Nice sir On 21 Mar 2016 20:36, "vijay prasad" <gejj...@gmail.com> wrote:
> ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡುಹಿಡಿದನು ಅಂತ ಶಾಲೆಯಲ್ಲಿ ಉರು ಹೊಡೆದದ್ದು > ನೆನಪಿದೆಯೇ? ಮತ್ತೆ ನಿಕೋಲಾ ಟೇಸ್ಲಾ ಏನನ್ನು ಕಂಡುಹಿಡಿದ ? ಹೆಚ್ಚಿನ ಜನ ಈ ಹೆಸರೇ > ಕೇಳಿಲ್ಲ. ಯಾಕೆ ಗೊತ್ತಾ? ಅವನ ಹೆಸರನ್ನೇ ಅಳಿಸಲು ಪ್ರಯತ್ನ ನಡೆದಿತ್ತು. ಈತ ಎಷ್ಟರ > ಮಟ್ಟಿಗೆ ವಿಕ್ಷಿಪ್ತ ಅಂದರೆ ಆತ ಹುಚ್ಚು ವಿಜ್ಞಾನಿ ಅಂತ ಆಡಿಕೊಳ್ಳುವ ಮಟ್ಟಿಗೆ. > > ಥಾಮಸ್ ಆಲ್ವಾ ಎಡಿಸನ್ ಈತನಿಗೆ ಘೋರ ಮೋಸ ಮಾಡಿದ್ದ. ಕೈಯಲ್ಲಿ 4 ಸೆಂಟ್ಸ್ > ಹಿಡಿದುಕೊಂಡು 1884 ರಲ್ಲಿ ಇಂಜಿನಿಯರಿಂಗ್ ಪಾಸಾಗದ ಟೇಸ್ಲಾ ಅಮೇರಿಕಾಗೆ ಬಂದ. ಕೆಲಸಕ್ಕೆ > ಸೇರಿದ್ದು ಎಡಿಸನ್ ಬಳಿ. ಸಂಬಳ ಅತೀ ಕಡಿಮೆ. > ಎಡಿಸನ್ ಕಂಡುಹಿಡಿದಿದ್ದು ಡೈರೆಕ್ಟ ಕರೆಂಟ್ ( ಡಿಸಿ ) ಮೋಟರ್. ಅದರಲ್ಲಿ ಅನೇಕ ನ್ಯೂನತೆ > ಗಳಿದ್ದವು. ತಾನು ಆಲ್ಟರನೇಟಿವ ಕರೆಂಟ್ ( ಎಸಿ ) ಮೋಟಾರ್ ಕಂಡುಹಿಡಿಯುವುದಾಗಿ ಟೇಸ್ಲಾ > ಹೇಳಿದ. ಹಾಗೇನಾದರೂ ಮಾಡಿದಲ್ಲಿ 50 ಸಾವಿರ $ ಕೊಡುವುದಾಗಿ ಎಡಿಸನ್ ಹೇಳಿದ. ಇಂದಿನ ಲೆಕ್ಕ > ದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಇರಬಹುದು. > > ಟೇಸ್ಲಾ ಹುಟ್ಟಿದ್ದು 1856 ಆಸ್ಟ್ರಿಯಾ ದಲ್ಲಿ. ( Arnold Schwarzenegger was born > here too ) ಚಿಕ್ಕವನಿರಬೇಕಾದರೆ ಇಡೀ ಪುಸ್ತಕ ವನ್ನೇ ನೆನಪಿಟ್ಟುಕ್ಕೊಳ್ಳುವಷ್ಟು ಜ್ಞಾಪಕ > ಶಕ್ತಿ . ಅಸಾಮಾನ್ಯ ಮೇಧಾವಿ. 17 ವರ್ಷದ ಟೇಸ್ಲಾ ಕಾಲರಾ ಆಗಿ ಒಂಬತ್ತು ತಿಂಗಳು ಹಾಸಿಗೆ > ಹಿಡಿದ. ಬದುಕುವ ಚಾನ್ಸ್ ಇರಲಿಲ್ಲ. ಆಗ ಟೇಸ್ಲಾ ನ ತಂದೆ - ನೀನು ಬದುಕಿದರೆ ಇಂಜಿನಿಯರಿಂಗ್ > ಕಲಿಸುವೆ ಅಂತ ಮಾತು ಕೊಟ್ಟರು. ಟೇಸ್ಲಾ ಪವಾಡದಂತೆ ಗುಣವಾದ. ಆದರೆ ಕಾಲೇಜಿಲ್ಲಿ ಜೂಜಾಟ > ಕಲಿತು ಇಂಜಿನಿಯರಿಂಗ್ ಕೊನೆಯ ಪರೀಕ್ಷೆ ಯಲ್ಲಿ ಏನೂ ಓದದೇ ಹೋಗಿದ್ದ. > > ಸರಿ. ತಿಂಗಳು ಗಟ್ಟಲೇ ಕಷ್ಟ ಪಟ್ಟು ಎಸಿ ಮೋಟಾರ್ ಕಂಡುಹಿಡಿದ ಟೇಸ್ಲಾ ಗೆ, ಎಡಿಸನ್ - > ನಾನು ಜೋಕ್ ಮಾಡಿದ್ದೆ. ಹಣ ಗಿಣ ಏನೂ ಕೊಡಲು ಸಾಧ್ಯವಿಲ್ಲ. ಬೇಕಾದರೆ ವಾರಕ್ಕೆ ಹತ್ತು > ಡಾಲರ್ ಸಂಬಳ ಜಾಸ್ತಿ ಮಾಡುತ್ತೇನೆ ಅಂದ. ಟೇಸ್ಲಾ ರಾಜೀನಾಮೆ ಕೊಟ್ಟು ಹೊರ ನಡೆದ. > > ನಂತರ ನಡೆದದ್ದು ಟೇಸ್ಲಾ ಎಡಿಸನ್ ಯುದ್ಧ. ಇದು ಕರೆಂಟ್ ವಾರ್ ಅಂತ ಹೆಸರಾಯಿತು. ಡಿಸಿ > ಕರೆಂಟ್ ಚಿಕ್ಕ ಪ್ರದೇಶ ಗಳಿಗೆ ಮಾತ್ರ ಹೊಂದುತ್ತಿತ್ತು. ಟೇಸ್ಲಾ ಕರೆಂಟ್ ದೊಡ್ಡ ನಗರಗಳಿಗೆ > ಹೊಂದುತ್ತಿತ್ತು. ಮತ್ತು ಸಪೂರ ವಾಯರ್ ಸಾಕಿತ್ತು. ಎಡಿಸನ್ ಟೇಸ್ಲಾ ನನ್ನು ಸೋಲಿಸಲು > ಆನ್ಯಾಯದ ದಾರಿ ಹಿಡಿದ. ಮಕ್ಕಳಿಗೆ ದುಡ್ಡು ಕೊಟ್ಟು ಜನರ ನಾಯಿ ಬೆಕ್ಕು ಗಳನ್ನು ಕೊಂದು > ಹಾಕಿಸಿ ಇವು ಎಸಿ ಕರೆಂಟ್ ಕಾರಣ ಸತ್ತವು. ಅದು ಅಪಾಯಕಾರಿ ಅಂತ ಸುದ್ದಿ ಹಾಕಿದ. ಜನರ ಎದುರು > ಕೆಲ ನಾಯಿಗಳನ್ನು ಮತ್ತು ಒಂದು ಆನೆಯನ್ನು ಕರೆಂಟ್ ಕೊಟ್ಟು ಸಾಯಿಸಿದ. > > ಇದಕ್ಕೆ ಉತ್ತರ ವಾಗಿ ಟೇಸ್ಲಾ ಸಾವಿರಾರು ವೋಲ್ಟ್ ಕರೆಂಟ್ ತನ್ನ ಮೈಯಲ್ಲಿ ಹಾಯಿಸಿಕೊಂಡು > ತೋರಿಸಿದ. ಹೈ ಫ್ರೀಕ್ವೆನ್ಸಿ ಕರೆಂಟ್ ಹಾನಿ ಮಾಡುವುದಿಲ್ಲ. ಅತೀ ಹೆಚ್ಚು ತರಂಗದ ಧ್ವನಿ > ಮಾನವ ಕಿವಿಗಳಿಗೆ ಹೇಗೆ ಕೇಳುವುದಿಲ್ಲವೋ ಹಾಗೆ. 2000 ಸೈಕಲ್ ಗಿಂತ ಹೆಚ್ಚಿನ > ಫ್ರೀಕ್ವೆನ್ಸಿ ಕರೆಂಟ್ ನ್ನು ದೇಹ ಗುರುತಿಸುವುದಿಲ್ಲ. ಈಗ ಈ ತರ ಕರೆಂಟ್ ನ್ನು > ಇಲೆಕ್ಟ್ರಿಸಿಟಿ ಥೆರಪಿಯಲ್ಲಿ ಬಳಸುತ್ತಾರೆ. > ಎಡಿಸನ್ ಸೋತ. 1893 ವರ್ಲ್ಡ ಟ್ರೇಡ್ ಫೇರ್ ಗೆ ವಿದ್ಯುತ್ ಕೊಡುವ ಕಾಂಟ್ರಾಕ್ಟ ಟೇಸ್ಲಾ > ಗೆ ಸಿಕ್ಕಿತು. > ಟೇಸ್ಲಾ ಮಾಡಿದ ಸಂಶೋಧನೆ ಗಳು 700 ಕ್ಕೂ ಅಧಿಕ. ಆತನ ಹೆಸರಿನಲ್ಲಿ ಇದ್ದ ಪಾಟೆಂಟ್ 125 . > ಟೇಸ್ಲಾ ನ ಜತೆ ಸಂಪರ್ಕ ಕ್ಕೆ ಬಂದವರೆಲ್ಲ ಕೋಟ್ಯಾಧೀಶರಾದರು. > > 1899 . ಆತ ಮಾನವ ನಿರ್ಮಿತ ಮಿಂಚು ಕಂಡುಹಿಡಿದ. ಲಕ್ಷಾಂತರ ವೋಲ್ಟ್ ನ ಮಿಂಚನ್ನು > ತಯಾರಿಸಿದ ಮಾತ್ರವಲ್ಲ ಅದನ್ನು ತನ್ನ ದೇಹದಲ್ಲಿ ಹರಿಸಿದ. ಜಾದೂ ಮಾಡಿದಂತೆ ತನ್ನ > ಕೈಯ್ಯಿಂದ ಮಿಂಚನ್ನು ಎಸೆಯ ಬಲ್ಲವನಾಗಿದ್ದ. ಆತ ಈ ಪ್ರಯೋಗ ಮಾಡಿದಾಗ ಆಕಾಶ ದಿಂದ 135 ಅಡಿ > ಉದ್ದ ದ ಮಿಂಚಿನ ಪ್ರವಾಹವೇ ಆತನ ಪ್ರಯೋಗ ಶಾಲೆಯ ಮೇಲೆ ಎರಗಿತು. ಮೂವತ್ತು ಕಿಮೀ ಸುತ್ತಳತೆ > ಯಲ್ಲಿ ಜನರಿಗೆ ಗುಡುಗಿನ ಆರ್ಭಟ ಕೇಳಿತು. ಸುತ್ತ ನಡೆದಾಡುತ್ತಿದ್ದ ಜನರ ಪಾದಗಳ ಮಧ್ಯೆ > ಕಿಡಿಗಳು ಉಂಟಾದವು. ಏನು ಮುಟ್ಟಿದರೂ ಕಿಡಿಗಳು