ಸಿಂಪಲ್ಲಾಗಿ  ಕಲಿಯೋಣ ಬನ್ನಿ …
 
ಕರಣಿಗಳು (Surds)
 
ಹೆದರಿಸೋಕೆ ಅಂತಾನೇ ಹುಟ್ಟಿರೋ ವಿಷಯಗಳಲ್ಲಿ ಗಣಿತದ ಸ್ಥಾನ ಮೊದಲು ಎಂದು ಸಾಮಾನ್ಯರ ಬಾಯಲ್ಲಿ 
ಬರೋ ಮಾತು ತಪ್ಪಿಲ್ಲ ಅನ್ಸತ್ತೆ. ಯಾಕಂದ್ರೆ ಈ ಗಣಿತ ಕಲಿಯೋರಿಗೆ ಮಾತ್ರವಲ್ಲದೇ, ಬೋಧಿಸೋರಿಗೂ 
ಕಾಟ ಕೊಡೊ ಜಾಯಮಾನಕ್ಕೆ ಸೇರಿದ್ದು ಅನ್ನೋದು ಎಷ್ಟೋ ಶಿಕ್ಷಕರ ಆಂಬೋಣ.
ಸಾಮಾನ್ಯವಾಗಿ ಸೆಕೆಂಡರಿ ಹಂತದಲ್ಲಿ ಬೋಧಿಸೋ ನಾವೆಲ್ಲಾ ಮೊಟ್ಟ ಮೊದಲು ಮಾಡೋ ಕೆಲಸವೆಂದರೆ, 
ಕ್ಲಿಷ್ಟವಾದ ಪಾಠ ಯಾವುದು…?, ಸುಲಭವಾದ ಪಾಠ ಯಾವುದು…? ಅಂತಾ ವಿಂಗಡನೆ ಮಾಡೋದು. ಹಾಗೆ 
ವಿಂಗಡಿಸಿದಾಗ ಸುಲಭದ ಸಾಲಿನಲ್ಲಿ ಮೊದಲು ನಿಲ್ಲೋದು ಗಣಗಳು, ಕರಣಿಗಳು, ಪ್ರಾಯೋಗಿಕ ರಚನೆಗಳು,… 
ಇತ್ಯಾದಿ.
 
ಹಾಗಿದ್ರೆ ನಿಜವಾಗ್ಲೂ ಈ ಪಾಠಗಳು ಸುಲಭವೇ…?
 
ಹೌದು…. ಅನ್ನೋದಾದರೆ…
 
ಅದು ಕೇವಲ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟು ಮಾತ್ರವೇ ನೋಡಿದಾಗ… ಏಕಂದ್ರೆ ಮಾರ್ಕ್ಸ್ 
ತೆಗ್ಸೋದ್ ಮಾತ್ರ ಅಲ್ಲವೇ ನಮ್ಮ ಗುರಿ… ಹೇಳ್ಕೋಳೋಕೆ ಬೇಸರ ಅನ್ಸತ್ತೆ.
 
ನಿಜವಾಗಲೂ ಈ ಪಾಠಗಳು ಸುಲಭವೇ ಇರಬಹುದು…! ಆದರೆ, ಪಾಠಗಳು ಪ್ರಾರಂಭವಾಗುತ್ತಿದ್ದಂತೆ ಎದ್ದೇಳೋ ಆ 
ಪರಿಕಲ್ಪನೆಗಳ ವ್ಯಾಖ್ಯಾನಗಳ ವಿವರಣೆ?
 
ಕೇವಲ ಅರ್ಧ ಸಾಲಿಗಿಂತ ಕಡಿಮೆಯಷ್ಟು ವ್ಯಾಖ್ಯಾನವನ್ನು ಹೊಂದಿರೋ ಕರಣಿ ಎಂಬ ಪರಿಕಲ್ಪನೆಯನ್ನೇ 
ತೆಗೆದುಕೊಳ್ಳಿ.
 
