Sir, is it applicable to Android mobile? On May 20, 2016 10:50 AM, "Ashok" <ashok.i...@gmail.com> wrote:
> ತುಂಬಾ ಧನ್ಯವಾದಗಳು ಹರೀಶಕುಮಾರ ಸರ್ - ಜಿಂಪ್ ಎಂಬ ಫೋಟೊ ಎಡಿಟರ್ ಲೇಖನ್ > ಹಂಚಿಕೊಂಡಿದ್ದಕಾಗಿ. > > ಆತ್ಮೀಯ ಶಿಕ್ಷಕರೇ, > ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಟೂಲ್ ಗಳನ್ನು ಬಳುಸುವದನ್ನು > ನೊಡಿದ್ದೇವೆ. ಜಿಂಪ್ ಎಂಬ ಫೋಟೊ ಎಡಿಟರ್ ಟೂಲ್ (ಚಿತ್ರ ಸಂಪಾದಕ ತಂತ್ರಾಂಶ) ಬಳಸುವದರಿಂದ > ಆಗುವ ಉಪಯೋಗಗಳ ಬಗ್ಗೆ ಕೆಳಗಿನ ಲೇಖನದಲ್ಲಿ ನೋಡಲಾಗಿದೆ . ಜಿಂಪ್ ಎಂಬ ಅಪ್ಲೀಕೆಶನ್ ಬಳಸಿ > ಹೆಗೆ ಚಿತ್ರವನ್ನು ತಯಾರಿಸಬಹುದು/ಸಂಪಾದಿಸಬದು ಎಂಬುವದರ ಬಗ್ಗೆ ಸಂಪೂರ್ಣ ಮಾಹಿತಿ ಈ > ಕೆಳಕಾಣಿಸಿದ ಕೋಯರ್ ಪುಟದ ಲಿಂಕನ್ನು ಒತ್ತುವ ಮೂಲಕ ನೋಡಬಹುದಾಗಿದೆ. > > http://karnatakaeducation.org.in/KOER/en/index.php/GIMP_manual > > http://karnatakaeducation.org.in/KOER/index.php/GIMP_ಕೈಪಿಡಿ > > ಈ ಮೂಲಕ ಎಲ್ಲಾ ಶಿಕ್ಷಕ ಮಿತ್ರರಲ್ಲಿ ಕೇಳಿಕೊಳ್ಳುವುದೇನೆಂದರೆ ಇತರೆ ಟೂಲ್ಗಳ ಬಗ್ಗೆ > ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ. > > ಧನ್ಯವಾದಗಳು > ಅಶೋಕ > ಐ.ಟಿ.ಫಾರ್ ಚೇಂಜ್ > ಬೆಂಗಳೂರು. > > > On Thursday 19 May 2016 07:21 PM, HAREESHKUMAR K Agasanapura wrote: > > ತಂತ್ರೋಪನಿಷತ್ತು > ಜಿಂಪ್ ಎಂಬ ಫೋಟೊ ಎಡಿಟರ್ > > –ತಂತ್ರಜ್ಞಾನಿ > 12 reads > Thu, 05/19/2016 - 01:00 > > ಸಣ್ಣ ಮೊಬೈಲ್ ಫೋನ್ ಕೂಡಾ ಹತ್ತಾರು ಪಿಕ್ಸೆಲ್ಗಳ ಸಾಮರ್ಥ್ಯದ ಛಾಯಾಚಿತ್ರಗಳನ್ನು > ತೆಗೆಯುವ ಕಾಲವಿದು. ದುಬಾರಿ ಮತ್ತು ಪ್ರತಿಷ್ಠಿತ ಬ್ರಾಂಡ್ಗಳ ಫೋನ್ಗಳಂತೂ ಒಂದು > ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಿಂತ ಉತ್ತಮ ಫೋಟೊ ಕ್ಲಿಕ್ಕಿಸುವ ಸಾಮರ್ಥ್ಯವಿರುವ > ಕ್ಯಾಮೆರಾಗಳನ್ನು ಒದಗಿಸುತ್ತಿವೆ. > > ಹೀಗೆ ತೆಗೆದ ಫೋಟೊಗಳನ್ನು ಫೋನ್ನಲ್ಲೇ ಅಲ್ಪ ಸ್ವಲ್ಪ ಸುಧಾರಿಸಿ ಸಾಮಾಜಿಕ > ಜಾಲತಾಣಗಳಿಗೆ ತಳ್ಳಿಬಿಡುವುದು ಸದ್ಯದ ಪರಿಪಾಠ. ವಾಸ್ತವದಲ್ಲಿ ಯಾವುದೇ ವೃತ್ತಿಪರರ > ಛಾಯಾಚಿತ್ರಗಳನ್ನು ಇಷ್ಟೊಂದು ಲಘುವಾಗಿ ಪರಿಗಣಿಸುವುದಿಲ್ಲ. > > ಬಹಳ ಉತ್ಸಾಹದಲ್ಲಿ ಡಿಎಸ್ಎಲ್ಆರ್ ಅಥವಾ ಅದರ ಸಾಮರ್ಥ್ಯವನ್ನು ಹೋಲುವ ಡಿಜಿಟಲ್ > ಕ್ಯಾಮೆರಾ ಹೊಂದಿರುವವರೂ ಫೋಟೊಗಳ ಸಂಪಾದನೆಗೆ ಬೇಕಿರುವ ಸಾಫ್ಟ್ವೇರ್ ಎಂದರೆ ಅಡೋಬಿ > ಕಂಪೆನಿಯ ‘ಫೋಟೊಶಾಪ್’ ಎಂದು ಭಾವಿಸಿರುತ್ತಾರೆ. ಆದರೆ ಇದು ಅಷ್ಟರ ಮಟ್ಟಿಗೆ > ನಿಜವಲ್ಲ. > > ಕೆಲವು ವಿಚಾರಗಳಲ್ಲಿ ಅಡೋಬಿ ಕಂಪೆನಿಯ ದುಬಾರಿಯಾದ ಫೋಟೊಶಾಪ್ ತಂತ್ರಾಂಶಕ್ಕಿಂತಲೂ > ಹೆಚ್ಚಿನ ಪಟ್ಟು ಅನುಕೂಲವಿರುವ, ಉಚಿತವಾಗಿ ದೊರೆಯುವ, ಯಾವುದೇ ಲೈಸೆನ್ಸ್ > ಅಗತ್ಯವಿಲ್ಲದ ತಂತ್ರಾಂಶವೊಂದಿದೆ. ಇದರ ಹೆಸರು ಜಿಂಪ್ ಅಥವಾ GIMP. ಗ್ನೂ ಇಮೇಜ್ > ಮ್ಯಾನಿಪುಲೇಶನ್ ಪ್ರೋಗ್ರಾಮ್ ಎಂಬ ಇದು ಛಾಯಾಚಿತ್ರಗಳ ಸಂಪಾದನೆಯ ಮಟ್ಟಿಗೆ > ಅತ್ಯುತ್ತಮವಾದ ತಂತ್ರಾಂಶ. > > ಇದು ವಿಂಡೋಸ್, ಲೀನಕ್ಸ್ ಮತ್ತು ಮ್ಯಾಕ್ ಕಂಪ್ಯೂಟರ್ಗಳಲ್ಲಿ ಬಹಳ ಚೆನ್ನಾಗಿ ಕೆಲಸ > ಮಾಡುತ್ತದೆ. ವೃತ್ತಿಪರ ಛಾಯಾಚಿತ್ರ ಸಂಪಾದನಾ ತಂತ್ರಾಂಶವೊಂದು ನೀಡುವ ಎಲ್ಲಾ > ಸವಲತ್ತುಗಳನ್ನು, ಪೈಥನ್ ಸ್ಕ್ರಿಪ್ಟ್ನಂಥ ವಿಚಾರಗಳಿಗೆ ಬಂದರೆ ವೃತ್ತಿಪರ > ತಂತ್ರಾಂಶಗಳಿಗಿಂತ ಹೆಚ್ಚಿನ ಅನುಕೂಲವನ್ನೂ ಇದು ಕಲ್ಪಿಸಿಕೊಡುತ್ತದೆ. > > ಇದರಲ್ಲಿರುವ ಒಂದೇ ಒಂದು ಕೊರತೆಯೆಂದರೆ ಪತ್ರಿಕೆ, ಪುಸ್ತಕಗಳಲ್ಲಿ ಛಾಯಾಚಿತ್ರಗಳನ್ನು > ಮುದ್ರಿಸುವುದಕ್ಕೆ ಬಳಸುವು ‘ಸಿಎಂವೈಕೆ’ ಮಾದರಿಯ ಚಿತ್ರಗಳನ್ನು ಸೃಷ್ಟಿಸುವುದಕ್ಕೆ > ಬೇಕಿರುವ ಸವಲತ್ತು ಇಲ್ಲ. ಆದರೆ ಇದಕ್ಕೆ ಸಂಬಂಧಿಸಿದ ಪ್ಲಗ್ಇನ್ ಅಥವಾ ಹೆಚ್ಚುವರಿ > ತಂತ್ರಾಂಶಗಳು ದೊರೆಯುತ್ತವೆ. ಅವುಗಳನ್ನು ಬಳಸಿಕೊಂಡರೆ ಈ ಕೊರತೆ > ನೀಗಿಸಿಕೊಳ್ಳಬಹುದು. > > ಫೋಟೊಶಾಪ್ ಮತ್ತು ಆ ಮಾದರಿಯ ತಂತ್ರಾಂಶಗಳನ್ನು ಬಳಸುತ್ತಿದ್ದವರಿಗೆ ಇದನ್ನು > ಬಳಸುವುದಕ್ಕೆ ಆರಂಭದಲ್ಲಿ ಸ್ವಲ್ಪ ಕಿರಿಕಿರಿಯಾಗುತ್ತದೆ. ಇದು ಸಹಜವೂ ಹೌದು. > ಏಕೆಂದರೆ ಈ ತಂತ್ರಾಂಶದ ಯೂಸರ್ ಇಂಟರ್ಫೇಸ್ ಸ್ವಲ್ಪ ಭಿನ್ನವಾಗಿದೆ. > > ಇದನ್ನು ತಂತ್ರಾಂಶ ರೂಪಿಸುವವರು ಉದ್ದೇಶ ಪೂರ್ವಕವಾಗಿ ಮಾಡಿದ್ದೇನೂ ಅಲ್ಲ. > ಪ್ರತಿಯೊಂದು ವಿನ್ಯಾಸವೂ ಪೇಟೆಂಟ್ ಆಗಿರುವುದರಿಂದ ಅದಕ್ಕಿಂತ ಭಿನ್ನವಾಗಿರುವುದನ್ನು > ಮಾಡಲೇಬೇಕಾದ ಅನಿವಾರ್ಯತೆ ಮುಕ್ತ ತಂತ್ರಾಂಶ ರೂಪಿಸುವವರ ಮೇಲೆ ಇರುತ್ತದೆ. ಬಳಸುತ್ತಾ > ಹೋದಂತೆ ಈ ತೊಂದರೆಯನ್ನೂ ನಿವಾರಿಸಿಕೊಳ್ಳಬಹುದು. > > ಇದನ್ನು ಕಲಿಯುವುದಕ್ಕೆ ಬೇಕಿರುವ ಸಾಕಷ್ಟು ವಿಡಿಯೊ ಪಾಠಗಳು ಮತ್ತು ಬಹಳ ವಿವರ > ಟ್ಯುಟೋರಿಯಲ್ ಕೂಡಾ ಜಿಂಪ್ ತಾಣದಲ್ಲೇ ಲಭ್ಯ. ಸಾಲದ್ದಕ್ಕೆ ಇದನ್ನು ಸುಧಾರಿಸುವ > ಸಮುದಾಯವೂ ಬಹಳ ದೊಡ್ಡದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಬಳಸುವ ನೀವು ಪೈರಸಿ > ಮಾಡಿದ್ದೇನೆಂಬ ಪಾಪಪ್ರಜ್ಞೆಯಿಂದ ನರಳುವ ಅಗತ್ಯವಿಲ್ಲ. ಈ ತಂತ್ರಾಂಶ ಡೌನ್ಲೋಡ್ > ಮಾಡಿಕೊಳ್ಳಲು ಈ ಕೊಂಡಿ ಬಳಸಿ: https://goo.gl/H5M1OX > > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.