sindhu.m...@gmail.com On Apr 18, 2017 12:46 PM, "sathishahithashree" <sathishahithash...@gmail.com> wrote: > > ನಾನು ಇವತ್ತು ಸಂಜೆ ನನ್ನ ಪರೀಕ್ಷೆ ಮುಗಿಸಿ ಬಸ್ಟಾಪಲ್ಲಿ ಬಸ್ಸಿಗೋಸ್ಕರ ಕಾಯ್ತಾ ಇದ್ದೆ > ಯಾವುದೇ ಟೆನ್ಷನ್ ಬಸ್ ಬೇರೆ ಬಂದಿರಲಿಲ್ಲ > ಅಷ್ಟರಲ್ಲಿ 12 ವರ್ಷದ ಬಾಲಕನೊಬ್ಬ ನನ್ನ ಹತ್ತಿರ ಬಂದು ಅಣ್ಅಣ್ 10 ರೂಪಾಯಿ ಇದ್ದರೆ ಕೊಡಿ ಅಂದ ನಾನು ಮೊದಲೇ ಯಾವುದೋ ಟೆನ್ಷನಲ್ಲಿದ್ದೆ ನಮ್ಮ ಹುಡುಗಿ ಬೆರೆ ನನ್ನ ಮೇಲೆ ಕೋಪ ಮಾಡ್ಕೊಂಡು ಬೆಳಿಗ್ಗೆಯಿಂದ ಫೋನ್ ತೆಗ್ದಿರಲಿಲ್ಲ ಈ ಹುಡುಗ ಕೇಳಿದ್ದು ನನಗೆ ರೇಗಿ ಹೊಯ್ತು > ಕೋಪದಲ್ಲಿ ನನ್ನ ಹತ್ರ ಇಲ್ಲ ಹೋಗೊ ಅಂತ ಬೈದುಬಿಟ್ಟೆ. . > > ಆಮೇಲೆ ಯಾಕೋ ಬೆಜಾರಾಗಿ ಆ ಹುಡುಗನ ಹಿಂದೆ ಹೋದೆ. > > ಅದೊಂದು ಆಸ್ಪತ್ರೆ ಅದರ ಒಂದು ಕಟ್ಟೆಯ ಮೇಲೆ ಗೋಣಿ ಚೀಲದ ಮೇಲೆ ಒಂದು ಹೆಂಗಸು ಮುದ್ದೆಯಾಗಿ ಮಲಗಿದ್ದಳು ಆ ಹುಡುಗ ಅವಳ ಹತ್ತಿರ ಹೋದವನೇ ತಲೆಗೆ ಕೈ ಹಚ್ಚಿಕೊಂಡು ಕೂತುಬಿಟ್ಟ. ... > > ನನಗೆ ಕುತೂಹಲ ತಡೆಯದೆ ಆ ಹುಡುಗನ ಹತ್ತಿರ ಹೋದೆ... > > ನನ್ನ ಮತ್ತು ಬಾಲಕನ ಸಂಭಾಷಣೆ. ... > > ನಾನು - ಯಾಕೋ ಏನಾಯ್ತು ಇಲ್ಲಿ ಬಂದು ಕೂತಿದಿಯಾ...? ಯಾರಿವರು. ...? > > ಬಾಲಕ - ಅಣ್ಣಾ ಇವರು ನಮ್ಮಮ್ಮ. . > > ನಾನು- ಏನಾಗಿದೆ ಇವರಿಗೆ....? > > ಬಾಲಕ- ಗೊತ್ತಿಲ್ಲ ಅಣ್ಣಾ ಡಾಕ್ಟ್ರು ಹೇಳಿದ್ರು ಅದೇನೋ ಕುಷ್ಟ ರೋಗ ಅಂತೆ. > > ನಾನು - ಮತ್ತೆ ಅವರನ್ನ ಇಲ್ಲಿ ಮಲಗಿಸಿ ನಿನ್ ಭಿಕ್ಷೆ ಬೇಡ್ತಿದಿಯಾ....? > > ಬಾಲಕ - ಇಲ್ಲ ಅಣ್ಣಾ ನಾನು ಭಿಕ್ಷೆ ಬೇಡಲ್ಲ ದಿನಾ ಬೆಳಿಗ್ಗೆ ಅಂಗಡಿಗಳಿಗೆ ಹೂ ಹಾಕ್ತಿನಿ > > ನಾನು - ಮತ್ಯಾಕೆ ನನ್ನ ಹತ್ರ ದುಡ್ಡು ಕೆಳ್ದೆ. ..? > > ಬಾಲಕ - ಅಣ್ಣಾ ಅಮ್ಮನ್ನ ಆಸ್ಪತ್ರೆಗೆ ತೋರಿಸ್ದೆ ಮಾತ್ರೆ ತಗೋಳೊಕೆ 10 ರೂಪಾಯಿ ಕಡಿಮೆ ಇತ್ತು ಅಣ್ಣಾ > > ಇದನ್ನು ಕೇಳಿ ನನ್ನ ಕಣ್ಣಾಲಿಗೆ ಒದ್ದೆಯಾಯಿತು ಹೆತ್ತ ತಾಯಿಯನ್ನು ಬೀದಿಗ ತಳ್ಳುವ ಮಕ್ಕಳಿರುವ ಈ ಕಾಲದಲ್ಲಿ ಆ ಹುಡುಗನ ಮಾತು ನನ್ನಲ್ಲಿ ಸಂಚಲನ ಉಂಟು ಮಾಡಿತು. .. > > ನಾನು- ನಿಮ್ಮಪ್ಪ ಎಲ್ಲೋ ಮರಿ ...? > > ಬಾಲಕ - ನಂಗೆ ಅಪ್ಪ ಇಲ್ಲ ಅಣ್ಣಾ ಸತ್ತೊಗಿದಾರೆ. ... > > ನಾನು - ಶಾಲೆಗೆ ಹೋಗಲ್ವಾ ನೀನು.....? > > ಬಾಲಕ - ಹೋಗ್ತಿನಿ ಅಣ್ಣಾ ಬೆಳಿಗ್ಗೆ ಹೂ ಹಾಕಿ > ಆಮೇಲೆ ಹೋಗ್ತಿನಿ > > ಆ ಹುಡುಗನ ಮಾತುಗಳು ನನ್ನ ಮೂಕವಿಸ್ಮತನನ್ನಾಗಿಸಿ ಬಿಟ್ಟಿದ್ದವು ಜೇಬೊಳಗೆ ಕೈ ಹಾಕಿ 100 ರೂಪಾಯಿ ನೋಟೊಂದನ್ನು ಬಾಲಕನ ಕೈಗಿತ್ತೆ > > ಬಾಲಕ -ಬೇಡ ಅಣ್ಣಾ ನಂಗೆ ಬರೀ 10 ರೂಪಾಯಿ ಸಾಕು ಇವತ್ತು ನಾನು ದುಡ್ಡು ಸರಿಯಾಗೇ ತಂದಿದ್ದೆ ದಾರಿಯಲ್ಲಿ ಪಾಪ ಒಂದು ಅಜ್ಜಿ ಹಸಿವು ಅಂತ ಮಲ್ಕೊಂಡಿದ್ಲು ಅದಕ್ಕೆ ಅವಳಿಗೆ ತಿಂಡಿ ಕೊಡಸ್ದೆ ಕಡಿಮೆ ಬಿತ್ತು 10 ರೂಪಾಯಿ ಕೊಡಿ > > ಆ ಬಾಲಕ ಮಾತು ಒಮ್ಮೆ ನನ್ನ ಬಾಲ್ಯವನ್ನು ನೆನಪಿತು ನಾನು ಈ ವಯಸ್ಸಿನಲ್ಲಿ ನನಗೆ ಸೈಕಲ್ ಬೇಕು ಎಂದು ಹಠ ಹಿಡಿದಾಗ ಅಪ್ಪ ತಮ್ಮ ಮದುವೆಯಲ್ಲಿ ಕೊಟ್ಟ ವಾಚನ್ನು ಮಾರಿ ನನಗೆ ಸೈಕಲ್ ತಂದು ಕೊಟ್ಟರು > ಅಷ್ಟೊತ್ತಿಗಾಗಲೇ ನನ್ನ ಕಣ್ಣಿಂದ ಹನಿಯೋಂದು ಜಾರಿ ಕಪಾಳ ಮಾರ್ಗವಾಗಿ ನೆಲ ಸೇರಿತ್ತು. .. > > ನಾನು -ಅಲ್ಲ ನಿಮ್ಮಮ್ಮನ ಆಸ್ಪತ್ರೆಗೆ ದುಡ್ಡು ಕಡಿಮೆ ಬಿಳುತ್ತೆ ಅಂತ ಗೊತ್ತಿದ್ರು ಅಜ್ಜಿಗೆ ಯಾಕೆ ದುಡ್ಡು ಕೊಟ್ಟೆ. ....? > > ಬಾಲಕ -ಅಣ್ಣಾ ನಾನು ಹುಡುಗ ದುಡಿಯುವ ಶಕ್ತಿ ಇದೆ ನಾನು ಹೇಗಾದರೂ ಮಾಡಿ ದುಡ್ಡು ಹೊಂದಿಸ್ತೀನಿ... ಆದ್ರೆ ಪಾಪ ಆ ಅಜ್ಜಿಗೆ ಮೇಲೆಳೊಕು ಆಗಲ್ಲ ಅದ್ಕೆ ಕೊಟ್ಟೆ. .. > > ನಾನು ಆಶ್ಚರ್ಯಚಕಿತನಾದೆ. ಇಷ್ಟು ಚಿಕ್ಕ ವಯಸ್ಸಿಗೇ ಎಂತಹ ಬುದ್ದಿ ಬೇರೆಯವರಿಗೆ ಕಷ್ಟ ಕೊಟ್ಟು ನಾವು ಚೆನ್ನಾಗಿದ್ರೆ ಸಾಕು ಅನ್ನೊ ಈ ಜನರ ಮಧ್ಯೆ ನನಗೆ ಕಷ್ಟ ಇರಲಿ ಬೇರೆಯವರ ಕಷ್ಟಕ್ಕೆ ನಾನು ಸ್ಪಂದಸ್ತಿನಿ ಅನ್ನೋ ಹುಡುಗನ ಮಾತು ಅವನ ಮೇಲಿನ ಅಭಿಮಾನವನ್ನು ಇನ್ನೂ ಜಾಸ್ತಿ ಮಾಡಿತು. > > ದುಃಖ ತಡೆಯದೆ ಅವನನ್ನು ಅಪ್ಪಿಕೊಂಡು ಅತ್ತು ಬಿಟ್ಟೆ ಸಾವರಿಸಿಕೊಂಡು > > ನಾನು -ತಗೊ ಎಂದು 100 ರೂಪಾಯಿ > > ಬಾಲಕ -ಬೇಡ ಅಣ್ಣಾ ನಂಗೆ ಬರೀ 10 ರೂಪಾಯಿ ಸಾಕು ಎಂದು ಎಲ್ಲೋ ಒಂದು ಕಡೆ ಹೋಗಿ ಚಿಲ್ಲರೆ ತಂದು 90 ರೂಪಾಯಿ ನನ್ನ ಕೈಗಿತ್ತು ಬರ್ತಿನಿ ಅಂತ ಹೇಳಿ ಹೋಗುವಾಗ ಒಂದು ಮಾತು ಹೇಳಿದ > > ಅಣ್ಣಾ ನಾನು ಅಮ್ಮನನ್ನ ಚೆನ್ನಾಗಿ ನೋಡ್ಕೊತೀನಿ ಭಿಕ್ಷೆ ಬೇಡಿ ಅಲ್ಲ ಚೆನ್ನಾಗಿ ದುಡ್ದು.. > > ನಿಮ್ಮ ದುಡ್ಡನ್ನ ಖಂಡಿತ ವಾಪಸ್ ಕೊಡ್ತಿನಿ ಅಣ್ಣಾ ಎಂದವನ ಕಣ್ಣಲ್ಲಿ ಆತ್ಮವಿಶ್ವಾಸದ ಮಿಂಚೊಂದು ಕಣ್ಣಿಗೆ ರಾಚುವಂತೆ ಹೊಳೆಯುತ್ತಿತ್ತು. .. > > ಗೆಳೆಯರೆ ಇಂತಹ ಮುಗ್ಧ ಎಷ್ಟೋ ಮಕ್ಕಳು ನಮ್ಮ ನಿಮ್ಮ ಸುತ್ತಮುತ್ತ ಎಲ್ಲೆಡೆ ಇದ್ದಾರೆ > ಅಂತಹವರಿಗೆ ನಮ್ಮಿಂದಾಗೋ ಸಹಾಯ ಏನಾದರೂ ಮಾಡಲು ಸಾಧ್ಯನಾ.....? ಸಾಧ್ಯವಾದರೆ ಮುಂದುವರೆಯೋಣ..........ದಯಮಾಡಿ ಮನುಷತ್ವ ಬಿಡಬೇಡಿ > 👍👍👍👍👍👍 > Forwarded as received.... > > > ಸ್ಯಾಮ್‌ಸಂಗ್ ಮೊಬೈಲ್ ನಿಂದ ಕಳುಹಿಸಿದೆ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout.
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.