“ಭಾಗಲಬ್ಧ ಸಂಖ್ಯೆಯ ಅಭಾಗಲಬ್ಧ ಮೂಲವೇ ಕರಣಿ”
ಉದಾ : √2, √3, …
 
ಯಾರೇ ಯಾವ ವಿದ್ಯಾರ್ಥಿಯನ್ನು ಕರಣಿಯ ವ್ಯಾಖ್ಯಾನವನ್ನು ಕೇಳಿದರೂ ಸುಲಭವಾಗಿ ಉತ್ತರಿಸುತ್ತಾನೆ.
 
ಆದರೆ ಈ ಪರಿಕಲ್ಪನೆಯನ್ನು ಅರ್ಥೈಸುವಿಕೆಯ ಬಗ್ಗೆ ಚರ್ಚಿಸುವುದಾದರೇ, ಇದರ ವಿವರಣೆನ್ನು 
ನೀಡುವುದು ಹಾಗು ಅರ್ಥೈಸುವುದು ಅಷ್ಟು ಸುಲಭವಿಲ್ಲ ಎಂಬುದನ್ನು ಅದಕ್ಕಾಗಿ ಪರಿಶ್ರಮಿಸುವ 
ಶಿಕ್ಷಕರು ಅರಿತಿದ್ದಾರೆ.
 
ಹಾಗದರೇ ಈ ವ್ಯಾಖ್ಯಾನದಲ್ಲಿ ಅಂತಹ ಕಠಿಣತೆ ಏನಿದೆ?
 
ಒಳಹೊಕ್ಕಿದರೆ ಮಾತ್ರ ಅರಿವಿಗೆ ಬರಬಹುದು. ವಿಶ್ಲೇಷಿಸಿ ನೋಡೋಣ…
 
ಯಾವುದೇ ಒಂದು ಸಂಖ್ಯೆನಾ ದಶಮಾಂಶ ರೂಪದಲ್ಲಿ ( ಪಾಯಿಂಟ್ ಹಾಕಿ ಬರೆಯೋ ಸಂಖ್ಯೆ) ಬರೆದಾಗ, 
ಪಾಯಿಂಟ್ ಆದ್ಮೇಲೆ ಎಣಿಸೊಕಾಗೋವಷ್ಟು ಅಂಕಿಗಳು (ಅಂದ್ರೆ ಅಂತ್ಯ ಆಗಿರ ಬೇಕು) ಇದ್ರೆ ಅದು 
ಭಾಗಲಬ್ಧ ಸಂಖ್ಯೆ ಆಗುತ್ತೆ.
ಉದಾ: 2, 3, 4, 5, 3.25, 7.48, 5.5554, …
 
ಇಂತಹ ಭಾಗಲಬ್ಧ ಸಂಖ್ಯೆಗಳಿಗೆ ಯಾವುದೇ ಮೂಲವನ್ನು(ವರ್ಗಮೂಲ, ಘನಮೂಲ,…)ಹಾಕಿದಾಗ, ಅದರಿಂದ ಬರುವ 
ಉತ್ತರವು ಅಥವಾ ಬೆಲೆಯು ಅಭಾಗಲಬ್ಧವಾಗಿರುತ್ತದೆ.
 
ಸರಳಿಕರಿಸೋಣ ಬನ್ನಿ…
 
2 ಎನ್ನುವುದು ನಮಗೆ ತಿಳಿದಂತೆ ಭಾಗಲಬ್ಧ ಸಂಖ್ಯೆ ಆಗಿದೆ. ಇದಕ್ಕೆ ಈಗ ವರ್ಗಮೂಲವನ್ನು ಹಾಕೋಣ… ಆಗ
√2 = 1.41421356…..
ಇಲ್ಲಿ ಗಮನಿಸಿದಾಗ ಭಾಗಲಬ್ಧವಾಗಿದ್ದ (rational) 2 ಎಂಬ ಸಂಖ್ಯೆಯು, ಅದಕ್ಕೆ ವರ್ಗಮೂಲವನ್ನು 
ಹಾಕಿದಾಗ ಅಭಾಗಲಬ್ಧ (irrational) ಆಗಿ ಹೋಗಿದೆ. ಅಂದರೆ ಅಂತ್ಯವನ್ನು (finite) ಹೊಂದಿದ್ದ 
ಸಂಖ್ಯೆಯು ಈಗ ಅನಂತವಾಗಿದೆ (infinite).
 
