ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್  ಕಂಡುಹಿಡಿದನು ಅಂತ ಶಾಲೆಯಲ್ಲಿ ಉರು ಹೊಡೆದದ್ದು
ನೆನಪಿದೆಯೇ?  ಮತ್ತೆ ನಿಕೋಲಾ ಟೇಸ್ಲಾ ಏನನ್ನು ಕಂಡುಹಿಡಿದ ? ಹೆಚ್ಚಿನ ಜನ ಈ ಹೆಸರೇ
ಕೇಳಿಲ್ಲ. ಯಾಕೆ ಗೊತ್ತಾ? ಅವನ ಹೆಸರನ್ನೇ ಅಳಿಸಲು ಪ್ರಯತ್ನ ನಡೆದಿತ್ತು.  ಈತ ಎಷ್ಟರ
ಮಟ್ಟಿಗೆ ವಿಕ್ಷಿಪ್ತ ಅಂದರೆ ಆತ ಹುಚ್ಚು ವಿಜ್ಞಾನಿ ಅಂತ ಆಡಿಕೊಳ್ಳುವ ಮಟ್ಟಿಗೆ.

ಥಾಮಸ್ ಆಲ್ವಾ ಎಡಿಸನ್ ಈತನಿಗೆ ಘೋರ ಮೋಸ ಮಾಡಿದ್ದ.  ಕೈಯಲ್ಲಿ   4 ಸೆಂಟ್ಸ್ ಹಿಡಿದುಕೊಂಡು
1884 ರಲ್ಲಿ ಇಂಜಿನಿಯರಿಂಗ್ ಪಾಸಾಗದ ಟೇಸ್ಲಾ ಅಮೇರಿಕಾಗೆ ಬಂದ.  ಕೆಲಸಕ್ಕೆ ಸೇರಿದ್ದು
ಎಡಿಸನ್ ಬಳಿ.  ಸಂಬಳ ಅತೀ ಕಡಿಮೆ.
ಎಡಿಸನ್ ಕಂಡುಹಿಡಿದಿದ್ದು ಡೈರೆಕ್ಟ ಕರೆಂಟ್ ( ಡಿಸಿ ) ಮೋಟರ್.  ಅದರಲ್ಲಿ ಅನೇಕ ನ್ಯೂನತೆ
ಗಳಿದ್ದವು. ತಾನು ಆಲ್ಟರನೇಟಿವ ಕರೆಂಟ್ ( ಎಸಿ ) ಮೋಟಾರ್ ಕಂಡುಹಿಡಿಯುವುದಾಗಿ ಟೇಸ್ಲಾ
ಹೇಳಿದ.  ಹಾಗೇನಾದರೂ ಮಾಡಿದಲ್ಲಿ 50 ಸಾವಿರ $ ಕೊಡುವುದಾಗಿ ಎಡಿಸನ್ ಹೇಳಿದ. ಇಂದಿನ ಲೆಕ್ಕ
ದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಇರಬಹುದು.

ಟೇಸ್ಲಾ ಹುಟ್ಟಿದ್ದು  1856 ಆಸ್ಟ್ರಿಯಾ ದಲ್ಲಿ. ( Arnold Schwarzenegger was born
here too ) ಚಿಕ್ಕವನಿರಬೇಕಾದರೆ ಇಡೀ ಪುಸ್ತಕ ವನ್ನೇ ನೆನಪಿಟ್ಟುಕ್ಕೊಳ್ಳುವಷ್ಟು ಜ್ಞಾಪಕ
ಶಕ್ತಿ . ಅಸಾಮಾನ್ಯ ಮೇಧಾವಿ. 17 ವರ್ಷದ ಟೇಸ್ಲಾ ಕಾಲರಾ ಆಗಿ ಒಂಬತ್ತು ತಿಂಗಳು ಹಾಸಿಗೆ
ಹಿಡಿದ. ಬದುಕುವ ಚಾನ್ಸ್ ಇರಲಿಲ್ಲ. ಆಗ ಟೇಸ್ಲಾ ನ ತಂದೆ - ನೀನು ಬದುಕಿದರೆ ಇಂಜಿನಿಯರಿಂಗ್
ಕಲಿಸುವೆ ಅಂತ ಮಾತು ಕೊಟ್ಟರು. ಟೇಸ್ಲಾ ಪವಾಡದಂತೆ ಗುಣವಾದ. ಆದರೆ ಕಾಲೇಜಿಲ್ಲಿ ಜೂಜಾಟ
ಕಲಿತು ಇಂಜಿನಿಯರಿಂಗ್ ಕೊನೆಯ ಪರೀಕ್ಷೆ ಯಲ್ಲಿ ಏನೂ ಓದದೇ ಹೋಗಿದ್ದ.

