Valuable story mam On Jan 18, 2018 9:08 PM, "Nagaraju V" <[email protected]> wrote:
ಬಹಳ ಚೆನ್ನಾಗಿದೆ ಧನ್ಯವಾದಗಳು. On 18-Jan-2018 9:00 PM, "Sameera samee" <[email protected]> wrote: > ತುಂಬಾ ಸುಂದರವಾದ ಮತ್ತು ಅಥ೯ಗಭಿ೯ತವಾದ ಕಥೆ ದಯವಿಟ್ಟು ಪ್ರತಿಯೊಬ್ಬ ಶಿಕ್ಷಕರು ಓದಿ, > 1000 ರುಪಾಯಿ ಕೊಡುವಿರಾ ಟೀಚರ್? > > ಕ್ಲಾಸಿನಲ್ಲಿ ಅತಿ ಹೆಚ್ಚು ರಜೆ ಮಾಡುವ ಹುಡುಗ... > ಈ ಹುಡುಗ ನನ್ನತ್ರ ಯಾಕೆ ದುಡ್ಡು ಕೇಳುತ್ತಿದ್ದಾನೆ..? ಆ ಟೀಚರ್ ಮನಸಲ್ಲಿ ಕೇಳಿಕೊಂಡರು. > ಕೊಡಬೇಡಿ ಟೀಚರ್... ಮತ್ತೆ ಅವನು ಕ್ಲಾಸಿಗೂ ಬರಲ್ಲಾ... ನಿಮ್ಮ ಹಣವನ್ನೂ ಕೊಡಲ್ಲ... > ಆ ಹುಡುಗ ಶಾಂತಾ ಟೀಚರತ್ರ ದುಡ್ಡು ಕೇಳುತ್ತಿರುವುದನ್ನು ಕೇಳಿಸಿಕೊಂಡ ಆಶಾ ಟೀಚರ್ > ಹೇಳಿದರು. > ಖಂಡಿತವಾಗಿಯೂ ವಾಪಾಸ್ ಕೊಡುವೆ ಟೀಚರ್. ಬೇರೆ ಯಾರೂ ಸಹಾಯ ಮಾಡಲಿಲ್ಲ ಟೀಚರ್. ಆ ಹುಡುಗ > ಪುನಃ ಬೇಡಿದ. > ಯಾಕೆ ಅಂತ ಕೂಡಾಕೇಳದೆ ಶಾಂತಾ ಟೀಚರ್ ಬ್ಯಾಗ್ ನಿಂದ ಸಾವಿರ ರುಪಾಯಿಗಳನ್ನು ತೆಗೆದು > ಕೊಟ್ಟರು. > ಖಂಡಿತವಾಗಿಯೂ ಈ ಹಣ ವಾಪಸ್ ಕೊಡುತ್ತೇನೆ ಟೀಚರ್ ಅಂತ ಹೇಳಿ ಆ ಹುಡುಗ ಓಡಿ ಮರೆಯಾದ. > ಕೆಲವು ದಿನಗಳು ಕಳೆದವು. ಆ ಹುಡುಗ ಕ್ಲಾಸಿಗೆ ಬರಲೇ ಇಲ್ಲ. > ಶಾಂತ ಟೀಚರ್ ಯೋಚಿಸಿದರು. > ಆ ಹುಡುಗ ನನಗೆ ಮೋಸ ಮಾಡಿದನೇ? ಯಾಕೆ ಅಂತಾದರೂ ಕೇಳಿ ದುಡ್ಡು ಕೊಡಬಹುದಿತ್ತು.. > ಹೋಗಲಿ ಪರವಾಗಿಲ್ಲ... ಆಕೆ ಸ್ವತಃ ಹೇಳಿಕೊಂಡರು. > ಒಂದು ದಿನ ಶಾಂತಾ ಟೀಚರ್ ಮಾರ್ಕೆಟ್ ನಲ್ಲಿ ಆ ಹುಡುಗನನ್ನು ನೋಡಿದರು. ಹೊರೆ ಹೋರುವ ಕೆಲಸ > ಮಾಡುತ್ತಿದ್ದ. ಟೀಚರನ್ನು ನೋಡಿದ ಕೂಡಲೆ ಮುಗುಳ್ನಗುತ್ತಾ ಟೀಚರ್ ನ ಹತ್ತಿರ ಬಂದ. > ಟೀಚರ್ ಯಾಕೆ ಇಲ್ಲಿ ಬಂದಿದ್ದು? ನನ್ನನ್ನು ಹುಡುಕುತ್ತಾ ಹೊರಟಿದ್ದೀರಾ ಹೇಗೆ? ನಾಳೆ ಒಂದು > ದಿನ ಕೂಡಾ ಕೆಲಸ ಮಾಡಿದರೆ ನಿಮ್ಮ ಹಣವನ್ನು ಕೊಡುವೆ. ತಡವಾಗಿದ್ದಕ್ಕೆ ಕ್ಷಮಿಸಿ. > > ಏನು ಹೇಳಬೇಕೆಂದು ತೋಚದೆ ಟೀಚರ್ ಹಾಗೇ ನಿಂತುಬಿಟ್ಟರು. > > ಆ ಹುಡುಗನ ಹೆಸರು ರಾಜು. > ಸ್ವಲ್ಪ ಹೊತ್ತಿನ ಮೌನದ ಬಳಿಕ ಟೀಚರ್ ಕೇಳಿದರು - ಯಾಕೆ ರಾಜು ಶಾಲೆಗೆ ಬರುತ್ತಾ ಇಲ್ಲ? > ರಾಜು - ಇನ್ನು ಬರಲ್ಲಾ ಟೀಚರ್. ಮನೆಯಲ್ಲಿ ಅಕ್ಕ ಒಬ್ಬಳೇ ಇರೋದು. ಅವತ್ತು ಅಮ್ಮನಿಗೆ > ಸೌಖ್ಯವಿಲ್ಲದ ಕಾರಣ ಟೀಚರ್ ನಿಂದ ಹಣ ಪಡೆದದ್ದು. ಆದರೆ... ಅಮ್ಮ ನಮ್ಮನ್ನು ಅಗಲಿದರು. ಆಕೆ > ಬದುಕಬಹುದೆಂಬ ಚಿಕ್ಕ ಆಸೆಯಿತ್ತು.. ಹಲವರತ್ರ ಅಮ್ಮನಿಗೆ ಔಷಧ ತರಲು ದುಡ್ಡನ್ನು ಸಾಲ > ಕೇಳಿದೆ.. ಎಲ್ಲೂ ಸಿಗದಾದಾಗ ಬೇರೆ ದಾರಿ ಕಾಣದೆ ಟೀಚರ್ ಬಳಿ ಬಂದು ಹಣ ಪಡೆದು ಅಮ್ಮನನ್ನು > ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಮ್ಮನ್ನು ಬಿಟ್ಟು ಹೊರಟೋದರು... > ಹೇಳುವಾಗ ರಾಜುವಿನ ಕಂಠ ಗದ್ಗರಿಸಿತು... ರಾಜು ಮುಂದುವರಿಸುತ್ತಾ ಹೇಳಿದ. ಒಂದು > ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ ಟೀಚರ್. ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಬೇಕು.... > ಅಲ್ಲಿ ಸಿಗುವ ಸಂಬಳದ ಜೊತೆಗೆ ಹೀಗೆ ಹೊರೆಹೋರುವ ಕೆಲಸದಲ್ಲೂ ಒಂದಿಷ್ಟು ದುಡ್ಡು ಖರ್ಚಿಗೆ > ಅಂತ ಸಿಗುತ್ತಿದೆ... ಹೇಗಾದರೂ ಬದುಕಬೇಕಲ್ಲ ಟೀಚರ್... > ಟೀಚರ್ - ರಾಜು ನೀನು ಕಲಿಯಬೇಕು. > ಆತ ಆಶ್ಚರ್ಯ ದಿಂದ ಇನ್ನು ಅದೆಲ್ಲ ಆಗಲ್ಲ ಟೀಚರ್... > ಟೀಚರ್ - ಯಾಕೆ ಆಗಲ್ಲ ರಾಜು ? ಆಗಬೇಕು. ನೀನು ನಾಳೆ ಸಂಜೆ ಮನೆಗೆ ಬರಬೇಕು. ನೀನು ಮಿಸ್ > ಮಾಡಿಕೊಂಡ ಪಾಠಗಳನ್ನು ನಾನು ಹೇಳಿಕೊಡುತ್ತೇನೆ... ನಿನಗೆ ಕಲಿಯಲು ಒಳ್ಳೆಯ ಬುದ್ದಿ ಇದೆ. > ಸ್ವಲ್ಪ ನಿನ್ನ ಮನಸಿನ ಒತ್ತಡವನ್ನೆಲ್ಲಾ ಕಡಿಮೆ ಮಾಡಿ ಕಲಿಯಬೇಕು. ಒಳ್ಳೆಯ ಮಾರ್ಕ್ ಗಳಿಸಿ > ಪಾಸಾಗಬೇಕು. > ಅಷ್ಟು ಹೇಳಿ ರಾಜುವಿನ ರಿಪ್ಲೈ ಗೆ ಕಾಯದೆ ಟೀಚರ್ ನಡೆದು ಸಾಗಿದರು.. > > ಮರುದಿನ ಸಂಜೆ ರಾಜು ತನಗೆ ಸಿಕ್ಕಿದ ಸಂಬಳದೊಂದಿಗೆ ಟೀಚರ್ ನ ಮನೆ ತಲುಪಿದ. > ರಾಜು ಟೀಚರಿಗೆ ಸಾವಿರ ರುಪಾಯಿಗಳನ್ನು ಮೊದಲು ಕೊಡಲು ಲೆಕ್ಕ ಮಾಡುತ್ತಿರುವಾಗ ಟೀಚರ್ > ತಡೆದು ಇದು ಈಗ ನಿನ್ನತ್ರ ಇರಲಿ. ನಾನು ಮತ್ತೆ ನಿನ್ನಿಂದ ಕೇಳಿ ಪಡೆಯುವೆ ಅಂದರು. > ರಾಜು - ಟೀಚರ್ ನನಗೋಸ್ಕರ ಯಾಕೆ ಕಷ್ಟಪಡುತ್ತಿದ್ದೀರಾ...? ನಾನು ನನ್ನ ಕೆಲಸದಲ್ಲಿ > ಹೊಂದಿಕೊಂಳ್ಳುತ್ತಿದ್ದೇನೆ.. > ಟೀಚರ್ - ನನಗೆ ಕಷ್ಟವಾ..?? ಹಾಗಂತ ಯಾರು ಹೇಳಿದ್ದು?? ಜ್ಞಾನವನ್ನು ಹಂಚಿಕೊಡುವುದು > ಒಬ್ಬ ಗುರುವಿನ ಕರ್ತವ್ಯವಾಗಿದೆ... ನೋಡು ರಾಜು ನೀನು ಹಾಗೇನೂ ಚಿಂತಿಸಬಾರದು. ಕಲಿತು > ಒಳ್ಳೆಯ ನೆಲೆಯನ್ನು ಕಂಡುಕೊಳ್ಳಬೇಕು... > ರಾಜು - ಆಸೆಯಿದೆ ಟೀಚರ್... ಆದರೆ , ನನ್ನ ಅವಸ್ಥೆ.... ಅದಕಾರಣವೇ ಕಲಿಕೆ ಬೇಡ ಅಂತ > ನಿರ್ಧರಿಸಿರೋದು... ಈಗ ತಾವು ಹೇಳುವಾಗ ಏನೋ ಒಂದು ಭರವಸೆ ಮೂಡುತ್ತಿದೆ.. ಯಾರಾದರೂ ನನಗೆ > ಸಹಾಯ ಮಾಡಿಯಾರು ಅಂತ ಅನಿಸುತ್ತಿದೆ... > ಟೀಚರ್ - ನಿನ್ನಿಂದ ಖಂಡಿತವಾಗಿಯೂ ಸಾಧ್ಯ. ನಿನ್ನ ಮೇಲೆ ನನಗೆ ನಂಬಿಕೆಯಿದೆ. ಕಲಿತು > ಒಳ್ಳೆಯ ಮಾರ್ಕ್ ನೊಂದಿಗೆ ಪಾಸಾಗಿ, ಜೀವನದಲ್ಲಿ ಒಳ್ಳೆಯ ನೆಲೆಯನ್ನು ಕಂಡುಕೊಳ್ಳಬೇಕು. > ಅದುವೇ ನೀನು ನನಗೆ ಕೊಡುವ ಗುರುದಕ್ಷಿಣೆ.... > > ಹಾಗೇ ರಾಜು ಕಲಿಯಲಾರಂಬಿಸಿದ.. ಬಹಳ ಬೇಗನೇ ಒಂದು ಛಲದೊಂದಿಗೆ ಪಾಠಗಳನ್ನು > ಅರ್ಥಮಾಡಿಕೊಂಡು, ಪರೀಕ್ಷೆಯಲ್ಲಿ ಉಳಿದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಕ್ಲಾಸಿನಲ್ಲಿ > ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡ... ಶಾಂತಾ ಟೀಚರ್ ನ ಪ್ರೀತಿಯ ಶಿಷ್ಯನಾಗಿ ಬದಲಾದ.. > ರಾಜುವಿಗೆ ಶಾಂತಾ ಟೀಚರ್ ಕೇವಲ ಟೀಚರ್ ಆಗಿರಲಿಲ್ಲ... ಅಮ್ಮನೂ ಆಗಿದ್ದರು. > ಹೀಗಿರುವಾಗ ಟೀಚರ್ ನ ಪತಿ ವಿದೇಶದಲ್ಲಿದ್ದು ಪತಿಯ ಒತ್ತಾಯದ ಮೇರೆಗೆ ಶಾಂತಾಟೀಚರ್ ಮತ್ತು > ಮಕ್ಕಳು ವಿದೇಶಕ್ಕೆ ಹೋಗಲು ನಿರ್ಧರಿಸಿದರು. > ವಿಷಯ ತಿಳಿದ ರಾಜು ಟೀಚರ್ ನ ಮನೆಗೆ ಓಡೋಡಿ ಬಂದ. > ರಾಜು - ಟೀಚರ್... ತಾವು ಕೂಡಾ ನನ್ನನ್ನು ಒಂಟಿಯಾಗಿಸಿ ಹೊರಟಿದ್ದೀರಾ...? ರಾಜುವಿನ > ಕಣ್ಣುಗಳು ತುಂಬಿತು... > ಟೀಚರ್ - ಹೋಗಲೇಬೇಕಾದ ಅನಿವಾರ್ಯತೆ ಇದೆ ರಾಜೂ. ನೀನು ಯಾವತ್ತೂ ಒಂಟಿಯಾಗಲಾರ... ನನ್ನ > ಪ್ರಾರ್ಥನೆ ಎಂದೆಂದಿಗೂ ನಿನ್ನ ಜೊತೆ ಇರುತ್ತದೆ. ಚೆನ್ನಾಗಿ ಕಲಿಯಬೇಕು ಆಯಿತಾ... ಶಾಂತಾ > ಟೀಚರಿನ ದುಃಖದ ಕಟ್ಟೆ ಒಡೆಯಿತು. ಬೇರೇನೂ ರಾಜುವಿನತ್ರ ಹೇಳಲು ಟೀಚರಿಗೆ ಇರಲಿಲ್ಲ. > ರಾಜುವಿನ ಮನೆಯ ಖರ್ಚು ಮತ್ತು ವಿದ್ಯಾಭ್ಯಾಸದ ಖರ್ಚುಗಳಿಗಾಗಿ ಟೀಚರ್ ತನ್ನ ಗೆಳತಿಯೊಬ್ಬಳ > ಹತ್ತಿರ ಒಂದಿಷ್ಟು ದುಡ್ಡನ್ನು ಕೊಟ್ಟು ಹೋಗಿದ್ದರು.. > > ಕಾಲಚಕ್ರವು ಉರುಳಿತು. ಶಾಂತಾ ಟೀಚರ್ ನ ಪತಿಯ ವಿಯೋಗವು