GOOD information sir tq

lalita
On 21/01/2016 8:35 AM, "Eranna Eras" <eras.era...@gmail.com> wrote:

> ಅಜೀರ್ಣೇ ಭೇಷಜಂ ವಾರಿ
>
> ಚಿಂತನ -
> (ಮೆಂಡಲ್ ತಂಡದಿಂದ-ರಚನ ೩ ತರಬೇತಿ ಡಯಟ್ ಯಾದಗಿರಿ) 21-01-2016::::;
>
> ಊಟದ ವೇಳೆ ನೀರನ್ನು ಯಾವಾಗ, ಎಷ್ಟು ಕುಡಿಯಬೇಕು ಎನ್ನುವುದು ಅನೇಕರಿಗೆ
> ತಿಳಿದಿರುವುದಿಲ್ಲ. ಕೆಲವರು ಊಟಕ್ಕೆ ಮುನ್ನ, ಇಲ್ಲವೇ ಊಟದ ನಂತರ ಧಾರಾಳವಾಗಿ ನೀರನ್ನು
> ಕುಡಿಯುತ್ತಾರೆ. ಕೆಲವರು ಊಟದ ನಡು ನಡುವೆ ಕುಡಿದು ಬಿಡುತ್ತಾರೆ. ಕೆಲವರು ಹೆದರಿ ಭೋಜನದ
> ಸಮಯದಲ್ಲಿ ನೀರನ್ನೇ ಕುಡಿಯುವುದಿಲ್ಲ. ನಾರು, ಮಜ್ಜಿಗೆ ಇತ್ಯಾದಿಗಳಲ್ಲಿ ಸಾಕಷ್ಟು ನೀರಿನ
> ಪ್ರಮಾಣ ಇದೆಯಲ್ಲ ಅಂದುಕೊಳ್ಳುತ್ತಾರೆ. ಅಂತೂ ನೀರಿನ ಹಿತ – ಮಿತ ಬಳಕೆಯ ಕುರಿತು
> ಸ್ಪಷ್ಟವಾದ ಅಭಿಪ್ರಾಯ ಕೊಡುವವರು ವಿರಳ.
> ಆದರೆ ಚಾಣಕ್ಯ ನೀತಿ ದರ್ಪಣದಲ್ಲಿ ಈ ಕುರಿತು ಸ್ಪಷ್ಟವಾದ ನಿಲುವು ಪ್ರಕಟವಾಗಿದೆ:
> ‘ಅಜೀರ್ಣೇಭೇಷಜಂ ವಾರಿ, ಜೀರ್ಣೇವಾರಿ ಬಲಪ್ರದಂ! ಭೋಜನೇಚಾಮೃತಂ ವಾರಿ, ಭೋಜನಾಂತೇ
> ವಿಷಪ್ರದಂ’. ಅಂದರೆ ಅಧಿಕ ಭೋಜನ ಅಥವಾ ಅಜೀರ್ಣ ಸ್ಥಿತಿಯಲ್ಲಿ ನೀರು ಔಷಧದಂತೆ ಕೆಲಸ
> ಮಾಡುತ್ತದೆ. ಉಂಡ ಆಹಾರವು ಜೀರ್ಣವಾದ ಬಳಿಕ ನೀರು ಬಲಕಾರಿಯಾಗಿದೆ. ಭೋಜನದ ಮಧ್ಯದಲ್ಲಿ
> ನೀರಿನ ಸೇವನೆ ಅಮೃತ ಸಮಾನ. ಆದರೆ ಭೋಜನದ ಕೊನೆಯಲ್ಲಿ ಜಲಪಾನ ಮಾಡುವುದು ವಿಷಪ್ರದ.
> ಮನುಷ್ಯನ ಆರೋಗ್ಯಕ್ಕೆ ಜಲಪಾನ ತುಂಬ ಅಗತ್ಯವಾದದ್ದು ಎಂಬುದರ ಬಗೆಗೆ ಎರಡು ಮಾತಿಲ್ಲ. ಆದರೆ
> ನೀರನ್ನೇ ಅತಿಯಾಗಿ ಸೇವಿಸುವುದು ಗುಣಕಾರಿಯಲ್ಲ. ಅದೇ ರೀತಿ ನೀರು ಕುಡಿಯುವುದರಿಂದ ದೋಷ
> ಬಂದೀತೇನೋ ಎಂಬ ಸಂದೇಹದಿಂದ ಜಲಪಾನವನ್ನೇ ಮಾಡದಿರುವುದು ಕೂಡ ದೋಷವೇ ಆಗುತ್ತದೆ. ಆದ್ದರಿಂದ
> ಊಟದ ನಡುನಡುವೆ ಸ್ವಲ್ಪ ಸ್ವಲ್ಪ ಜಲ ಸೇವನೆ ಮಾಡುವುದು ಅತ್ಯವಶ್ಯ ಎಂದು ನೀತಿಕಾರರು
> ಹೇಳುತ್ತಾರೆ.
> ಇದನ್ನೇ ವಾಗ್ಭಟ, ಸುಶ್ರುತ, ಭಾವಮಿಶ್ರ ಪಂಡಿತ ಮುಂತಾದ ಆಯುರ್ವೇದ ಪರಿಣತರು
> ವೈಜ್ಞಾನಿಕವಾಗಿ ಸಮರ್ಥಿಸುತ್ತಾರೆ. ವಾಗ್ಭಟಾಚಾರ್ಯರ ಅಭಿಪ್ರಾಯದ ಪ್ರಕಾರ ಭೋಜನದ ನಡುವೆ
> ಸ್ವಲ್ಪ ಸ್ವಲ್ಪವಾಗಿ ನೀರನ್ನು ಕುಡಿಯುವುದರಿಂದ ಸಪ್ತಧಾತುಗಳು (ರಸ, ರಕ್ತ, ಮಾಂಸ,
> ಮೇದಸ್ಸು, ಮಜ್ಜೆ, ಅಸ್ಥಿ, ಶುಕ್ಲ) ಸಮಾನತೆಯನ್ನು ಹೊಂದುತ್ತವೆ. ತತ್ ಪರಿಣಾಮವಾಗಿ ಶರೀರವು
> ಮಿತಿಮೀರಿ ತೆಳ್ಳಗೂ ಆಗದೆ, ಅತಿಯಾಗಿ ದಪ್ಪಗೂ ಆಗದೆ ಸಮಸ್ಥಿತಿಯನ್ನು ಹೊಂದುತ್ತವೆ. ಊಟಕ್ಕೆ
> ಮುನ್ನ ನೀರು ಕುಡಿಯುವುದರಿಂದ ಪ್ರಜ್ವಲಗೊಂಡಿರುವ ಜಠರಾಗ್ನಿಯು ಬಹಳಷ್ಟು ಮಂದವಾಗಿ ಆಹಾರದ
> ಪಚನಕ್ರಿಯೆಗೆ ಅಡ್ಡಿಯಂಟಾಗುತ್ತದೆ. ಏಕೆಂದರೆ ಮಂದಾಗ್ನಿಯಿಂದ ಪಾಕಗೊಂಡ ಆಹಾರ ಪದಾರ್ಥಗಳು
> ರಸೋತ್ಪತ್ತಿ ಮಾಡಲಾರವು. ರಸಾಭಾವದಿಂದ ಧಾತುಗಳು ಕ್ಷೀಣಗೊಳ್ಳುವುದರಿಂದ ಪುಷ್ಟವಾಗಬೇಕಾದ
> ಶರೀರವು ದಿನೇ ದಿನೇ ಕ್ಷೀಣವಾಗುತ್ತಾ ಹೋಗುತ್ತದೆ.
> ಇನ್ನು ಊಟವಾದ ಕೂಡಲೇ ನೀರು ಸೇವಿಸಿದರೆ ಏನಾಗುತ್ತದೆ? ಆಮಾಶಯದಲ್ಲಿ ಕಫದ ಪ್ರಮಾಣವು
> ಅಧಿಕಗೊಂಡು ಅದರ ಪರಿಣಾಮವಾಗಿ ಶರೀರವು ಸ್ಥೂಲಗೊಳ್ಳುತ್ತದೆ. ಹಾಗಂತ ಭೋಜನಾಂತ್ಯದಲ್ಲಿ
> ಒಂದೆರಡು ಗುಟುಕು ನೀರು ಕುಡಿದರೆ ದೋಷವಾಗಲಾರದು. ಆದ್ದರಿಂದ ಮಂದಾಗ್ನಿ ಹಾಗೂ ಕೃಶತ್ವ ತರುವ
> ಮೊದಲ ಪಾನವನ್ನೂ, ಶ್ಲೇಷ್ಮಾಧಿಕ್ಯ ಮತ್ತು ಸ್ಥೂಲತೆ ತರುವ ಕೊನೆಯ ಪಾನವನ್ನೂ ತಜ್ಞ ವೈದ್ಯರು
> ನಿರಾಕರಿಸಿರುವುದು ಸಮಂಜಸವಾಗಿದೆ.
>
>                                                       :- ಅರ್ತಿಕಜೆ
>
> Regards
>
> ERANNA V
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to