ಸರಿ.  ತಿಂಗಳು ಗಟ್ಟಲೇ ಕಷ್ಟ ಪಟ್ಟು ಎಸಿ ಮೋಟಾರ್ ಕಂಡುಹಿಡಿದ ಟೇಸ್ಲಾ ಗೆ,  ಎಡಿಸನ್ -
ನಾನು ಜೋಕ್ ಮಾಡಿದ್ದೆ. ಹಣ ಗಿಣ ಏನೂ ಕೊಡಲು ಸಾಧ್ಯವಿಲ್ಲ.  ಬೇಕಾದರೆ ವಾರಕ್ಕೆ ಹತ್ತು
ಡಾಲರ್ ಸಂಬಳ ಜಾಸ್ತಿ ಮಾಡುತ್ತೇನೆ ಅಂದ.  ಟೇಸ್ಲಾ ರಾಜೀನಾಮೆ ಕೊಟ್ಟು ಹೊರ ನಡೆದ.

ನಂತರ ನಡೆದದ್ದು ಟೇಸ್ಲಾ ಎಡಿಸನ್ ಯುದ್ಧ. ಇದು ಕರೆಂಟ್ ವಾರ್ ಅಂತ ಹೆಸರಾಯಿತು. ಡಿಸಿ
ಕರೆಂಟ್ ಚಿಕ್ಕ ಪ್ರದೇಶ ಗಳಿಗೆ ಮಾತ್ರ ಹೊಂದುತ್ತಿತ್ತು. ಟೇಸ್ಲಾ ಕರೆಂಟ್ ದೊಡ್ಡ ನಗರಗಳಿಗೆ
ಹೊಂದುತ್ತಿತ್ತು. ಮತ್ತು ಸಪೂರ ವಾಯರ್ ಸಾಕಿತ್ತು. ಎಡಿಸನ್ ಟೇಸ್ಲಾ ನನ್ನು ಸೋಲಿಸಲು
ಆನ್ಯಾಯದ ದಾರಿ ಹಿಡಿದ.  ಮಕ್ಕಳಿಗೆ ದುಡ್ಡು ಕೊಟ್ಟು ಜನರ ನಾಯಿ ಬೆಕ್ಕು ಗಳನ್ನು ಕೊಂದು
ಹಾಕಿಸಿ ಇವು ಎಸಿ ಕರೆಂಟ್ ಕಾರಣ ಸತ್ತವು. ಅದು ಅಪಾಯಕಾರಿ ಅಂತ ಸುದ್ದಿ ಹಾಕಿದ. ಜನರ ಎದುರು
ಕೆಲ ನಾಯಿಗಳನ್ನು ಮತ್ತು ಒಂದು ಆನೆಯನ್ನು ಕರೆಂಟ್ ಕೊಟ್ಟು ಸಾಯಿಸಿದ.

ಇದಕ್ಕೆ ಉತ್ತರ ವಾಗಿ ಟೇಸ್ಲಾ ಸಾವಿರಾರು ವೋಲ್ಟ್ ಕರೆಂಟ್ ತನ್ನ ಮೈಯಲ್ಲಿ ಹಾಯಿಸಿಕೊಂಡು
ತೋರಿಸಿದ.  ಹೈ ಫ್ರೀಕ್ವೆನ್ಸಿ ಕರೆಂಟ್ ಹಾನಿ ಮಾಡುವುದಿಲ್ಲ.  ಅತೀ ಹೆಚ್ಚು ತರಂಗದ ಧ್ವನಿ
ಮಾನವ ಕಿವಿಗಳಿಗೆ ಹೇಗೆ ಕೇಳುವುದಿಲ್ಲವೋ ಹಾಗೆ. 2000 ಸೈಕಲ್ ಗಿಂತ ಹೆಚ್ಚಿನ
ಫ್ರೀಕ್ವೆನ್ಸಿ ಕರೆಂಟ್ ನ್ನು ದೇಹ ಗುರುತಿಸುವುದಿಲ್ಲ.  ಈಗ ಈ ತರ ಕರೆಂಟ್ ನ್ನು
ಇಲೆಕ್ಟ್ರಿಸಿಟಿ ಥೆರಪಿಯಲ್ಲಿ ಬಳಸುತ್ತಾರೆ.
ಎಡಿಸನ್ ಸೋತ.  1893 ವರ್ಲ್ಡ ಟ್ರೇಡ್ ಫೇರ್ ಗೆ ವಿದ್ಯುತ್ ಕೊಡುವ ಕಾಂಟ್ರಾಕ್ಟ ಟೇಸ್ಲಾ ಗೆ
ಸಿಕ್ಕಿತು.
ಟೇಸ್ಲಾ ಮಾಡಿದ ಸಂಶೋಧನೆ ಗಳು 700 ಕ್ಕೂ ಅಧಿಕ. ಆತನ ಹೆಸರಿನಲ್ಲಿ ಇದ್ದ ಪಾಟೆಂಟ್ 125 .
ಟೇಸ್ಲಾ ನ ಜತೆ ಸಂಪರ್ಕ ಕ್ಕೆ ಬಂದವರೆಲ್ಲ ಕೋಟ್ಯಾಧೀಶರಾದರು.

1899 . ಆತ ಮಾನವ ನಿರ್ಮಿತ ಮಿಂಚು ಕಂಡುಹಿಡಿದ.  ಲಕ್ಷಾಂತರ ವೋಲ್ಟ್ ನ ಮಿಂಚನ್ನು
ತಯಾರಿಸಿದ ಮಾತ್ರವಲ್ಲ ಅದನ್ನು ತನ್ನ ದೇಹದಲ್ಲಿ ಹರಿಸಿದ.  ಜಾದೂ ಮಾಡಿದಂತೆ ತನ್ನ
ಕೈಯ್ಯಿಂದ ಮಿಂಚನ್ನು ಎಸೆಯ ಬಲ್ಲವನಾಗಿದ್ದ.  ಆತ ಈ ಪ್ರಯೋಗ ಮಾಡಿದಾಗ ಆಕಾಶ ದಿಂದ 135 ಅಡಿ
ಉದ್ದ ದ ಮಿಂಚಿನ ಪ್ರವಾಹವೇ ಆತನ ಪ್ರಯೋಗ ಶಾಲೆಯ ಮೇಲೆ ಎರಗಿತು. ಮೂವತ್ತು ಕಿಮೀ ಸುತ್ತಳತೆ
ಯಲ್ಲಿ ಜನರಿಗೆ ಗುಡುಗಿನ ಆರ್ಭಟ ಕೇಳಿತು.  ಸುತ್ತ ನಡೆದಾಡುತ್ತಿದ್ದ ಜನರ ಪಾದಗಳ ಮಧ್ಯೆ
ಕಿಡಿಗಳು ಉಂಟಾದವು. ಏನು ಮುಟ್ಟಿದರೂ ಕಿಡಿಗಳು ಬಂದವು. ಬ್ಯಾಕ್ ಟು ದಿ ಫ್ಯೂಚರ್ ಸಿನಿಮಾ
ನೀವು ನೋಡಿದ್ದರೆ ಅದರಲ್ಲಿ ಬರುವ ವಿಜ್ಞಾನಿ ಟೇಸ್ಲಾ ನಿಂದ ಪ್ರೇರಿತ.
ಟೇಸ್ಲಾ ಹೇಳಿದ್ದು ಇಡೀ ಭೂಮಿಯಲ್ಲಿ ಕರೆಂಟ್ ಹರಿಯುತ್ತಿದೆ.  ಅದಕ್ಕೆ ಒಂದು ಫ್ರೀಕ್ವೆನ್ಸಿ
ಇದೆ.  ಆದೇ ಫ್ರೀಕ್ವೆನ್ಸಿ ಬಳಸಿದರೆ ಭೂಮಿಯ ಮೇಲೆ ಎಲ್ಲೇ ಒಂದು ಕೋಲು ನೆಟ್ಟರೂ
ಇಲೆಕ್ಟ್ರಿಸಿಟಿ ಸಿಗುತ್ತದೆ.  ಅದೂ ಪುಕ್ಕಟೆ.

