೋಟದ ಮದ್ಯ ಸುಂದರವಾದ ಈಜುಕೊಳ ವಿವಿಧ > ಫಲ ಪುಷ್ಪಗಳ ತೋಟ... > ಮನೆಯ ಹಿಂದೆ ನೂರುವರ್ಷಗಳಷ್ಟು ಹಳೆಯ ಮಾವಿನ ಮರ. ಈ ಮಾವಿನ ಮರದಿಂದಾಗಿಯೇ ಈ ಜಾಗ > ಖರೀದಿಸಿ ಮನೆ ಕಟ್ಟಿದ್ದು. ರಾಯರ ಹೆಂಡತಿಗೆ ಮಾವಿನ ಮೇಲೆ ಎಲ್ಲಿಲ್ಲದ ಪ್ರೀತಿ. > > ಇತ್ತಿಚೆಗೆ ವಾಸಿಸಲು ಪ್ರಾರಂಬಿಸಿದರೂ ಮನೆಗೆ ಹಲವು ಮಳೆಗಾಲ ಅಗಿತ್ತು. ಅದಕ್ಕಾಗಿ ಸ್ವಲ್ಪ > ರಿಪೇರಿ ಕೈಗೊಳ್ಳುವ ಯೋಚನೆಯಲ್ಲಿರುವಾಗ ಗೆಳೆಯರು ವಾಸ್ತು ತಜ್ಞರನ್ನು ಸಂಪರ್ಕಿಸಿ ಮುಂದು > ವರಿಯುವಂತೆ ಅಗ್ರಹಿಸಿದರು. ತಮಗೆ ನಂಬಿಕೆ ಇಲ್ಲದಿದ್ದರೂ ಗೆಳೆಯರ ಒತ್ತಾಯಕ್ಕೆ ಮಣಿದು > ಪಟ್ಟಣದ ಪ್ರಸಿದ್ಧ ವಾಸ್ತು ತಜ್ಞ ಮಿ ಕಾಮತ್ ರನ್ನ ಸಂಪರ್ಕಿಸಿ ಅವರನ್ನು ತಮ್ಮ ಕಾರಿನಲ್ಲೆ > ಕರೆದುಕೊಂಡು ಬರುತ್ತಿದ್ದರು. > > ರಾಯರು ಇತರರಿಗೆ ದಾರಿ ಮಾಡಿಕೊಡುತ್ತಾ ಸಾಗುವುದನ್ನು ನೋಡಿ "ರಾಯರೇ ನೀವು ತುಂಬಾ > ಜಾಗರೂಕತೆಯಿಂದ ವಾಹನ ಚಾಲನೆ ಮಾಡತ್ತೀರಿ " ಎಂದು ತಮ್ಮದೇ ಧಾಟಿಯಲ್ಲಿ ಕೇಳಿದರು. ರಾಯರು > ತಮ್ಮ ಮುಗುಳುನಗುವನ್ನು ಸ್ವಲ್ಪ ಹೆಚ್ಚಿಸುತ್ತಾ "ಹೌದು ಕಾಮತರೇ, ಗಡಿಬಿಡಿಯಲ್ಲಿರುವವರಿಗೆ > ನಾವೇಕೆ ತೊಂದರೆ ಕೊಡುವುದು. ಅವರು ಏನೋ ಅಗತ್ಯ ಕೆಲಸಕ್ಕಾಗಿ ತರಾತುರಿಯಲ್ಲಿದ್ದಾರೆ ಆದಷ್ಟು > ಸಹಕರಿಸುವುದು" ಎಂದು ಮುಖ್ಯರಸ್ತೆಯಿಂದ ತಮ್ಮ ಮನೆ ಕಡೆ ಸಾಗುವ ಕಿರಿದಾದ ರಸ್ತೆಗೆ ಕಾರನ್ನು > ತಿರುಗಿಸಿದರು. > > ಊರ ಸೌಂದರ್ಯವನ್ನು ಸವಿಯುತ್ತಿದ್ದ ಕಾಮತರಿಗೆ ಗಿಡಗಂಟಿಗಳ ಮಧ್ಯದಿಂದ ಕಾರಿನ ದಾರಿಗೆ > ಅಡ್ಡವಾಗಿ ಮಗು ಓಡಿದುದು ದಿಗಿಲಾಯಿತು. ರಾಯರು ನಿಲ್ಲಿಸಿದ ಕಾರನ್ನು ಮುಂದೆ ಕೊಂಡು ಹೋಗದೇ > ಇರುವುದು ಇನ್ನು ಅಷ್ಚರ್ಯವು ಆಯಿತು. ಅಷ್ಟರಲ್ಲಿ ಇನ್ನೊಂದು ಮಗು ಕೂಡ ಹಾಗೆ ಒಡಿತು. > ಇದನ್ನೇ ನಿರೀಕ್ಷಿಸುತ್ತಿದ್ದ ರಾಯರ ಕಣ್ಣುಗಳಲ್ಲಿನ ಸಮಾಧಾನವನ್ನು ನೋಡಿ ಕಾತರರಾದ ಕಾಮತರು > "ರಾಯರೇ, ನಿಮಗೆ ಹೇಗೆ ತಿಳಿಯಿತು ಇನ್ನೊಂದು ಮಗು ಕೂಡ ಬರುವುದೆಂದು". " ಕಾಮತರೇ, ಮಕ್ಕಳೇ > ಹಾಗೆ ಒಬ್ಬರೇ ಓಡುವುದು ತುಂಬಾ ಅಪರೂಪ. ಯಾರಾದರು ಜೊತೆಯಲ್ಲಿಲ್ಲದೇ ಇಂತಹ ಜಾಗದಲ್ಲಿ ಹೇಗೆ > ಓಡುತ್ತಿರುತ್ತಾರೆ" ಎಂದು ಸಮಾದಾನದ ಉಸಿರು ಬಿಟ್ಟು ಕಾರನ್ನು ತಮ್ಮ ಮನೆ ಕಡೆಗೆ > ಚಲಾಯಿಸಿದರು. ನಿಮ್ಮ ಮುತುವರ್ಜಿಗೆ ನನ್ನದೊಂದು ಸಲಾಂ ಎಂದು ಕಾಮತರು ನಕ್ಕರು. > > ತಮ್ಮ ಮನೆ ಮುಂದೆ ಕಾರನ್ನು ನಿಲ್ಲಿಸಿ ಸ್ವಲ್ಪ ಸಮಯ ಕಾದು ಗೇಟನ್ನು ತೆರೆದು ಕಾಮತರನ್ನು > ಒಳಗೆ ಕರೆದರು. ಅರ್ಥವಾಗದೇ ಕಾಮತರ ಕೇಳಿಯೆ ಬಿಟ್ಟರು " ಯಾಕೆ ಸ್ವಲ್ಪ ಹೊತ್ತು ಹೊರಗೆ > ಕಾದಿದ್ದು". ರಾಯರು ತಮ್ಮ ಶೈಲಿಯಲ್ಲಿಯೇ" ಅದಾ. ನಾನು ಹೊರಗೆ ಹೋಗಿರುವಾಗ ಕೆಲವು ಮಕ್ಕಳು > ಮಾವಿನ ಹಣ್ಣು ತಿನ್ನಲು ಬರುತ್ತಾರೆ. ನಾನು ಬಂದ ಕೂಡಲೆ ಹೆದರಿ ನೂರು ವರ್ಷದ ಹಳೆಯ ದೊಡ್ಡ > ಮರದಿಂದ ಹಾರಿ ಓಡಲು ಹೋಗಿ ಎಲ್ಲಿ ಪೆಟ್ಟು ಮಾಡಿಕೊಳ್ಳಬಹುದು ಎಂದು ಸ್ವಲ್ಪ ನಿಧಾನ > ಮಾಡಿದೆ." ಎಂದು ಮುಗುಳ್ನಕ್ಕರು. ಗೇಟಲ್ಲೇ ನಿತ್ತ ಕಾಮತರು ಒಮ್ಮೆ ಇಡಿ ಪರಿಸರವನ್ನು ನೋಡಿ > ದೀರ್ಘವಾದ ಉಸಿರು ತೆಗೆದುಕೊಂಡು "ರಾಯರೇ ಈ ಮನೆಗೆ ವಾಸ್ತು ಶಾಸ್ತ್ರದ ಅಗತ್ಯ ಇಲ್ಲ." > ಎಂದುಬಿಟ್ಟರು. ಯಾವಾಗಲೂ ಸ್ಥಿತ ಪ್ರಜ್ಞೆಯ ರಾಯರು ಆಶ್ಚರ್ಯ ಗೊಂಡು "ಯಾಕೆ. ಏನಾಯಿತು > ಕಾಮತರೇ" ಎಂದರು. > > "ಬೇರೆಯವರ ಒಳಿತು ಮತ್ತು ಅದಕ್ಕಾಗಿ ತಮ್ಮ ಕ್ರಿಯೆ ಮತ್ತು ಸಮಯನ್ನು ಮುಡಿಪಾಗಿಸುವ > ನಿಮ್ಮಂತವರು ಇರುವ ಪ್ರದೇಶದ ಎಲ್ಲಾ ದಿಕ್ಕುಗಳೂ, ಎಲ್ಲಾ ಮೂಲೆಗಳೂ ಶುಭವಾಗಿರುತ್ತದೆ." > ಎಂದು ಕೈ ಮುಗಿದರು. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.