We have to share such inspirational stories more and more
On Mar 23, 2016 11:18 AM, "Mahesh Udupa" <maheshudupa...@gmail.com> wrote:

> Good
> On 21-Mar-2016 8:43 pm, "Bhim Beeragoudra" <beeragoudrapb...@gmail.com>
> wrote:
>
>> Nice  sir
>> On 21 Mar 2016 20:36, "vijay prasad" <gejj...@gmail.com> wrote:
>>
>>> ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್  ಕಂಡುಹಿಡಿದನು ಅಂತ ಶಾಲೆಯಲ್ಲಿ ಉರು
>>> ಹೊಡೆದದ್ದು ನೆನಪಿದೆಯೇ?  ಮತ್ತೆ ನಿಕೋಲಾ ಟೇಸ್ಲಾ ಏನನ್ನು ಕಂಡುಹಿಡಿದ ? ಹೆಚ್ಚಿನ ಜನ ಈ
>>> ಹೆಸರೇ ಕೇಳಿಲ್ಲ. ಯಾಕೆ ಗೊತ್ತಾ? ಅವನ ಹೆಸರನ್ನೇ ಅಳಿಸಲು ಪ್ರಯತ್ನ ನಡೆದಿತ್ತು.  ಈತ
>>> ಎಷ್ಟರ ಮಟ್ಟಿಗೆ ವಿಕ್ಷಿಪ್ತ ಅಂದರೆ ಆತ ಹುಚ್ಚು ವಿಜ್ಞಾನಿ ಅಂತ ಆಡಿಕೊಳ್ಳುವ ಮಟ್ಟಿಗೆ.
>>>
>>> ಥಾಮಸ್ ಆಲ್ವಾ ಎಡಿಸನ್ ಈತನಿಗೆ ಘೋರ ಮೋಸ ಮಾಡಿದ್ದ.  ಕೈಯಲ್ಲಿ   4 ಸೆಂಟ್ಸ್
>>> ಹಿಡಿದುಕೊಂಡು 1884 ರಲ್ಲಿ ಇಂಜಿನಿಯರಿಂಗ್ ಪಾಸಾಗದ ಟೇಸ್ಲಾ ಅಮೇರಿಕಾಗೆ ಬಂದ.  ಕೆಲಸಕ್ಕೆ
>>> ಸೇರಿದ್ದು ಎಡಿಸನ್ ಬಳಿ.  ಸಂಬಳ ಅತೀ ಕಡಿಮೆ.
>>> ಎಡಿಸನ್ ಕಂಡುಹಿಡಿದಿದ್ದು ಡೈರೆಕ್ಟ ಕರೆಂಟ್ ( ಡಿಸಿ ) ಮೋಟರ್.  ಅದರಲ್ಲಿ ಅನೇಕ
>>> ನ್ಯೂನತೆ ಗಳಿದ್ದವು. ತಾನು ಆಲ್ಟರನೇಟಿವ ಕರೆಂಟ್ ( ಎಸಿ ) ಮೋಟಾರ್ ಕಂಡುಹಿಡಿಯುವುದಾಗಿ
>>> ಟೇಸ್ಲಾ ಹೇಳಿದ.  ಹಾಗೇನಾದರೂ ಮಾಡಿದಲ್ಲಿ 50 ಸಾವಿರ $ ಕೊಡುವುದಾಗಿ ಎಡಿಸನ್ ಹೇಳಿದ.
>>> ಇಂದಿನ ಲೆಕ್ಕ ದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಇರಬಹುದು.