ಟೇಸ್ಲಾ ಇಡೀ ಜಗತ್ತಿಗೆ ಪುಕ್ಕಟೆ ಇಲೆಕ್ಟ್ರಿಸಿಟಿ ಕೊಡಬೇಕು ಅಂತ ಯೋಜನೆ ಹಾಕಿದ್ದ .
ಮಾತ್ರವಲ್ಲ ಅದು ವೈರ್ ಲೆಸ್ ಇಲೆಕ್ಟ್ರಿಸಿಟಿ.  ಈಗಿನ ಮೊಬೈಲ ಸಿಗ್ನಲ್ ತರ. ಅಲ್ಲಲ್ಲಿ
ಟವರ್ ಹಾಕಿ ಇಲೆಕ್ಟ್ರಿಸಿಟಿ ರಿಲೇ ಮಾಡುವುದು.  ಇವನ್ನು ಕಾರು ಕ್ಯಾಚ್ ಮಾಡಿ ಬಳಸುವುದು.
ಪೆಟ್ರೋಲು ಬೇಡ ಡೀಸಲ್ ಬೇಡ.  ಈ ಗಲ್ಫ್ ವಾರ್ ಇರುತ್ತಲೇ ಇರಲಿಲ್ಲ. ಭಯೋತ್ಪಾದನೆ ಕೂಡ.
ಅದೊಂದು  ಪ್ರಾಜೆಕ್ಟ ಆಗಿದ್ದಿದ್ದರೆ ಇಡೀ ಜಗತ್ತೇ ಇಂದು ಬೇರಯೇ ಇರುತ್ತಿತ್ತು.

1900 ಇಸ್ವಿ . ಇಂತಹ ಒಂದು ಟವರ್ ನಿರ್ಮಾಣ ಮಾಡಲು ಜೆ ಪಿ ಮಾರ್ಗನ್ 1.5 ಲಕ್ಷ ಡಾಲರ್
ಕೊಟ್ಟ. ( ಇಂದು ಮಾರ್ಗನ್ ಎಂಡ್ ಸ್ಟಾನ್ಲಿ ) ಈಗಿನ ಲೆಕ್ಕದಲ್ಲಿ 45 ಲಕ್ಷ  $.  ಟವರ್
ಇನ್ನೇನು ಮುಗಿಯಬೇಕು ಅಂದಾಗ ಮಾರ್ಗನ್ ಉಳಿದ ಹಣ ಕೊಡಲು ಸಾಧ್ಯವಿಲ್ಲ ಅಂತ ಹೇಳಿದ. ಅಮೆರಿಕದ
ಸರಕಾರ ಈ ಟವರ್ ಬೀಳಿಸಿತು.  ಯಾಕೆ ಅಂತ ಗೊತ್ತಿಲ್ಲ.  ಫ್ರೀ ವಿದ್ಯುತ್ ಕೊಟ್ಟರೆ ಲಾಭ ಏನು
ಅಂತ ಬೀಳಿಸಿತು ಅಂತ ನಂತರ ಗೊತ್ತಾಯಿತು.
ಟೇಸ್ಲಾ ಏನೇ ಮಾಡಿದರೂ ಸರಕಾರ ತೊಂದರೆ ಕೊಡುತ್ತಿತ್ತು.

