ತುಂಬಾ ಧನ್ಯವಾದಗಳು ಹರೀಶಕುಮಾರ ಸರ್ - ಜಿಂಪ್ ಎಂಬ ಫೋಟೊ ಎಡಿಟರ್ ಲೇಖನ್ ಹಂಚಿಕೊಂಡಿದ್ದಕಾಗಿ.

ಆತ್ಮೀಯ ಶಿಕ್ಷಕರೇ,
ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಟೂಲ್ ಗಳನ್ನು ಬಳುಸುವದನ್ನು ನೊಡಿದ್ದೇವೆ. ಜಿಂಪ್ ಎಂಬ ಫೋಟೊ ಎಡಿಟರ್ ಟೂಲ್ (ಚಿತ್ರ ಸಂಪಾದಕ ತಂತ್ರಾಂಶ) ಬಳಸುವದರಿಂದ ಆಗುವ ಉಪಯೋಗಗಳ ಬಗ್ಗೆ ಕೆಳಗಿನ ಲೇಖನದಲ್ಲಿ ನೋಡಲಾಗಿದೆ . ಜಿಂಪ್ ಎಂಬ ಅಪ್ಲೀಕೆಶನ್ ಬಳಸಿ ಹೆಗೆ ಚಿತ್ರವನ್ನು ತಯಾರಿಸಬಹುದು/ಸಂಪಾದಿಸಬದು ಎಂಬುವದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಕಾಣಿಸಿದ ಕೋಯರ್ ಪುಟದ ಲಿಂಕನ್ನು ಒತ್ತುವ ಮೂಲಕ ನೋಡಬಹುದಾಗಿದೆ.

http://karnatakaeducation.org.in/KOER/en/index.php/GIMP_manual

http://karnatakaeducation.org.in/KOER/index.php/GIMP_ಕೈಪಿಡಿ <http://karnatakaeducation.org.in/KOER/index.php/GIMP_%E0%B2%95%E0%B3%88%E0%B2%AA%E0%B2%BF%E0%B2%A1%E0%B2%BF>

ಈ ಮೂಲಕ ಎಲ್ಲಾ ಶಿಕ್ಷಕ ಮಿತ್ರರಲ್ಲಿ ಕೇಳಿಕೊಳ್ಳುವುದೇನೆಂದರೆ ಇತರೆ ಟೂಲ್‌ಗಳ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ.

ಧನ್ಯವಾದಗಳು
ಅಶೋಕ
ಐ.ಟಿ.ಫಾರ್ ಚೇಂಜ್
ಬೆಂಗಳೂರು.


On Thursday 19 May 2016 07:21 PM, HAREESHKUMAR K Agasanapura wrote:
ತಂತ್ರೋಪನಿಷತ್ತು
ಜಿಂಪ್ ಎಂಬ ಫೋಟೊ ಎಡಿಟರ್

     –ತಂತ್ರಜ್ಞಾನಿ
          12 reads
     Thu, 05/19/2016 - 01:00

ಸಣ್ಣ ಮೊಬೈಲ್ ಫೋನ್ ಕೂಡಾ ಹತ್ತಾರು ಪಿಕ್ಸೆಲ್‌ಗಳ ಸಾಮರ್ಥ್ಯದ ಛಾಯಾಚಿತ್ರಗಳನ್ನು
ತೆಗೆಯುವ ಕಾಲವಿದು. ದುಬಾರಿ ಮತ್ತು ಪ್ರತಿಷ್ಠಿತ ಬ್ರಾಂಡ್‌ಗಳ ಫೋನ್‌ಗಳಂತೂ ಒಂದು
ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಿಂತ ಉತ್ತಮ ಫೋಟೊ ಕ್ಲಿಕ್ಕಿಸುವ ಸಾಮರ್ಥ್ಯವಿರುವ
ಕ್ಯಾಮೆರಾಗಳನ್ನು ಒದಗಿಸುತ್ತಿವೆ.