>>>
>>> ಟೇಸ್ಲಾ ಹುಟ್ಟಿದ್ದು  1856 ಆಸ್ಟ್ರಿಯಾ ದಲ್ಲಿ. ( Arnold Schwarzenegger was
>>> born here too ) ಚಿಕ್ಕವನಿರಬೇಕಾದರೆ ಇಡೀ ಪುಸ್ತಕ ವನ್ನೇ ನೆನಪಿಟ್ಟುಕ್ಕೊಳ್ಳುವಷ್ಟು
>>> ಜ್ಞಾಪಕ ಶಕ್ತಿ . ಅಸಾಮಾನ್ಯ ಮೇಧಾವಿ. 17 ವರ್ಷದ ಟೇಸ್ಲಾ ಕಾಲರಾ ಆಗಿ ಒಂಬತ್ತು ತಿಂಗಳು
>>> ಹಾಸಿಗೆ ಹಿಡಿದ. ಬದುಕುವ ಚಾನ್ಸ್ ಇರಲಿಲ್ಲ. ಆಗ ಟೇಸ್ಲಾ ನ ತಂದೆ - ನೀನು ಬದುಕಿದರೆ
>>> ಇಂಜಿನಿಯರಿಂಗ್ ಕಲಿಸುವೆ ಅಂತ ಮಾತು ಕೊಟ್ಟರು. ಟೇಸ್ಲಾ ಪವಾಡದಂತೆ ಗುಣವಾದ. ಆದರೆ
>>> ಕಾಲೇಜಿಲ್ಲಿ ಜೂಜಾಟ ಕಲಿತು ಇಂಜಿನಿಯರಿಂಗ್ ಕೊನೆಯ ಪರೀಕ್ಷೆ ಯಲ್ಲಿ ಏನೂ ಓದದೇ ಹೋಗಿದ್ದ.
>>>
>>> ಸರಿ.  ತಿಂಗಳು ಗಟ್ಟಲೇ ಕಷ್ಟ ಪಟ್ಟು ಎಸಿ ಮೋಟಾರ್ ಕಂಡುಹಿಡಿದ ಟೇಸ್ಲಾ ಗೆ,  ಎಡಿಸನ್ -
>>> ನಾನು ಜೋಕ್ ಮಾಡಿದ್ದೆ. ಹಣ ಗಿಣ ಏನೂ ಕೊಡಲು ಸಾಧ್ಯವಿಲ್ಲ.  ಬೇಕಾದರೆ ವಾರಕ್ಕೆ ಹತ್ತು
>>> ಡಾಲರ್ ಸಂಬಳ ಜಾಸ್ತಿ ಮಾಡುತ್ತೇನೆ ಅಂದ.  ಟೇಸ್ಲಾ ರಾಜೀನಾಮೆ ಕೊಟ್ಟು ಹೊರ ನಡೆದ.
>>>
>>> ನಂತರ ನಡೆದದ್ದು ಟೇಸ್ಲಾ ಎಡಿಸನ್ ಯುದ್ಧ. ಇದು ಕರೆಂಟ್ ವಾರ್ ಅಂತ ಹೆಸರಾಯಿತು. ಡಿಸಿ
>>> ಕರೆಂಟ್ ಚಿಕ್ಕ ಪ್ರದೇಶ ಗಳಿಗೆ ಮಾತ್ರ ಹೊಂದುತ್ತಿತ್ತು. ಟೇಸ್ಲಾ ಕರೆಂಟ್ ದೊಡ್ಡ ನಗರಗಳಿಗೆ
>>> ಹೊಂದುತ್ತಿತ್ತು. ಮತ್ತು ಸಪೂರ ವಾಯರ್ ಸಾಕಿತ್ತು. ಎಡಿಸನ್ ಟೇಸ್ಲಾ ನನ್ನು ಸೋಲಿಸಲು
>>> ಆನ್ಯಾಯದ ದಾರಿ ಹಿಡಿದ.  ಮಕ್ಕಳಿಗೆ ದುಡ್ಡು ಕೊಟ್ಟು ಜನರ ನಾಯಿ ಬೆಕ್ಕು ಗಳನ್ನು ಕೊಂದು
>>> ಹಾಕಿಸಿ ಇವು ಎಸಿ ಕರೆಂಟ್ ಕಾರಣ ಸತ್ತವು. ಅದು ಅಪಾಯಕಾರಿ ಅಂತ ಸುದ್ದಿ ಹಾಕಿದ. ಜನರ ಎದುರು
>>> ಕೆಲ ನಾಯಿಗಳನ್ನು ಮತ್ತು ಒಂದು ಆನೆಯನ್ನು ಕರೆಂಟ್ ಕೊಟ್ಟು ಸಾಯಿಸಿದ.