ಬಂದವು. ಬ್ಯಾಕ್ ಟು ದಿ ಫ್ಯೂಚರ್ ಸಿನಿಮಾ > ನೀವು ನೋಡಿದ್ದರೆ ಅದರಲ್ಲಿ ಬರುವ ವಿಜ್ಞಾನಿ ಟೇಸ್ಲಾ ನಿಂದ ಪ್ರೇರಿತ. > ಟೇಸ್ಲಾ ಹೇಳಿದ್ದು ಇಡೀ ಭೂಮಿಯಲ್ಲಿ ಕರೆಂಟ್ ಹರಿಯುತ್ತಿದೆ. ಅದಕ್ಕೆ ಒಂದು > ಫ್ರೀಕ್ವೆನ್ಸಿ ಇದೆ. ಆದೇ ಫ್ರೀಕ್ವೆನ್ಸಿ ಬಳಸಿದರೆ ಭೂಮಿಯ ಮೇಲೆ ಎಲ್ಲೇ ಒಂದು ಕೋಲು > ನೆಟ್ಟರೂ ಇಲೆಕ್ಟ್ರಿಸಿಟಿ ಸಿಗುತ್ತದೆ. ಅದೂ ಪುಕ್ಕಟೆ. > > ಟೇಸ್ಲಾ ಇಡೀ ಜಗತ್ತಿಗೆ ಪುಕ್ಕಟೆ ಇಲೆಕ್ಟ್ರಿಸಿಟಿ ಕೊಡಬೇಕು ಅಂತ ಯೋಜನೆ ಹಾಕಿದ್ದ . > ಮಾತ್ರವಲ್ಲ ಅದು ವೈರ್ ಲೆಸ್ ಇಲೆಕ್ಟ್ರಿಸಿಟಿ. ಈಗಿನ ಮೊಬೈಲ ಸಿಗ್ನಲ್ ತರ. ಅಲ್ಲಲ್ಲಿ > ಟವರ್ ಹಾಕಿ ಇಲೆಕ್ಟ್ರಿಸಿಟಿ ರಿಲೇ ಮಾಡುವುದು. ಇವನ್ನು ಕಾರು ಕ್ಯಾಚ್ ಮಾಡಿ ಬಳಸುವುದು. > ಪೆಟ್ರೋಲು ಬೇಡ ಡೀಸಲ್ ಬೇಡ. ಈ ಗಲ್ಫ್ ವಾರ್ ಇರುತ್ತಲೇ ಇರಲಿಲ್ಲ. ಭಯೋತ್ಪಾದನೆ ಕೂಡ. > ಅದೊಂದು ಪ್ರಾಜೆಕ್ಟ ಆಗಿದ್ದಿದ್ದರೆ ಇಡೀ ಜಗತ್ತೇ ಇಂದು ಬೇರಯೇ ಇರುತ್ತಿತ್ತು. > > 1900 ಇಸ್ವಿ . ಇಂತಹ ಒಂದು ಟವರ್ ನಿರ್ಮಾಣ ಮಾಡಲು ಜೆ ಪಿ ಮಾರ್ಗನ್ 1.5 ಲಕ್ಷ ಡಾಲರ್ > ಕೊಟ್ಟ. ( ಇಂದು ಮಾರ್ಗನ್ ಎಂಡ್ ಸ್ಟಾನ್ಲಿ ) ಈಗಿನ ಲೆಕ್ಕದಲ್ಲಿ 45 ಲಕ್ಷ $. ಟವರ್ > ಇನ್ನೇನು ಮುಗಿಯಬೇಕು ಅಂದಾಗ ಮಾರ್ಗನ್ ಉಳಿದ ಹಣ ಕೊಡಲು ಸಾಧ್ಯವಿಲ್ಲ ಅಂತ ಹೇಳಿದ. ಅಮೆರಿಕದ > ಸರಕಾರ ಈ ಟವರ್ ಬೀಳಿಸಿತು. ಯಾಕೆ ಅಂತ ಗೊತ್ತಿಲ್ಲ. ಫ್ರೀ ವಿದ್ಯುತ್ ಕೊಟ್ಟರೆ ಲಾಭ ಏನು > ಅಂತ ಬೀಳಿಸಿತು ಅಂತ ನಂತರ ಗೊತ್ತಾಯಿತು. > ಟೇಸ್ಲಾ ಏನೇ ಮಾಡಿದರೂ ಸರಕಾರ ತೊಂದರೆ ಕೊಡುತ್ತಿತ್ತು. > > ಟೇಸ್ಲಾ ಸತ್ತ ನಂತರ ಆತನ ಎಲ್ಲ ನೋಟ್ಸ್ ಗಳನ್ನು ಅಮೆರಿಕ ತೆಗೆದುಕೊಂಡು ಹೋಗಿ ಕ್ಲಾಸಿಫೈ > ಮಾಡಿ ಇಟ್ಟಿದೆ.