ಹೀಗೆ ತೆಗೆದ ಫೋಟೊಗಳನ್ನು ಫೋನ್‌ನಲ್ಲೇ ಅಲ್ಪ ಸ್ವಲ್ಪ ಸುಧಾರಿಸಿ ಸಾಮಾಜಿಕ
ಜಾಲತಾಣಗಳಿಗೆ ತಳ್ಳಿಬಿಡುವುದು ಸದ್ಯದ ಪರಿಪಾಠ. ವಾಸ್ತವದಲ್ಲಿ ಯಾವುದೇ ವೃತ್ತಿಪರರ
ಛಾಯಾಚಿತ್ರಗಳನ್ನು ಇಷ್ಟೊಂದು ಲಘುವಾಗಿ ಪರಿಗಣಿಸುವುದಿಲ್ಲ.

ಬಹಳ ಉತ್ಸಾಹದಲ್ಲಿ ಡಿಎಸ್ಎಲ್‌ಆರ್ ಅಥವಾ ಅದರ ಸಾಮರ್ಥ್ಯವನ್ನು ಹೋಲುವ ಡಿಜಿಟಲ್
ಕ್ಯಾಮೆರಾ ಹೊಂದಿರುವವರೂ ಫೋಟೊಗಳ ಸಂಪಾದನೆಗೆ ಬೇಕಿರುವ ಸಾಫ್ಟ್‌ವೇರ್ ಎಂದರೆ ಅಡೋಬಿ
ಕಂಪೆನಿಯ ‘ಫೋಟೊಶಾಪ್’ ಎಂದು ಭಾವಿಸಿರುತ್ತಾರೆ. ಆದರೆ ಇದು ಅಷ್ಟರ ಮಟ್ಟಿಗೆ
ನಿಜವಲ್ಲ.

ಕೆಲವು ವಿಚಾರಗಳಲ್ಲಿ ಅಡೋಬಿ ಕಂಪೆನಿಯ ದುಬಾರಿಯಾದ ಫೋಟೊಶಾಪ್ ತಂತ್ರಾಂಶಕ್ಕಿಂತಲೂ
ಹೆಚ್ಚಿನ ಪಟ್ಟು ಅನುಕೂಲವಿರುವ, ಉಚಿತವಾಗಿ ದೊರೆಯುವ, ಯಾವುದೇ ಲೈಸೆನ್ಸ್
ಅಗತ್ಯವಿಲ್ಲದ ತಂತ್ರಾಂಶವೊಂದಿದೆ. ಇದರ ಹೆಸರು ಜಿಂಪ್ ಅಥವಾ GIMP. ಗ್ನೂ ಇಮೇಜ್
ಮ್ಯಾನಿಪುಲೇಶನ್ ಪ್ರೋಗ್ರಾಮ್ ಎಂಬ ಇದು ಛಾಯಾಚಿತ್ರಗಳ ಸಂಪಾದನೆಯ ಮಟ್ಟಿಗೆ
ಅತ್ಯುತ್ತಮವಾದ ತಂತ್ರಾಂಶ.

ಇದು ವಿಂಡೋಸ್, ಲೀನಕ್ಸ್ ಮತ್ತು ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಬಹಳ ಚೆನ್ನಾಗಿ ಕೆಲಸ
ಮಾಡುತ್ತದೆ. ವೃತ್ತಿಪರ ಛಾಯಾಚಿತ್ರ ಸಂಪಾದನಾ ತಂತ್ರಾಂಶವೊಂದು ನೀಡುವ ಎಲ್ಲಾ
ಸವಲತ್ತುಗಳನ್ನು, ಪೈಥನ್ ಸ್ಕ್ರಿಪ್ಟ್‌ನಂಥ ವಿಚಾರಗಳಿಗೆ ಬಂದರೆ ವೃತ್ತಿಪರ
ತಂತ್ರಾಂಶಗಳಿಗಿಂತ ಹೆಚ್ಚಿನ ಅನುಕೂಲವನ್ನೂ ಇದು ಕಲ್ಪಿಸಿಕೊಡುತ್ತದೆ.