>>>
>>> ಇದಕ್ಕೆ ಉತ್ತರ ವಾಗಿ ಟೇಸ್ಲಾ ಸಾವಿರಾರು ವೋಲ್ಟ್ ಕರೆಂಟ್ ತನ್ನ ಮೈಯಲ್ಲಿ ಹಾಯಿಸಿಕೊಂಡು
>>> ತೋರಿಸಿದ.  ಹೈ ಫ್ರೀಕ್ವೆನ್ಸಿ ಕರೆಂಟ್ ಹಾನಿ ಮಾಡುವುದಿಲ್ಲ.  ಅತೀ ಹೆಚ್ಚು ತರಂಗದ ಧ್ವನಿ
>>> ಮಾನವ ಕಿವಿಗಳಿಗೆ ಹೇಗೆ ಕೇಳುವುದಿಲ್ಲವೋ ಹಾಗೆ. 2000 ಸೈಕಲ್ ಗಿಂತ ಹೆಚ್ಚಿನ
>>> ಫ್ರೀಕ್ವೆನ್ಸಿ ಕರೆಂಟ್ ನ್ನು ದೇಹ ಗುರುತಿಸುವುದಿಲ್ಲ.  ಈಗ ಈ ತರ ಕರೆಂಟ್ ನ್ನು
>>> ಇಲೆಕ್ಟ್ರಿಸಿಟಿ ಥೆರಪಿಯಲ್ಲಿ ಬಳಸುತ್ತಾರೆ.
>>> ಎಡಿಸನ್ ಸೋತ.  1893 ವರ್ಲ್ಡ ಟ್ರೇಡ್ ಫೇರ್ ಗೆ ವಿದ್ಯುತ್ ಕೊಡುವ ಕಾಂಟ್ರಾಕ್ಟ ಟೇಸ್ಲಾ
>>> ಗೆ ಸಿಕ್ಕಿತು.
>>> ಟೇಸ್ಲಾ ಮಾಡಿದ ಸಂಶೋಧನೆ ಗಳು 700 ಕ್ಕೂ ಅಧಿಕ. ಆತನ ಹೆಸರಿನಲ್ಲಿ ಇದ್ದ ಪಾಟೆಂಟ್ 125
>>> . ಟೇಸ್ಲಾ ನ ಜತೆ ಸಂಪರ್ಕ ಕ್ಕೆ ಬಂದವರೆಲ್ಲ ಕೋಟ್ಯಾಧೀಶರಾದರು.
>>>
>>> 1899 . ಆತ ಮಾನವ ನಿರ್ಮಿತ ಮಿಂಚು ಕಂಡುಹಿಡಿದ.  ಲಕ್ಷಾಂತರ ವೋಲ್ಟ್ ನ ಮಿಂಚನ್ನು
>>> ತಯಾರಿಸಿದ ಮಾತ್ರವಲ್ಲ ಅದನ್ನು ತನ್ನ ದೇಹದಲ್ಲಿ ಹರಿಸಿದ.  ಜಾದೂ ಮಾಡಿದಂತೆ ತನ್ನ
>>> ಕೈಯ್ಯಿಂದ ಮಿಂಚನ್ನು ಎಸೆಯ ಬಲ್ಲವನಾಗಿದ್ದ.  ಆತ ಈ ಪ್ರಯೋಗ ಮಾಡಿದಾಗ ಆಕಾಶ ದಿಂದ 135 ಅಡಿ
>>> ಉದ್ದ ದ ಮಿಂಚಿನ ಪ್ರವಾಹವೇ ಆತನ ಪ್ರಯೋಗ ಶಾಲೆಯ ಮೇಲೆ ಎರಗಿತು. ಮೂವತ್ತು ಕಿಮೀ ಸುತ್ತಳತೆ
>>> ಯಲ್ಲಿ ಜನರಿಗೆ ಗುಡುಗಿನ ಆರ್ಭಟ ಕೇಳಿತು.  ಸುತ್ತ ನಡೆದಾಡುತ್ತಿದ್ದ ಜನರ ಪಾದಗಳ ಮಧ್ಯೆ
>>> ಕಿಡಿಗಳು ಉಂಟಾದವು. ಏನು ಮುಟ್ಟಿದರೂ ಕಿಡಿಗಳು ಬಂದವು. ಬ್ಯಾಕ್ ಟು ದಿ ಫ್ಯೂಚರ್ ಸಿನಿಮಾ
>>> ನೀವು ನೋಡಿದ್ದರೆ ಅದರಲ್ಲಿ ಬರುವ ವಿಜ್ಞಾನಿ ಟೇಸ್ಲಾ ನಿಂದ ಪ್ರೇರಿತ.