ಯಾಕೆ ಗೊತ್ತಾ? ಟೇಸ್ಲಾ ಡೆತ್ ರೇಸ್ ಕಂಡುಹಿಡಿದಿದ್ದ. ಈ ಲೇಸರ್ ಮೂಲಕ > ಆಕಾಶದಲ್ಲಿ ಹಾರುವ ವಿಮಾನ ವನ್ನು ಹೊಡೆದುರುಳಿಸಲು ಏನೂ ಖರ್ಚು ಬರುತ್ತಿರಲಿಲ್ಲ. ಟೇಸ್ಲಾ > ನ ಈ ನೋಟ್ಸ್ ನಿಗೂಢ ವಾಗಿ ಮಾಯವಾದವು. ಈಗ ಮೂರು ವರ್ಷಗಳ ಹಿಂದೆ ಟೇಸ್ಲಾ ನ ಡೆತ್ ರೇ ನಾವು > ಡೆವಲಪ್ ಮಾಡಿದ್ದೇವೆ ಅಂತ ಅಮೇರಿಕಾದ ಟೀವಿ ವರದಿ ಮಾಡಿದೆ. > > 1893 .ಮಾರ್ಕೋನಿ ರೇಡಿಯೋ ಕಂಡು ಹಿಡಿಯುವ ಮೊದಲೇ ಟೇಸ್ಲಾ ಕಂಡುಹಿಡಿದಿದ್ದ. ಆದರೆ ಕೋರ್ಟ್ > ಹಕ್ಕನ್ನು ಮಾರ್ಕೋನಿಗೆ ನೀಡಿತು. ಆಗ ಟೇಸ್ಲಾ ಹೇಳಿದ - ಮಾರ್ಕೋನಿ ಒಬ್ಬ ಒಳ್ಳೆಯ ವ್ಯಕ್ತಿ > . ಆತ ನನ್ನ 17 ಪಾಟೆಂಟ್ ಗಳನ್ನು ಬಳಸುತ್ತಿದ್ದಾನೆ. ಒಳ್ಳೆಯದಾಗಲಿ. > > ಒಮ್ಮೆ ಟೇಸ್ಲಾ ತನ್ನ ಒಸ್ಸಿಲೇಟರ್ ಯಂತ್ರ ಚಾಲೂ ಮಾಡಿದಾಗ ಸುತ್ತ ಭೂಕಂಪ ಆಯಿತು. ಅದನ್ನು > ನಿಲ್ಲಿಸಲು ಸಾಧ್ಯವಾಗದೇ ಟೇಸ್ಲಾ ಸುತ್ತಿಗೆಯಿಂದ ಅದನ್ನು ಮುರಿಯುವದಕ್ಕೂ ಪೊಲೀಸರು > ಬರುವದಕ್ಕೂ ಸರಿ ಆಯಿತಂತೆ. ಭೂಮಿಯ ಫ್ರೀಕ್ವೆನ್ಸಿ ಯನ್ನು ಉಪಯೋಗಿಸಿ ಈ ಯಂತ್ರ ಕೆಲಸ > ಮಾಡುತ್ತದೆ. ಇದನ್ನು ಉಪಯೋಗಿಸಿ ಯಾವುದೇ ಬಿಲ್ಡಿಂಗ ಬೀಳಿಸಬಹುದು. ಬೇಕಾದರೆ ಇಡೀ > ಭೂಮಿಯನ್ನು ಎರಡು ತುಂಡು ಮಾಡಬಹುದು ಅಂತ ಟೇಸ್ಲಾ ಹೇಳಿದ. ಈ ಭೂಕಂಪನದ ಯಂತ್ರ ದ ಬಗ್ಗೆ > ನಂತರ ಸುಳಿವು ಸಿಕ್ಕಿಲ್ಲ. > > ಟೇಸ್ಲಾ 6.2 " hight . 64 ಕೆಜಿ. ಸ್ಪುರದ್ರೂಪಿ. ಆತನಿಗೆ ದಪ್ಪ ಇದ್ದವರನ್ನು ಕಂಡರೆ > ಆಗುತ್ತಿರಲಿಲ್ಲ. > ಟೇಸ್ಲಾ ತನ್ನ ಜೀವನದಲ್ಲಿ ಬ್ರಹ್ಮಚರ್ಯ ಮಾಡಿದ್ದರಿಂದ ತನಗೆ ಈ ತರ ಪವರ್ ಬಂದಿದೆ ಅಂತ > ಹೇಳಿದ್ದ. ಪ್ರತೀ ರಾತ್ರಿ ಕಾಲಿನ ಹೆಬ್ಬೆರಳು ಗಳನ್ನು ನೂರು ಬಾರಿ ಉಜ್ಜಿದರೆ ಮೆದುಳು > ಚುರುಕಾಗುತ್ತದೆ ಅಂತ ನಂಬಿದ್ದ. ಸ್ವಾಮಿ ವಿವೇಕಾನಂದರ ನ್ನು ಭೇಟಿಯಾಗಿದ್ದ . ಈತನ ಪ್ರಯೋಗ > ಶಾಲೆಗೆ ಯಾವುದೋ ರೇಡಿಯೋ ಸಂದೇಶಗಳು ಬಂದು ಅವು ಅನ್ಯ ಗ್ರಹ ಜೀವಿಯವು ಅಂತ > ಸುದ್ದಿಯಾಗಿತ್ತು. ಟೇಸ್ಲಾ ತಾನು ಟೈಮ್ ಮಷೀನ ಕಂಡು ಹಿಡಿಯುತ್ತೇನೆ ಅಂತ ಕೂಡ ಹೇಳಿದ್ದ. > > 1897 ರಲ್ಲಿ ಒಂದು ವೈರ್ ಲೆಸ್ ಇಲೆಕ್ಟ್ರಿಸಿಟಿ ಪ್ರಯೋಗ ದಲ್ಲಿ ಆರು ಮೈಲಿ ದೂರದ ಪವರ್ > ಹೌಸ್ನ ಡೈನಮೋ ಹೆಚ್ಚಿನ ಕರೆಂಟ್ ಬಂದು ಸುಟ್ಟು ಹೋಯಿತು. ಅಲ್ಲಿನ ಕಿಟಕಿಗಳೆಲ್ಲ > ಸ್ಪಾರ್ಕ್. ಸ್ವಿಚ್ ಆಫ್ ಇದ್ದರೂ ಬಲ್ಬ್ ಗಳೆಲ್ಲ ಹೊತ್ತಿ ಉರಿದವು. > ಇಂದಿನ ಸ್ಪಾರ್ಕ್ ಪ್ಲಗ್ ಕಂಡುಹಿಡಿದಿದ್ದು ಟೇಸ್ಲಾ. ರಿಮೋಟ್ ಕಂಟ್ರೋಲ್, ಹೈಡ್ರೋ > ಇಲೆಕ್ಟ್ರಿಸಿಟಿ, ಟೇಸ್ಲಾ ಕಾಯ್ಲ್. ಇಂಡಕ್ಷನ್ ಮೋಟಾರ್ ಇತ್ಯಾದಿ ನೂರಾರು ಕೂಡ. ಅಮೆರಿಕದ > ನೈಗರಾ ವಿದ್ಯುತ್ ಸ್ಥಾವರ ದಲ್ಲಿ ಅಂದಿನಿಂದ ಇಂದಿನವರೆಗೆ ವಿದ್ಯುತ್ ಉತ್ಪಾದನೆ ಟೇಸ್ಲಾ > ತಯಾರಿಸಿದ ಮೋಟಾರ್ ನಿಂದ. > > ಎಡಿಸನ್ ಗೂ ಮೊದಲು