ಇದರಲ್ಲಿರುವ ಒಂದೇ ಒಂದು ಕೊರತೆಯೆಂದರೆ ಪತ್ರಿಕೆ, ಪುಸ್ತಕಗಳಲ್ಲಿ ಛಾಯಾಚಿತ್ರಗಳನ್ನು
ಮುದ್ರಿಸುವುದಕ್ಕೆ ಬಳಸುವು ‘ಸಿಎಂವೈಕೆ’ ಮಾದರಿಯ ಚಿತ್ರಗಳನ್ನು ಸೃಷ್ಟಿಸುವುದಕ್ಕೆ
ಬೇಕಿರುವ ಸವಲತ್ತು ಇಲ್ಲ. ಆದರೆ ಇದಕ್ಕೆ ಸಂಬಂಧಿಸಿದ ಪ್ಲಗ್‌ಇನ್ ಅಥವಾ ಹೆಚ್ಚುವರಿ
ತಂತ್ರಾಂಶಗಳು ದೊರೆಯುತ್ತವೆ. ಅವುಗಳನ್ನು ಬಳಸಿಕೊಂಡರೆ ಈ ಕೊರತೆ
ನೀಗಿಸಿಕೊಳ್ಳಬಹುದು.

ಫೋಟೊಶಾಪ್ ಮತ್ತು ಆ ಮಾದರಿಯ ತಂತ್ರಾಂಶಗಳನ್ನು ಬಳಸುತ್ತಿದ್ದವರಿಗೆ ಇದನ್ನು
ಬಳಸುವುದಕ್ಕೆ ಆರಂಭದಲ್ಲಿ ಸ್ವಲ್ಪ ಕಿರಿಕಿರಿಯಾಗುತ್ತದೆ. ಇದು ಸಹಜವೂ ಹೌದು.
ಏಕೆಂದರೆ ಈ ತಂತ್ರಾಂಶದ ಯೂಸರ್ ಇಂಟರ್‌ಫೇಸ್ ಸ್ವಲ್ಪ ಭಿನ್ನವಾಗಿದೆ.

ಇದನ್ನು ತಂತ್ರಾಂಶ ರೂಪಿಸುವವರು ಉದ್ದೇಶ ಪೂರ್ವಕವಾಗಿ ಮಾಡಿದ್ದೇನೂ ಅಲ್ಲ.
ಪ್ರತಿಯೊಂದು ವಿನ್ಯಾಸವೂ ಪೇಟೆಂಟ್ ಆಗಿರುವುದರಿಂದ ಅದಕ್ಕಿಂತ ಭಿನ್ನವಾಗಿರುವುದನ್ನು
ಮಾಡಲೇಬೇಕಾದ ಅನಿವಾರ್ಯತೆ ಮುಕ್ತ ತಂತ್ರಾಂಶ ರೂಪಿಸುವವರ ಮೇಲೆ ಇರುತ್ತದೆ. ಬಳಸುತ್ತಾ
ಹೋದಂತೆ ಈ ತೊಂದರೆಯನ್ನೂ ನಿವಾರಿಸಿಕೊಳ್ಳಬಹುದು.

ಇದನ್ನು ಕಲಿಯುವುದಕ್ಕೆ ಬೇಕಿರುವ ಸಾಕಷ್ಟು ವಿಡಿಯೊ ಪಾಠಗಳು ಮತ್ತು ಬಹಳ ವಿವರ
ಟ್ಯುಟೋರಿಯಲ್ ಕೂಡಾ ಜಿಂಪ್ ತಾಣದಲ್ಲೇ ಲಭ್ಯ. ಸಾಲದ್ದಕ್ಕೆ ಇದನ್ನು ಸುಧಾರಿಸುವ
ಸಮುದಾಯವೂ ಬಹಳ ದೊಡ್ಡದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಬಳಸುವ ನೀವು ಪೈರಸಿ
ಮಾಡಿದ್ದೇನೆಂಬ ಪಾಪಪ್ರಜ್ಞೆಯಿಂದ ನರಳುವ ಅಗತ್ಯವಿಲ್ಲ. ಈ ತಂತ್ರಾಂಶ ಡೌನ್‌ಲೋಡ್
ಮಾಡಿಕೊಳ್ಳಲು ಈ ಕೊಂಡಿ ಬಳಸಿ: https://goo.gl/H5M1OX



--
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to