ಟೇಸ್ಲಾ ಸತ್ತ ನಂತರ ಆತನ ಎಲ್ಲ ನೋಟ್ಸ್ ಗಳನ್ನು ಅಮೆರಿಕ ತೆಗೆದುಕೊಂಡು ಹೋಗಿ ಕ್ಲಾಸಿಫೈ
ಮಾಡಿ ಇಟ್ಟಿದೆ.ಯಾಕೆ ಗೊತ್ತಾ?  ಟೇಸ್ಲಾ ಡೆತ್ ರೇಸ್ ಕಂಡುಹಿಡಿದಿದ್ದ. ಈ ಲೇಸರ್ ಮೂಲಕ
ಆಕಾಶದಲ್ಲಿ ಹಾರುವ ವಿಮಾನ ವನ್ನು  ಹೊಡೆದುರುಳಿಸಲು ಏನೂ ಖರ್ಚು ಬರುತ್ತಿರಲಿಲ್ಲ.  ಟೇಸ್ಲಾ
ನ ಈ ನೋಟ್ಸ್ ನಿಗೂಢ ವಾಗಿ ಮಾಯವಾದವು. ಈಗ  ಮೂರು ವರ್ಷಗಳ ಹಿಂದೆ ಟೇಸ್ಲಾ ನ ಡೆತ್ ರೇ ನಾವು
ಡೆವಲಪ್ ಮಾಡಿದ್ದೇವೆ ಅಂತ ಅಮೇರಿಕಾದ ಟೀವಿ ವರದಿ ಮಾಡಿದೆ.

1893 .ಮಾರ್ಕೋನಿ ರೇಡಿಯೋ ಕಂಡು ಹಿಡಿಯುವ ಮೊದಲೇ ಟೇಸ್ಲಾ ಕಂಡುಹಿಡಿದಿದ್ದ. ಆದರೆ ಕೋರ್ಟ್
ಹಕ್ಕನ್ನು  ಮಾರ್ಕೋನಿಗೆ ನೀಡಿತು. ಆಗ ಟೇಸ್ಲಾ ಹೇಳಿದ - ಮಾರ್ಕೋನಿ ಒಬ್ಬ ಒಳ್ಳೆಯ ವ್ಯಕ್ತಿ
. ಆತ ನನ್ನ 17 ಪಾಟೆಂಟ್ ಗಳನ್ನು ಬಳಸುತ್ತಿದ್ದಾನೆ. ಒಳ್ಳೆಯದಾಗಲಿ.

ಒಮ್ಮೆ ಟೇಸ್ಲಾ ತನ್ನ ಒಸ್ಸಿಲೇಟರ್ ಯಂತ್ರ ಚಾಲೂ ಮಾಡಿದಾಗ ಸುತ್ತ ಭೂಕಂಪ ಆಯಿತು.  ಅದನ್ನು
ನಿಲ್ಲಿಸಲು ಸಾಧ್ಯವಾಗದೇ ಟೇಸ್ಲಾ ಸುತ್ತಿಗೆಯಿಂದ ಅದನ್ನು ಮುರಿಯುವದಕ್ಕೂ ಪೊಲೀಸರು
ಬರುವದಕ್ಕೂ ಸರಿ ಆಯಿತಂತೆ.  ಭೂಮಿಯ ಫ್ರೀಕ್ವೆನ್ಸಿ ಯನ್ನು ಉಪಯೋಗಿಸಿ ಈ ಯಂತ್ರ ಕೆಲಸ
ಮಾಡುತ್ತದೆ. ಇದನ್ನು ಉಪಯೋಗಿಸಿ ಯಾವುದೇ ಬಿಲ್ಡಿಂಗ ಬೀಳಿಸಬಹುದು.  ಬೇಕಾದರೆ ಇಡೀ
ಭೂಮಿಯನ್ನು ಎರಡು ತುಂಡು ಮಾಡಬಹುದು ಅಂತ ಟೇಸ್ಲಾ ಹೇಳಿದ. ಈ ಭೂಕಂಪನದ ಯಂತ್ರ ದ ಬಗ್ಗೆ
ನಂತರ ಸುಳಿವು ಸಿಕ್ಕಿಲ್ಲ.