ಟೇಸ್ಲಾ ಎಕ್ಸ್ ರೇ ಕಂಡುಹಿಡಿದಿದ್ದ. ಎಡಿಸನ್ ಎಕ್ಸ್ ರೇ ತುಂಬಾ > ರೇಡಿಯೇಶನ್ ನಿಂದ ಕೂಡಿತ್ತು. ಟೇಸ್ಲಾ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಎಡಿಸನ್ ತನ್ನ > ಅಸಿಸ್ಟೆಂಟ್ ಸ್ಟಾನ್ಲಿ ಎಂಬಾತನ ಕೈಯಿನ ನೂರಾರು ಎಕ್ಸ್ ರೇ ತೆಗೆದು ನಂತರ ಆತನ ಕೈಯನ್ನೇ > ಕತ್ತರಿಸಬೇಕಾಗಿ ಬಂತು. ಇದಲ್ಲದೆ ಎಡಿಸನ್ ತನ್ನ ಕಣ್ಣಿಗೂ ಎಕ್ಸ್ ರೇ ಬಿಟ್ಟುಕೊಂಡಿದ್ದ. > > ಆದರೆ ದುಡ್ಡಿಗೆ ಆತ ಆಸೆ ಪಟ್ಟಿರಲೇ ಇಲ್ಲ. ಜಾರ್ಜ್ ವೆಲ್ಲಿಂಗಟನ್ ಟೇಸ್ಲಾ ನ ಜತೆ ಒಪ್ಪಂದ > ಮಾಡಿಕೊಂಡು ಎಸಿ ಮೋಟಾರ್ ತಯಾರಿಕೆ ಆರಂಭಿಸಿತು. ಅವರು ಟೇಸ್ಲಾ ಗೆ ಹತ್ತು ಲಕ್ಷ $ > ಕೊಡಬೇಕಾಗಿತ್ತು. ಆದರೆ ನಮಗೆ ತೊಂದರೆ ಆಗಿದೆ ದಯವಿಟ್ಟು ಕೆಲವು ದಿನ ಹಣ ತೆಗೆದು > ಕೂಳ್ಳಬೇಡಿ ಅಂತ ಅವರು ಟೇಸ್ಲಾ ಹತ್ತಿರ ವಿನಂತಿ ಮಾಡಿದರು. ಟೇಸ್ಲಾ ಹಣ ಬೇಡ ಅಂತ > ಕಾಂಟ್ರಾಕ್ಟ ಹರಿದು ರೈಟ್ಸ್ ಪುಕ್ಕಟೆ ಕೊಟ್ಟ. ಆ ಕಾಂಟ್ರಾಕ್ಟ ನ ಇಂದಿನ ಬೆಲೆ 300 ಕೋಟಿ > ರೂಪಾಯಿ ಗೂ ಹೆಚ್ಚು. ವೆಲ್ಲಿಂಗಟನ್ ಸಾವಿರಾರು ಕೋಟಿ ಡಾಲರ್ ದುಡಿಯಿತು. ಟೇಸ್ಲಾನ ಪ್ರಯೋಗ > ಶಾಲೆ ನಿಗೂಢವಾಗಿ ಸುಟ್ಟು ಹೋಯಿತು. ಆತ ಮತ್ತೆ ಮೊದಲಿನಿಂದ ಶುರು ಮಾಡಿದ . > > ಟೇಸ್ಲಾ ತನ್ನ ಪಾಟೆಂಟ್ ಗಳನ್ನು ಬ್ಯಾಂಕ ನಲ್ಲಿ ಅಡವಿಟ್ಟು ಸಾಲ ಪಡೆದಿದ್ದ. ಬ್ಯಾಂಕ > ಅವನ್ನು ಮುಟ್ಟುಗೋಲು ಹಾಕಿತು. ಟೇಸ್ಲಾ ರಸ್ತೆಯ ಬದಿ ಹೊಂಡ ತೋಡುವುದು , ಮೋಟಾರ್ ರಿಪೇರಿ > ಮಾಡುತ್ತಿದ್ದ. > > 