ಅತ್ಯುತ್ತಮ ಕಣ್ಣೀರು ಬರುವುದೇ ಗೊತ್ತಾ ಗುವುದಿಲ್ಲ
On Jan 18, 2018 9:22 PM, "arpana kadabi" <[email protected]> wrote: > Valuable story mam > On Jan 18, 2018 9:08 PM, "Nagaraju V" <[email protected]> wrote: > > ಬಹಳ ಚೆನ್ನಾಗಿದೆ ಧನ್ಯವಾದಗಳು. > > On 18-Jan-2018 9:00 PM, "Sameera samee" <[email protected]> wrote: > >> ತುಂಬಾ ಸುಂದರವಾದ ಮತ್ತು ಅಥ೯ಗಭಿ೯ತವಾದ ಕಥೆ ದಯವಿಟ್ಟು ಪ್ರತಿಯೊಬ್ಬ ಶಿಕ್ಷಕರು ಓದಿ, >> 1000 ರುಪಾಯಿ ಕೊಡುವಿರಾ ಟೀಚರ್? >> >> ಕ್ಲಾಸಿನಲ್ಲಿ ಅತಿ ಹೆಚ್ಚು ರಜೆ ಮಾಡುವ ಹುಡುಗ... >> ಈ ಹುಡುಗ ನನ್ನತ್ರ ಯಾಕೆ ದುಡ್ಡು ಕೇಳುತ್ತಿದ್ದಾನೆ..? ಆ ಟೀಚರ್ ಮನಸಲ್ಲಿ ಕೇಳಿಕೊಂಡರು. >> ಕೊಡಬೇಡಿ ಟೀಚರ್... ಮತ್ತೆ ಅವನು ಕ್ಲಾಸಿಗೂ ಬರಲ್ಲಾ... ನಿಮ್ಮ ಹಣವನ್ನೂ ಕೊಡಲ್ಲ... >> ಆ ಹುಡುಗ ಶಾಂತಾ ಟೀಚರತ್ರ ದುಡ್ಡು ಕೇಳುತ್ತಿರುವುದನ್ನು ಕೇಳಿಸಿಕೊಂಡ ಆಶಾ ಟೀಚರ್ >> ಹೇಳಿದರು. >> ಖಂಡಿತವಾಗಿಯೂ ವಾಪಾಸ್ ಕೊಡುವೆ ಟೀಚರ್. ಬೇರೆ ಯಾರೂ ಸಹಾಯ ಮಾಡಲಿಲ್ಲ ಟೀಚರ್. ಆ ಹುಡುಗ >> ಪುನಃ ಬೇಡಿದ. >> ಯಾಕೆ ಅಂತ ಕೂಡಾಕೇಳದೆ ಶಾಂತಾ ಟೀಚರ್ ಬ್ಯಾಗ್ ನಿಂದ ಸಾವಿರ ರುಪಾಯಿಗಳನ್ನು ತೆಗೆದು >> ಕೊಟ್ಟರು. >> ಖಂಡಿತವಾಗಿಯೂ ಈ ಹಣ ವಾಪಸ್ ಕೊಡುತ್ತೇನೆ ಟೀಚರ್ ಅಂತ ಹೇಳಿ ಆ ಹುಡುಗ ಓಡಿ ಮರೆಯಾದ. >> ಕೆಲವು ದಿನಗಳು ಕಳೆದವು. ಆ ಹುಡುಗ ಕ್ಲಾಸಿಗೆ ಬರಲೇ ಇಲ್ಲ. >> ಶಾಂತ ಟೀಚರ್ ಯೋಚಿಸಿದರು. >> ಆ ಹುಡುಗ ನನಗೆ ಮೋಸ ಮಾಡಿದನೇ? ಯಾಕೆ ಅಂತಾದರೂ ಕೇಳಿ ದುಡ್ಡು ಕೊಡಬಹುದಿತ್ತು.. >> ಹೋಗಲಿ ಪರವಾಗಿಲ್ಲ... ಆಕೆ ಸ್ವತಃ ಹೇಳಿಕೊಂಡರು. >> ಒಂದು ದಿನ ಶಾಂತಾ ಟೀಚರ್ ಮಾರ್ಕೆಟ್ ನಲ್ಲಿ ಆ ಹುಡುಗನನ್ನು ನೋಡಿದರು. ಹೊರೆ ಹೋರುವ ಕೆಲಸ >> ಮಾಡುತ್ತಿದ್ದ. ಟೀಚರನ್ನು ನೋಡಿದ ಕೂಡಲೆ ಮುಗುಳ್ನಗುತ್ತಾ ಟೀಚರ್ ನ ಹತ್ತಿರ ಬಂದ. >> ಟೀಚರ್ ಯಾಕೆ ಇಲ್ಲಿ ಬಂದಿದ್ದು? ನನ್ನನ್ನು ಹುಡುಕುತ್ತಾ ಹೊರಟಿದ್ದೀರಾ ಹೇಗೆ? ನಾಳೆ >> ಒಂದು ದಿನ ಕೂಡಾ ಕೆಲಸ ಮಾಡಿದರೆ ನಿಮ್ಮ ಹಣವನ್ನು ಕೊಡುವೆ. ತಡವಾಗಿದ್ದಕ್ಕೆ ಕ್ಷಮಿಸಿ. >> >> ಏನು ಹೇಳಬೇಕೆಂದು ತೋಚದೆ ಟೀಚರ್ ಹಾಗೇ ನಿಂತುಬಿಟ್ಟರು. >> >> ಆ ಹುಡುಗನ ಹೆಸರು ರಾಜು. >> ಸ್ವಲ್ಪ ಹೊತ್ತಿನ ಮೌನದ ಬಳಿಕ ಟೀಚರ್ ಕೇಳಿದರು - ಯಾಕೆ ರಾಜು ಶಾಲೆಗೆ ಬರುತ್ತಾ ಇಲ್ಲ? >> ರಾಜು - ಇನ್ನು ಬರಲ್ಲಾ ಟೀಚರ್. ಮನೆಯಲ್ಲಿ ಅಕ್ಕ ಒಬ್ಬಳೇ ಇರೋದು. ಅವತ್ತು ಅಮ್ಮನಿಗೆ >> ಸೌಖ್ಯವಿಲ್ಲದ ಕಾರಣ ಟೀಚರ್ ನಿಂದ ಹಣ ಪಡೆದದ್ದು. ಆದರೆ... ಅಮ್ಮ ನಮ್ಮನ್ನು ಅಗಲಿದರು. ಆಕೆ >> ಬದುಕಬಹುದೆಂಬ ಚಿಕ್ಕ ಆಸೆಯಿತ್ತು.. ಹಲವರತ್ರ ಅಮ್ಮನಿಗೆ ಔಷಧ ತರಲು ದುಡ್ಡನ್ನು ಸಾಲ >> ಕೇಳಿದೆ.. ಎಲ್ಲೂ ಸಿಗದಾದಾಗ ಬೇರೆ ದಾರಿ ಕಾಣದೆ ಟೀಚರ್ ಬಳಿ ಬಂದು ಹಣ ಪಡೆದು ಅಮ್ಮನನ್ನು >> ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಮ್ಮನ್ನು ಬಿಟ್ಟು ಹೊರಟೋದರು... >> ಹೇಳುವಾಗ ರಾಜುವಿನ ಕಂಠ ಗದ್ಗರಿಸಿತು... ರಾಜು ಮುಂದುವರಿಸುತ್ತಾ ಹೇಳಿದ. ಒಂದು >> ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ ಟೀಚರ್. ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಬೇಕು.... >> ಅಲ್ಲಿ ಸಿಗುವ ಸಂಬಳದ ಜೊತೆಗೆ ಹೀಗೆ ಹೊರೆಹೋರುವ ಕೆಲಸದಲ್ಲೂ ಒಂದಿಷ್ಟು ದುಡ್ಡು ಖರ್ಚಿಗೆ >> ಅಂತ ಸಿಗುತ್ತಿದೆ... ಹೇಗಾದರೂ ಬದುಕಬೇಕಲ್ಲ ಟೀಚರ್... >> ಟೀಚರ್ - ರಾಜು ನೀನು ಕಲಿಯಬೇಕು. >> ಆತ ಆಶ್ಚರ್ಯ ದಿಂದ ಇನ್ನು ಅದೆಲ್ಲ ಆಗಲ್ಲ ಟೀಚರ್... >> ಟೀಚರ್ - ಯಾಕೆ ಆಗಲ್ಲ ರಾಜು ? ಆಗಬೇಕು. ನೀನು ನಾಳೆ ಸಂಜೆ ಮನೆಗೆ ಬರಬೇಕು. ನೀನು ಮಿಸ್ >> ಮಾಡಿಕೊಂಡ ಪಾಠಗಳನ್ನು ನಾನು ಹೇಳಿಕೊಡುತ್ತೇನೆ... ನಿನಗೆ ಕಲಿಯಲು ಒಳ್ಳೆಯ ಬುದ್ದಿ ಇದೆ. >> ಸ್ವಲ್ಪ ನಿನ್ನ ಮನಸಿನ ಒತ್ತಡವನ್ನೆಲ್ಲಾ ಕಡಿಮೆ ಮಾಡಿ ಕಲಿಯಬೇಕು. ಒಳ್ಳೆಯ ಮಾರ್ಕ್ ಗಳಿಸಿ >> ಪಾಸಾಗಬೇಕು. >> ಅಷ್ಟು ಹೇಳಿ ರಾಜುವಿನ ರಿಪ್ಲೈ ಗೆ ಕಾಯದೆ ಟೀಚರ್ ನಡೆದು ಸಾಗಿದರು.. >> >> ಮರುದಿನ ಸಂಜೆ ರಾಜು ತನಗೆ ಸಿಕ್ಕಿದ ಸಂಬಳದೊಂದಿಗೆ ಟೀಚರ್ ನ ಮನೆ ತಲುಪಿದ. >> ರಾಜು ಟೀಚರಿಗೆ ಸಾವಿರ ರುಪಾಯಿಗಳನ್ನು ಮೊದಲು ಕೊಡಲು ಲೆಕ್ಕ ಮಾಡುತ್ತಿರುವಾಗ ಟೀಚರ್ >> ತಡೆದು ಇದು ಈಗ ನಿನ್ನತ್ರ ಇರಲಿ. ನಾನು ಮತ್ತೆ ನಿನ್ನಿಂದ ಕೇಳಿ ಪಡೆಯುವೆ ಅಂದರು. >> ರಾಜು - ಟೀಚರ್ ನನಗೋಸ್ಕರ ಯಾಕೆ ಕಷ್ಟಪಡುತ್ತಿದ್ದೀರಾ...? ನಾನು ನನ್ನ ಕೆಲಸದಲ್ಲಿ >> ಹೊಂದಿಕೊಂಳ್ಳುತ್ತಿದ್ದೇನೆ.. >> ಟೀಚರ್ - ನನಗೆ ಕಷ್ಟವಾ..?? ಹಾಗಂತ ಯಾರು ಹೇಳಿದ್ದು?? ಜ್ಞಾನವನ್ನು ಹಂಚಿಕೊಡುವುದು >> ಒಬ್ಬ ಗುರುವಿನ ಕರ್ತವ್ಯವಾಗಿದೆ... ನೋಡು ರಾಜು ನೀನು ಹಾಗೇನೂ ಚಿಂತಿಸಬಾರದು. ಕಲಿತು >> ಒಳ್ಳೆಯ ನೆಲೆಯನ್ನು ಕಂಡುಕೊಳ್ಳಬೇಕು... >> ರಾಜು - ಆಸೆಯಿದೆ ಟೀಚರ್... ಆದರೆ , ನನ್ನ ಅವಸ್ಥೆ.... ಅದಕಾರಣವೇ ಕಲಿಕೆ ಬೇಡ ಅಂತ >> ನಿರ್ಧರಿಸಿರೋದು... ಈಗ ತಾವು ಹೇಳುವಾಗ ಏನೋ ಒಂದು ಭರವಸೆ ಮೂಡುತ್ತಿದೆ.. ಯಾರಾದರೂ ನನಗೆ >> ಸಹಾಯ ಮಾಡಿಯಾರು ಅಂತ ಅನಿಸುತ್ತಿದೆ... >> ಟೀಚರ್ - ನಿನ್ನಿಂದ ಖಂಡಿತವಾಗಿಯೂ ಸಾಧ್ಯ. ನಿನ್ನ ಮೇಲೆ ನನಗೆ ನಂಬಿಕೆಯಿದೆ. ಕಲಿತು >> ಒಳ್ಳೆಯ ಮಾರ್ಕ್ ನೊಂದಿಗೆ ಪಾಸಾಗಿ, ಜೀವನದಲ್ಲಿ ಒಳ್ಳೆಯ ನೆಲೆಯನ್ನು ಕಂಡುಕೊಳ್ಳಬೇಕು. >> ಅದುವೇ ನೀನು ನನಗೆ ಕೊಡುವ ಗುರುದಕ್ಷಿಣೆ.... >> >> ಹಾಗೇ ರಾಜು ಕಲಿಯಲಾರಂಬಿಸಿದ.. ಬಹಳ ಬೇಗನೇ ಒಂದು ಛಲದೊಂದಿಗೆ ಪಾಠಗಳನ್ನು >> ಅರ್ಥಮಾಡಿಕೊಂಡು, ಪರೀಕ್ಷೆಯಲ್ಲಿ ಉಳಿದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಕ್ಲಾಸಿನಲ್ಲಿ >> ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡ... ಶಾಂತಾ ಟೀಚರ್ ನ ಪ್ರೀತಿಯ ಶಿಷ್ಯನಾಗಿ ಬದಲಾದ.. >> ರಾಜುವಿಗೆ ಶಾಂತಾ ಟೀಚರ್ ಕೇವಲ ಟೀಚರ್ ಆಗಿರಲಿಲ್ಲ... ಅಮ್ಮನೂ ಆಗಿದ್ದರು. >> ಹೀಗಿರುವಾಗ ಟೀಚರ್ ನ ಪತಿ ವಿದೇಶದಲ್ಲಿದ್ದು ಪತಿಯ ಒತ್ತಾಯದ ಮೇರೆಗೆ ಶಾಂತಾಟೀಚರ್ ಮತ್ತು >> ಮಕ್ಕಳು ವಿದೇಶಕ್ಕೆ ಹೋಗಲು ನಿರ್ಧರಿಸಿದರು. >> ವಿಷಯ ತಿಳಿದ ರಾಜು ಟೀಚರ್ ನ ಮನೆಗೆ ಓಡೋಡಿ ಬಂದ. >> ರಾಜು - ಟೀಚರ್... ತಾವು ಕೂಡಾ ನನ್ನನ್ನು ಒಂಟಿಯಾಗಿಸಿ ಹೊರಟಿದ್ದೀರಾ...? ರಾಜುವಿನ >> ಕಣ್ಣುಗಳು ತುಂಬಿತು... >> ಟೀಚರ್ - ಹೋಗಲೇಬೇಕಾದ ಅನಿವಾರ್ಯತೆ ಇದೆ ರಾಜೂ. ನೀನು ಯಾವತ್ತೂ ಒಂಟಿಯಾಗಲಾರ... ನನ್ನ >> ಪ್ರಾರ್ಥನೆ ಎಂದೆಂದಿಗೂ ನಿನ್ನ ಜೊತೆ ಇರುತ್ತದೆ. ಚೆನ್ನಾಗಿ ಕಲಿಯಬೇಕು ಆಯಿತಾ... ಶಾಂತಾ >> ಟೀಚರಿನ ದುಃಖದ ಕಟ್ಟೆ ಒಡೆಯಿತು. ಬೇರೇನೂ ರಾಜುವಿನತ್ರ ಹೇಳಲು ಟೀಚರಿಗೆ ಇರಲಿಲ್ಲ. >> ರಾಜುವಿನ ಮನೆಯ ಖರ್ಚು ಮತ್ತು ವಿದ್ಯಾಭ್ಯಾಸದ ಖರ್ಚುಗಳಿಗಾಗಿ ಟೀಚರ್ ತನ್ನ ಗೆಳತಿಯೊಬ್ಬಳ >> ಹತ್ತಿರ ಒಂದಿಷ್ಟು ದುಡ್ಡನ್ನು ಕೊಟ್ಟು ಹೋಗಿದ್ದರು.. >> >> ಕಾಲಚಕ್ರವು ಉರುಳಿತು. ಶಾಂತಾ ಟೀಚರ್ ನ ಪತಿಯ ವಿಯೋಗವು ಟೀಚರ್ ನ ಬದುಕಿನಲ್ಲಿ ದೊಡ್ಡ >> ಬಿರುಗಾಳಿಯನ್ನೇ ಸೃಷ್ಟಿಮಾಡಿತು... >> ಕಷ್ಟಗಳು ಏನೆಂದು ಅರಿಯದೆ ಬದುಕಿದ ತನ್ನ ಮಕ್ಕಳಿಗೆ ಟೀಚರ್ ಬಾರವಾಗತೊಡಗಿದರು... >> ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂಬ ವಿಷಯದಲ್ಲಿ ಮಕ್ಕಳು ಪರಸ್ಪರ >> ಜಗಳಾಡತೊಡಗಿದರು... ಕೊನೆಗೆ ಅಮ್ಮನನ್ನು ಊರಿನಲ್ಲಿರುವ ವೃದ್ಧಾಶ್ರಮದಲ್ಲಿ ಬಿಡಲು >> ನಿರ್ಧರಿಸಿದರು... >> ಶಾಂತಾ ಟೀಚರ್ ಮನಸಲ್ಲಿ ಅಂದುಕೊಂಡರು. ಹುಟ್ಟಿದ ಊರಲ್ಲೇ ಸಾಯಬಹುದಲ್ಲಾ ಅಂತ ತನ್ನನ್ನು >> ತಾನೇ ಸಂತೈಸಿಕೊಂಡರು.... ಮಕ್ಕಳ ಮಾತುಗಳನ್ನು ಅನುಸರಿಸದೆ ಬೇರೆ ದಾರಿಯೂ ಇರಲಿಲ್ಲ.... >> ವರ್ಷಗಳ ನಂತರ ವಿದೇಶದಿಂದ ವಾಪಾಸಾದ ಶಾಂತಾ ಟೀಚರ್ ವೃದ್ದಾಶ್ರಮದಲ್ಲಿ ಇತರ ಅಮ್ಮಂದಿರ >> ಜೊತೆ ಬಹು ಬೇಗ ಹೊಂದಿಕೊಂಡರು.... >> ಒಂದು ದಿನ ಅಲ್ಲಿನ ಕೆಲಸದಾಕೆ ಅಮ್ಮು ಬಂದು ಹೇಳಿದಳು - ಶಾಂತಾ ಟೀಚರಿಗೆ ಒಬ್ಬರು >> ವಿಸಿಟರ್ ಇದ್ದಾರೆ... >> ಯಾರು ಅಂತ ನೋಡಲು ಅಮ್ಮುವಿನ ಜೊತೆ ವರಾಂಡಾಕ್ಕೆ ಹೋದರು... >> ಟೀಚರ್..... ಆತ ಮುಗುಳ್ನಗುತ್ತಾ ಕರೆದ. >> ರಾಜು.....!! ಎಷ್ಟು ದೊಡ್ಡವನಾಗಿಬಿಟ್ಟಿದ್ದೀಯಾ...!! >> ರಾಜು - ಟೀಚರ್ ನಿಮ್ಮ ರಾಜು ಈಗ ಕೇವಲ ರಾಜು ಅಲ್ಲಾ... ಡಾಕ್ಟರ್ ರಾಜುವಾಗಿದ್ದಾನೆ... >> ಆತ ಟೀಚರ್ ನ ಕೈಗಳನ್ನು ಹಿಡಿದು ಒತ್ತುತ್ತಾ ಹೇಳಿದ. >> ಸಂತೋಷದಿಂದ ಟೀಚರ್ ನ ಕಣ್ಣುಗಳಲ್ಲಿ ಆನಂದಬಾಷ್ಪವು ತುಂಬಿತು... >> ರಾಜು - ಯಾಕೆ ಟೀಚರ್ ಅಳುತ್ತಿದ್ದೀರಾ...? ಆತ ಟೀಚರ್ ನ ಕಣ್ಣುಗಳನ್ನು