>>> ಟೇಸ್ಲಾ ಹೇಳಿದ್ದು ಇಡೀ ಭೂಮಿಯಲ್ಲಿ ಕರೆಂಟ್ ಹರಿಯುತ್ತಿದೆ.  ಅದಕ್ಕೆ ಒಂದು
>>> ಫ್ರೀಕ್ವೆನ್ಸಿ ಇದೆ.  ಆದೇ ಫ್ರೀಕ್ವೆನ್ಸಿ ಬಳಸಿದರೆ ಭೂಮಿಯ ಮೇಲೆ ಎಲ್ಲೇ ಒಂದು ಕೋಲು
>>> ನೆಟ್ಟರೂ ಇಲೆಕ್ಟ್ರಿಸಿಟಿ ಸಿಗುತ್ತದೆ.  ಅದೂ ಪುಕ್ಕಟೆ.
>>>
>>> ಟೇಸ್ಲಾ ಇಡೀ ಜಗತ್ತಿಗೆ ಪುಕ್ಕಟೆ ಇಲೆಕ್ಟ್ರಿಸಿಟಿ ಕೊಡಬೇಕು ಅಂತ ಯೋಜನೆ ಹಾಕಿದ್ದ .
>>> ಮಾತ್ರವಲ್ಲ ಅದು ವೈರ್ ಲೆಸ್ ಇಲೆಕ್ಟ್ರಿಸಿಟಿ.  ಈಗಿನ ಮೊಬೈಲ ಸಿಗ್ನಲ್ ತರ. ಅಲ್ಲಲ್ಲಿ
>>> ಟವರ್ ಹಾಕಿ ಇಲೆಕ್ಟ್ರಿಸಿಟಿ ರಿಲೇ ಮಾಡುವುದು.  ಇವನ್ನು ಕಾರು ಕ್ಯಾಚ್ ಮಾಡಿ ಬಳಸುವುದು.
>>> ಪೆಟ್ರೋಲು ಬೇಡ ಡೀಸಲ್ ಬೇಡ.  ಈ ಗಲ್ಫ್ ವಾರ್ ಇರುತ್ತಲೇ ಇರಲಿಲ್ಲ. ಭಯೋತ್ಪಾದನೆ ಕೂಡ.
>>> ಅದೊಂದು  ಪ್ರಾಜೆಕ್ಟ ಆಗಿದ್ದಿದ್ದರೆ ಇಡೀ ಜಗತ್ತೇ ಇಂದು ಬೇರಯೇ ಇರುತ್ತಿತ್ತು.