ಆದ್ದರಿಂದ √2 ಅಭಾಗಲಬ್ಧ ಸಂಖ್ಯೆಯಾಗಿದೆ
 
ಇಷ್ಟೇ ಇದರ ಒಳಾರ್ಥ…
 
ಹಾಗೇ ಮುಂದುವರೆದು ಹೋಗಿ, ಕರಣಿಗಳಿಗೆ ಉದಾಹರಣೆ ನೀಡುವಾಗ , √2, √3, √5, √6, … ಎಂದು 
ನೀಡುತ್ತೇವೆ.
 
ಇಲ್ಲೂ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಸೂಕ್ಷ್ಮತೆಯನ್ನು ತಿಳಿಸೋಣ.
 
ಕರಣಿಗಳಿಗೆ ಉದಾಹರಿಸುವಾಗ ನಾವು √4 ನ್ನು ನೀಡಿಲ್ಲ.
ಏಕೆಂದು ಸ್ವಲ್ಪ ಯೋಚಿಸಿ ನೋಡಿ…!
4 ಎಂಬುದು ನಮಗೆ ತಿಳಿದಂತೆ ಭಾಗಲಬ್ಧ ಸಂಖ್ಯೆ ಆಗಿದೆ. ಇದಕ್ಕೆ ಈಗ ವರ್ಗಮೂಲವನ್ನು ಹಾಕೋಣ… ಆಗ
 
√4 = 2 ದೊರೆಯುತ್ತದೆ.
 
ಇಲ್ಲಿ ಗಮನಿಸಿದಾಗ ಭಾಗಲಬ್ಧವಾಗಿದ್ದ 4 ಎಂಬ ಸಂಖ್ಯೆಯು, ಅದಕ್ಕೆ ವರ್ಗಮೂಲವನ್ನು ಹಾಕಿದ ನಂತರವೂ 
ಭಾಗಲಬ್ಧ ಸಂಖ್ಯೆಯೇ ಆಗಿ ಉಳಿದಿದೆ. ಅಂದರೆ ಅಂತ್ಯವನ್ನು (finite) ಹೊಂದಿದ್ದ ಸಂಖ್ಯೆಯು 
ವರ್ಗಮೂಲದ ಪ್ರಯೋಗದ ನಂತರವೂ ಅಂತ್ಯವಾಗಿಯೇ (finite) ಉಳಿದಿದೆ.
 
√2 = 1.41421356…..  -  ಕರಣಿ
√4 = 2 -  ಅಕರಣಿ
 
ಇಷ್ಟು ಸಣ್ಣ ವ್ಯಾಖ್ಯೆಯಲ್ಲಿ ಇಷ್ಟೊಂದು ಅಗಾಧ ಅರ್ಥವಡಗಿದೆ ಎಂದಾಗ, ತಿಳಿಯುತ್ತದಲ್ಲವೇ ನಮ್ಮ 
ವಿಷಯ ಗಣಿತದ ಮಹತ್ವ.
 
 
 
 
PROUD TO BE A MATHEMATICS TEACHER
 
 
ಎಸ್. ಹರ್ಷ
ಎಂ.ಎಸ್ಸಿ., ಎಂ.ಎಡ್.,ಎಂ.ಫಿಲ್.,
ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಡತಲೆ,
ನಂಜನಗೂಡು ತಾ., ಮೈಸೂರು
ದೂ.ಸಂ. 9972261802

Sent from my iPhone

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to