ಟೀಚರ್ ನ ಬದುಕಿನಲ್ಲಿ ದೊಡ್ಡ > ಬಿರುಗಾಳಿಯನ್ನೇ ಸೃಷ್ಟಿಮಾಡಿತು... > ಕಷ್ಟಗಳು ಏನೆಂದು ಅರಿಯದೆ ಬದುಕಿದ ತನ್ನ ಮಕ್ಕಳಿಗೆ ಟೀಚರ್ ಬಾರವಾಗತೊಡಗಿದರು... > ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂಬ ವಿಷಯದಲ್ಲಿ ಮಕ್ಕಳು ಪರಸ್ಪರ ಜಗಳಾಡತೊಡಗಿದರು... > ಕೊನೆಗೆ ಅಮ್ಮನನ್ನು ಊರಿನಲ್ಲಿರುವ ವೃದ್ಧಾಶ್ರಮದಲ್ಲಿ ಬಿಡಲು ನಿರ್ಧರಿಸಿದರು... > ಶಾಂತಾ ಟೀಚರ್ ಮನಸಲ್ಲಿ ಅಂದುಕೊಂಡರು. ಹುಟ್ಟಿದ ಊರಲ್ಲೇ ಸಾಯಬಹುದಲ್ಲಾ ಅಂತ ತನ್ನನ್ನು > ತಾನೇ ಸಂತೈಸಿಕೊಂಡರು.... ಮಕ್ಕಳ ಮಾತುಗಳನ್ನು ಅನುಸರಿಸದೆ ಬೇರೆ ದಾರಿಯೂ ಇರಲಿಲ್ಲ.... > ವರ್ಷಗಳ ನಂತರ ವಿದೇಶದಿಂದ ವಾಪಾಸಾದ ಶಾಂತಾ ಟೀಚರ್ ವೃದ್ದಾಶ್ರಮದಲ್ಲಿ ಇತರ ಅಮ್ಮಂದಿರ > ಜೊತೆ ಬಹು ಬೇಗ ಹೊಂದಿಕೊಂಡರು.... > ಒಂದು ದಿನ ಅಲ್ಲಿನ ಕೆಲಸದಾಕೆ ಅಮ್ಮು ಬಂದು ಹೇಳಿದಳು - ಶಾಂತಾ ಟೀಚರಿಗೆ ಒಬ್ಬರು ವಿಸಿಟರ್ > ಇದ್ದಾರೆ... > ಯಾರು ಅಂತ ನೋಡಲು ಅಮ್ಮುವಿನ ಜೊತೆ ವರಾಂಡಾಕ್ಕೆ ಹೋದರು... > ಟೀಚರ್..... ಆತ ಮುಗುಳ್ನಗುತ್ತಾ ಕರೆದ. > ರಾಜು.....!! ಎಷ್ಟು ದೊಡ್ಡವನಾಗಿಬಿಟ್ಟಿದ್ದೀಯಾ...!! > ರಾಜು - ಟೀಚರ್ ನಿಮ್ಮ ರಾಜು ಈಗ ಕೇವಲ ರಾಜು ಅಲ್ಲಾ... ಡಾಕ್ಟರ್ ರಾಜುವಾಗಿದ್ದಾನೆ... > ಆತ ಟೀಚರ್ ನ ಕೈಗಳನ್ನು ಹಿಡಿದು ಒತ್ತುತ್ತಾ ಹೇಳಿದ. > ಸಂತೋಷದಿಂದ ಟೀಚರ್ ನ ಕಣ್ಣುಗಳಲ್ಲಿ ಆನಂದಬಾಷ್ಪವು ತುಂಬಿತು... > ರಾಜು - ಯಾಕೆ ಟೀಚರ್ ಅಳುತ್ತಿದ್ದೀರಾ...? ಆತ ಟೀಚರ್ ನ ಕಣ್ಣುಗಳನ್ನು ಒರೆಸಿದ. > ಟೀಚರ್ - ಸಂತೋಷದಿಂದ ಕಣ್ಣುಗಳು ತುಂಬಿದ್ದು ರಾಜೂ... ಸಾಯೋದಕ್ಕೆ ಮುಂಚೆ ನಿನ್ನನ್ನು > ನಾನು ಅಂದುಕೊಂಡ ಹಾಗೇ ಒಳ್ಳೆಯ ನೆಲೆಯಲ್ಲಿ ನೋಡಲು ಸಾಧ್ಯವಾಯಿತಲ್ಲಾ.... ಟೀಚರ್ ಆತನ > ತಲೆಯನ್ನು ಪ್ರೀತಿಯಿಂದ ಸವರಿದರು.... > > ರಾಜು - ನಾನು ಬಂದದ್ದು ನಿಮ್ಮನ್ನು ಕರಕ್ಕೊಂಡು ಹೋಗೋಕೆ... ನೀವು ಇರಬೇಕಾದದ್ದು ಇಲ್ಲಿ > ಅಲ್ಲ.... > ಅನಾಥತ್ವದ ನಡುವಿನಲ್ಲಿ ಬೆಳೆದು, ಒಬ್ಬಳು ತಾಯಿಗೆ ಕೊಡಬೇಕಾದ ಎಲ್ಲಾ ಸ್ನೇಹವನ್ನೂ > ಕೂಡಿಟ್ಟು ನನ್ನ ಪತ್ನಿ ನಿಮಗಾಗಿ ಕಾಯುತ್ತಿದ್ದಾಳೆ... ಅಜ್ಜಿ ಕಥೆಗಳನ್ನು ಕೇಳುತ್ತಾ ಮಲಗಿ > ನಿದ್ರಿಸಲು ಕಾತುರದಿಂದ ಕಾಯುತ್ತಿದ್ದಾರೆ ನನ್ನ ಮುದ್ದು ಮಕ್ಕಳು.... ಹೋಗೋಣ ಹೊರಡಿರಿ.... > ಟೀಚರ್ - ಕಂದಾ.... ಟೀಚರ್ ನ ಕಣ್ಣುಗಳು ತುಂಬಿ ತುಳುಕಿದವು... > ರಾಜು - ಇನ್ನು ಈ ಮಗ ಇರುವಷ್ಟು ದಿನ ನಿಮ್ಮ ಈ ಕಣ್ಣುಗಳು ಒದ್ದೆಯಾಗಲು ಬಿಡಲಾರೆ.... ಆತ > ಟೀಚರ್ ನ ಕೈಯನ್ನು ಜೋರಾಗಿ ಒತ್ತಿ ಹಿಡಿದು ಹೇಳಿದ... ಆ ಹಿಡಿತದಲ್ಲಿ ಸ್ನೇಹ, ನಂಬಿಕೆ, > ಆಶ್ರಯ, ಧೈರ್ಯ, ಆತ್ಮವಿಶ್ವಾಸ ಎಲ್ಲವೂ ಅಡಗಿತ್ತು.... > ಒಬ್ಬಳು ಅಮ್ಮನಿಗೆ ಕೊಡುವುದಕ್ಕೆ ಕೂಡಿಟ್ಟ ಸ್ನೇಹವೆಲ್ಲಾ ಆತನ ಕಣ್ಣುಗಳಲ್ಲಿ ಆ ಟೀಚರ್ > ಕಂಡರು.........( ಫಾರ್ವರ್ಡ್ ) > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8Yx > geXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ಷಕರ > ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/Public_ > Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL 8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