ಟೇಸ್ಲಾ 6.2 " hight . 64 ಕೆಜಿ.  ಸ್ಪುರದ್ರೂಪಿ.  ಆತನಿಗೆ ದಪ್ಪ ಇದ್ದವರನ್ನು ಕಂಡರೆ
ಆಗುತ್ತಿರಲಿಲ್ಲ.
ಟೇಸ್ಲಾ ತನ್ನ ಜೀವನದಲ್ಲಿ ಬ್ರಹ್ಮಚರ್ಯ ಮಾಡಿದ್ದರಿಂದ ತನಗೆ ಈ ತರ ಪವರ್ ಬಂದಿದೆ ಅಂತ
ಹೇಳಿದ್ದ.  ಪ್ರತೀ ರಾತ್ರಿ ಕಾಲಿನ ಹೆಬ್ಬೆರಳು ಗಳನ್ನು ನೂರು ಬಾರಿ ಉಜ್ಜಿದರೆ ಮೆದುಳು
ಚುರುಕಾಗುತ್ತದೆ ಅಂತ ನಂಬಿದ್ದ. ಸ್ವಾಮಿ ವಿವೇಕಾನಂದರ ನ್ನು ಭೇಟಿಯಾಗಿದ್ದ . ಈತನ ಪ್ರಯೋಗ
ಶಾಲೆಗೆ ಯಾವುದೋ ರೇಡಿಯೋ ಸಂದೇಶಗಳು ಬಂದು ಅವು ಅನ್ಯ ಗ್ರಹ ಜೀವಿಯವು ಅಂತ
ಸುದ್ದಿಯಾಗಿತ್ತು. ಟೇಸ್ಲಾ ತಾನು ಟೈಮ್ ಮಷೀನ ಕಂಡು ಹಿಡಿಯುತ್ತೇನೆ ಅಂತ ಕೂಡ ಹೇಳಿದ್ದ.

1897 ರಲ್ಲಿ ಒಂದು ವೈರ್ ಲೆಸ್ ಇಲೆಕ್ಟ್ರಿಸಿಟಿ ಪ್ರಯೋಗ ದಲ್ಲಿ ಆರು ಮೈಲಿ ದೂರದ ಪವರ್
ಹೌಸ್‌ನ ಡೈನಮೋ ಹೆಚ್ಚಿನ ಕರೆಂಟ್ ಬಂದು ಸುಟ್ಟು ಹೋಯಿತು. ಅಲ್ಲಿನ ಕಿಟಕಿಗಳೆಲ್ಲ
ಸ್ಪಾರ್ಕ್. ಸ್ವಿಚ್ ಆಫ್ ಇದ್ದರೂ ಬಲ್ಬ್ ಗಳೆಲ್ಲ ಹೊತ್ತಿ ಉರಿದವು.
ಇಂದಿನ ಸ್ಪಾರ್ಕ್ ಪ್ಲಗ್ ಕಂಡುಹಿಡಿದಿದ್ದು ಟೇಸ್ಲಾ. ರಿಮೋಟ್ ಕಂಟ್ರೋಲ್, ಹೈಡ್ರೋ
ಇಲೆಕ್ಟ್ರಿಸಿಟಿ,  ಟೇಸ್ಲಾ ಕಾಯ್ಲ್. ಇಂಡಕ್ಷನ್ ಮೋಟಾರ್ ಇತ್ಯಾದಿ ನೂರಾರು ಕೂಡ. ಅಮೆರಿಕದ
ನೈಗರಾ ವಿದ್ಯುತ್ ಸ್ಥಾವರ ದಲ್ಲಿ  ಅಂದಿನಿಂದ ಇಂದಿನವರೆಗೆ ವಿದ್ಯುತ್ ಉತ್ಪಾದನೆ  ಟೇಸ್ಲಾ
ತಯಾರಿಸಿದ  ಮೋಟಾರ್ ನಿಂದ.