ಒರೆಸಿದ. >> ಟೀಚರ್ - ಸಂತೋಷದಿಂದ ಕಣ್ಣುಗಳು ತುಂಬಿದ್ದು ರಾಜೂ... ಸಾಯೋದಕ್ಕೆ ಮುಂಚೆ ನಿನ್ನನ್ನು >> ನಾನು ಅಂದುಕೊಂಡ ಹಾಗೇ ಒಳ್ಳೆಯ ನೆಲೆಯಲ್ಲಿ ನೋಡಲು ಸಾಧ್ಯವಾಯಿತಲ್ಲಾ.... ಟೀಚರ್ ಆತನ >> ತಲೆಯನ್ನು ಪ್ರೀತಿಯಿಂದ ಸವರಿದರು.... >> >> ರಾಜು - ನಾನು ಬಂದದ್ದು ನಿಮ್ಮನ್ನು ಕರಕ್ಕೊಂಡು ಹೋಗೋಕೆ... ನೀವು ಇರಬೇಕಾದದ್ದು ಇಲ್ಲಿ >> ಅಲ್ಲ.... >> ಅನಾಥತ್ವದ ನಡುವಿನಲ್ಲಿ ಬೆಳೆದು, ಒಬ್ಬಳು ತಾಯಿಗೆ ಕೊಡಬೇಕಾದ ಎಲ್ಲಾ ಸ್ನೇಹವನ್ನೂ >> ಕೂಡಿಟ್ಟು ನನ್ನ ಪತ್ನಿ ನಿಮಗಾಗಿ ಕಾಯುತ್ತಿದ್ದಾಳೆ... ಅಜ್ಜಿ ಕಥೆಗಳನ್ನು ಕೇಳುತ್ತಾ ಮಲಗಿ >> ನಿದ್ರಿಸಲು ಕಾತುರದಿಂದ ಕಾಯುತ್ತಿದ್ದಾರೆ ನನ್ನ ಮುದ್ದು ಮಕ್ಕಳು.... ಹೋಗೋಣ ಹೊರಡಿರಿ.... >> ಟೀಚರ್ - ಕಂದಾ.... ಟೀಚರ್ ನ ಕಣ್ಣುಗಳು ತುಂಬಿ ತುಳುಕಿದವು... >> ರಾಜು - ಇನ್ನು ಈ ಮಗ ಇರುವಷ್ಟು ದಿನ ನಿಮ್ಮ ಈ ಕಣ್ಣುಗಳು ಒದ್ದೆಯಾಗಲು ಬಿಡಲಾರೆ.... ಆತ >> ಟೀಚರ್ ನ ಕೈಯನ್ನು ಜೋರಾಗಿ ಒತ್ತಿ ಹಿಡಿದು ಹೇಳಿದ... ಆ ಹಿಡಿತದಲ್ಲಿ ಸ್ನೇಹ, ನಂಬಿಕೆ, >> ಆಶ್ರಯ, ಧೈರ್ಯ, ಆತ್ಮವಿಶ್ವಾಸ ಎಲ್ಲವೂ ಅಡಗಿತ್ತು.... >> ಒಬ್ಬಳು ಅಮ್ಮನಿಗೆ ಕೊಡುವುದಕ್ಕೆ ಕೂಡಿಟ್ಟ ಸ್ನೇಹವೆಲ್ಲಾ ಆತನ ಕಣ್ಣುಗಳಲ್ಲಿ ಆ ಟೀಚರ್ >> ಕಂಡರು.........( ಫಾರ್ವರ್ಡ್ ) >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8Yx > geXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ಷಕರ > ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/Public_ > Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