1943 . ಟೇಸ್ಲಾ ಸಾಯುವಾಗ ಕೈಯಲ್ಲಿ ಕಾಸಿಲ್ಲದೇ ಬಿಸ್ಕಿಟ್ ತಿಂದು ಯಾವುದೋ ಹೋಟೆಲ್ ನಲ್ಲಿ > ಇದ್ದ. ಅರೆ ಹುಚ್ಚನಂತೆ ಪಾರಿವಾಳ ಗಳ ಜೊತೆ ಮಾತನಾಡುತ್ತಿದ್ದ. ಸಾವಿರಾರು ಪಾರಿವಾಳ ಗಳಿಗೆ > ಕಾಳು ನೀಡುತ್ತಿದ್ದ. ಅದರಲ್ಲಿ ಒಂದು ಬಿಳಿ ಪಾರಿವಾಳ ಈತ ಎಲ್ಲೇ ಇದ್ದರೂ ಬರುತ್ತಿತ್ತು. > > ಇಂದು ಟೇಸ್ಲಾ ಗಿಗಾಫ್ಯಾಕ್ಟರಿ ಸ್ಥಾಪಿಸಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಲಿಥಿಯಮ್ ಆಯಾನ್ > ಬ್ಯಾಟರಿ ಗಳನ್ನು ತಯಾರಿಸಲಾಗುತ್ತಿದೆ. ಟೇಸ್ಲಾ ಇಲೆಕ್ಟ್ರಿಕ್ ಕಾರ್ ತಯಾರಿಸುವ ಟೇಸ್ಲಾ > ಮೋಟಾರ್ಸ ಇದೆ. > " Present is their's. The future for which I have really worked is mine " > - Nikola Tesla > ಒಂದು ದಿನ ಕೈಯಲ್ಲಿ ಚಿಕ್ಕ ಯಂತ್ರ ಹಿಡಿದು ಇಡೀ ಜಗತ್ತಿನ ಮಾಹಿತಿ ನೋಡುವಂತಾಗುತ್ತದೆ ಅಂತ > ಇಂಟರ್ನೆಟ್ ಬಗ್ಗೆ ಟೇಸ್ಲಾ ಆಗ ಹೇಳಿದ್ದ. > > ಇಂಟರ್ನೆಟ್ ನಲ್ಲಿ ಟೇಸ್ಲಾ ಅಭಿಮಾನಿ ನಂಘಗಳಿವೆ. ನೀವು ಜಗತ್ತಿನಲ್ಲಿ ಯಾವುದೇ > ವಿಜ್ಞಾನಿ ಯನ್ನು ಜೀವನ ದಲ್ಲಿ ಒಮ್ಮೆ ಭೇಟಿಯಾಗಲು ಬಯಸಿದರೆ ಯಾರನ್ನು? ಅಂತ ಕಳೆದ ವರ್ಷ > ಆನ್ ಲೈನ್ ಪೋಲ್ ಮಾಡಿದ್ದರು. ಯಾರನ್ನು ಜನ ಆಯ್ಕೆ ಮಾಡಿದರು ಅಂತ ಬಾಯಿ ಬಿಟ್ಟು > ಹೇಳಬೇಕಿಲ್ಲ ತಾನೇ? > > Source..sreedhar mayya > ...science hike 1gp > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.