ಎಡಿಸನ್ ಗೂ ಮೊದಲು ಟೇಸ್ಲಾ ಎಕ್ಸ್ ರೇ ಕಂಡುಹಿಡಿದಿದ್ದ. ಎಡಿಸನ್ ಎಕ್ಸ್ ರೇ ತುಂಬಾ
ರೇಡಿಯೇಶನ್ ನಿಂದ ಕೂಡಿತ್ತು. ಟೇಸ್ಲಾ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಎಡಿಸನ್ ತನ್ನ
ಅಸಿಸ್ಟೆಂಟ್ ಸ್ಟಾನ್ಲಿ ಎಂಬಾತನ ಕೈಯಿನ ನೂರಾರು ಎಕ್ಸ್ ರೇ ತೆಗೆದು ನಂತರ ಆತನ ಕೈಯನ್ನೇ
ಕತ್ತರಿಸಬೇಕಾಗಿ ಬಂತು.  ಇದಲ್ಲದೆ ಎಡಿಸನ್ ತನ್ನ ಕಣ್ಣಿಗೂ ಎಕ್ಸ್ ರೇ ಬಿಟ್ಟುಕೊಂಡಿದ್ದ.

ಆದರೆ ದುಡ್ಡಿಗೆ ಆತ ಆಸೆ ಪಟ್ಟಿರಲೇ ಇಲ್ಲ. ಜಾರ್ಜ್ ವೆಲ್ಲಿಂಗಟನ್ ಟೇಸ್ಲಾ ನ ಜತೆ ಒಪ್ಪಂದ
ಮಾಡಿಕೊಂಡು ಎಸಿ ಮೋಟಾರ್ ತಯಾರಿಕೆ ಆರಂಭಿಸಿತು. ಅವರು ಟೇಸ್ಲಾ ಗೆ  ಹತ್ತು ಲಕ್ಷ $
ಕೊಡಬೇಕಾಗಿತ್ತು. ಆದರೆ ನಮಗೆ ತೊಂದರೆ ಆಗಿದೆ ದಯವಿಟ್ಟು ಕೆಲವು ದಿನ ಹಣ ತೆಗೆದು
ಕೂಳ್ಳಬೇಡಿ ಅಂತ ಅವರು ಟೇಸ್ಲಾ ಹತ್ತಿರ ವಿನಂತಿ ಮಾಡಿದರು.  ಟೇಸ್ಲಾ ಹಣ ಬೇಡ ಅಂತ
ಕಾಂಟ್ರಾಕ್ಟ ಹರಿದು ರೈಟ್ಸ್ ಪುಕ್ಕಟೆ ಕೊಟ್ಟ.  ಆ ಕಾಂಟ್ರಾಕ್ಟ  ನ ಇಂದಿನ ಬೆಲೆ 300 ಕೋಟಿ
ರೂಪಾಯಿ ಗೂ ಹೆಚ್ಚು.  ವೆಲ್ಲಿಂಗಟನ್ ಸಾವಿರಾರು ಕೋಟಿ ಡಾಲರ್ ದುಡಿಯಿತು. ಟೇಸ್ಲಾನ ಪ್ರಯೋಗ
ಶಾಲೆ ನಿಗೂಢವಾಗಿ ಸುಟ್ಟು ಹೋಯಿತು. ಆತ ಮತ್ತೆ ಮೊದಲಿನಿಂದ ಶುರು ಮಾಡಿದ .

ಟೇಸ್ಲಾ ತನ್ನ ಪಾಟೆಂಟ್ ಗಳನ್ನು ಬ್ಯಾಂಕ ನಲ್ಲಿ ಅಡವಿಟ್ಟು ಸಾಲ ಪಡೆದಿದ್ದ.  ಬ್ಯಾಂಕ
ಅವನ್ನು ಮುಟ್ಟುಗೋಲು ಹಾಕಿತು. ಟೇಸ್ಲಾ ರಸ್ತೆಯ ಬದಿ ಹೊಂಡ ತೋಡುವುದು , ಮೋಟಾರ್ ರಿಪೇರಿ
ಮಾಡುತ್ತಿದ್ದ.

1943 . ಟೇಸ್ಲಾ ಸಾಯುವಾಗ ಕೈಯಲ್ಲಿ ಕಾಸಿಲ್ಲದೇ ಬಿಸ್ಕಿಟ್ ತಿಂದು ಯಾವುದೋ ಹೋಟೆಲ್ ನಲ್ಲಿ
ಇದ್ದ. ಅರೆ ಹುಚ್ಚನಂತೆ ಪಾರಿವಾಳ ಗಳ ಜೊತೆ ಮಾತನಾಡುತ್ತಿದ್ದ.  ಸಾವಿರಾರು ಪಾರಿವಾಳ ಗಳಿಗೆ
ಕಾಳು ನೀಡುತ್ತಿದ್ದ. ಅದರಲ್ಲಿ ಒಂದು ಬಿಳಿ ಪಾರಿವಾಳ ಈತ ಎಲ್ಲೇ ಇದ್ದರೂ ಬರುತ್ತಿತ್ತು.

ಇಂದು ಟೇಸ್ಲಾ ಗಿಗಾಫ್ಯಾಕ್ಟರಿ ಸ್ಥಾಪಿಸಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಲಿಥಿಯಮ್ ಆಯಾನ್
ಬ್ಯಾಟರಿ ಗಳನ್ನು ತಯಾರಿಸಲಾಗುತ್ತಿದೆ.  ಟೇಸ್ಲಾ ಇಲೆಕ್ಟ್ರಿಕ್ ಕಾರ್ ತಯಾರಿಸುವ ಟೇಸ್ಲಾ
ಮೋಟಾರ್ಸ ಇದೆ.
" Present is their's. The future for which I have really worked is mine " -
Nikola Tesla
ಒಂದು ದಿನ ಕೈಯಲ್ಲಿ ಚಿಕ್ಕ ಯಂತ್ರ ಹಿಡಿದು ಇಡೀ ಜಗತ್ತಿನ ಮಾಹಿತಿ ನೋಡುವಂತಾಗುತ್ತದೆ ಅಂತ
ಇಂಟರ್‌ನೆಟ್ ಬಗ್ಗೆ ಟೇಸ್ಲಾ ಆಗ  ಹೇಳಿದ್ದ.

ಇಂಟರ್‌ನೆಟ್ ನಲ್ಲಿ ಟೇಸ್ಲಾ ಅಭಿಮಾನಿ ನಂಘಗಳಿವೆ.  ನೀವು ಜಗತ್ತಿನಲ್ಲಿ ಯಾವುದೇ ವಿಜ್ಞಾನಿ
ಯನ್ನು ಜೀವನ ದಲ್ಲಿ ಒಮ್ಮೆ ಭೇಟಿಯಾಗಲು ಬಯಸಿದರೆ ಯಾರನ್ನು?  ಅಂತ  ಕಳೆದ ವರ್ಷ ಆನ್ ಲೈನ್
ಪೋಲ್ ಮಾಡಿದ್ದರು.  ಯಾರನ್ನು ಜನ ಆಯ್ಕೆ ಮಾಡಿದರು ಅಂತ ಬಾಯಿ ಬಿಟ್ಟು ಹೇಳಬೇಕಿಲ್ಲ ತಾನೇ?

Source..sreedhar mayya
...science hike 1gp

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to