>>>
>>> 1900 ಇಸ್ವಿ . ಇಂತಹ ಒಂದು ಟವರ್ ನಿರ್ಮಾಣ ಮಾಡಲು ಜೆ ಪಿ ಮಾರ್ಗನ್ 1.5 ಲಕ್ಷ ಡಾಲರ್
>>> ಕೊಟ್ಟ. ( ಇಂದು ಮಾರ್ಗನ್ ಎಂಡ್ ಸ್ಟಾನ್ಲಿ ) ಈಗಿನ ಲೆಕ್ಕದಲ್ಲಿ 45 ಲಕ್ಷ  $.  ಟವರ್
>>> ಇನ್ನೇನು ಮುಗಿಯಬೇಕು ಅಂದಾಗ ಮಾರ್ಗನ್ ಉಳಿದ ಹಣ ಕೊಡಲು ಸಾಧ್ಯವಿಲ್ಲ ಅಂತ ಹೇಳಿದ. ಅಮೆರಿಕದ
>>> ಸರಕಾರ ಈ ಟವರ್ ಬೀಳಿಸಿತು.  ಯಾಕೆ ಅಂತ ಗೊತ್ತಿಲ್ಲ.  ಫ್ರೀ ವಿದ್ಯುತ್ ಕೊಟ್ಟರೆ ಲಾಭ ಏನು
>>> ಅಂತ ಬೀಳಿಸಿತು ಅಂತ ನಂತರ ಗೊತ್ತಾಯಿತು.
>>> ಟೇಸ್ಲಾ ಏನೇ ಮಾಡಿದರೂ ಸರಕಾರ ತೊಂದರೆ ಕೊಡುತ್ತಿತ್ತು.
>>>
>>> ಟೇಸ್ಲಾ ಸತ್ತ ನಂತರ ಆತನ ಎಲ್ಲ ನೋಟ್ಸ್ ಗಳನ್ನು ಅಮೆರಿಕ ತೆಗೆದುಕೊಂಡು ಹೋಗಿ ಕ್ಲಾಸಿಫೈ
>>> ಮಾಡಿ ಇಟ್ಟಿದೆ.ಯಾಕೆ ಗೊತ್ತಾ?  ಟೇಸ್ಲಾ ಡೆತ್ ರೇಸ್ ಕಂಡುಹಿಡಿದಿದ್ದ. ಈ ಲೇಸರ್ ಮೂಲಕ
>>> ಆಕಾಶದಲ್ಲಿ ಹಾರುವ ವಿಮಾನ ವನ್ನು  ಹೊಡೆದುರುಳಿಸಲು ಏನೂ ಖರ್ಚು ಬರುತ್ತಿರಲಿಲ್ಲ.  ಟೇಸ್ಲಾ
>>> ನ ಈ ನೋಟ್ಸ್ ನಿಗೂಢ ವಾಗಿ ಮಾಯವಾದವು. ಈಗ  ಮೂರು ವರ್ಷಗಳ ಹಿಂದೆ ಟೇಸ್ಲಾ ನ ಡೆತ್ ರೇ ನಾವು
>>> ಡೆವಲಪ್ ಮಾಡಿದ್ದೇವೆ ಅಂತ ಅಮೇರಿಕಾದ ಟೀವಿ ವರದಿ ಮಾಡಿದೆ.
>>>
>>> 1893 .ಮಾರ್ಕೋನಿ ರೇಡಿಯೋ ಕಂಡು ಹಿಡಿಯುವ ಮೊದಲೇ ಟೇಸ್ಲಾ ಕಂಡುಹಿಡಿದಿದ್ದ. ಆದರೆ
>>> ಕೋರ್ಟ್ ಹಕ್ಕನ್ನು  ಮಾರ್ಕೋನಿಗೆ ನೀಡಿತು. ಆಗ ಟೇಸ್ಲಾ ಹೇಳಿದ - ಮಾರ್ಕೋನಿ ಒಬ್ಬ ಒಳ್ಳೆಯ
>>> ವ್ಯಕ್ತಿ . ಆತ ನನ್ನ 17 ಪಾಟೆಂಟ್ ಗಳನ್ನು ಬಳಸುತ್ತಿದ್ದಾನೆ. ಒಳ್ಳೆಯದಾಗಲಿ.
>>>
>>> ಒಮ್ಮೆ ಟೇಸ್ಲಾ ತನ್ನ ಒಸ್ಸಿಲೇಟರ್ ಯಂತ್ರ ಚಾಲೂ ಮಾಡಿದಾಗ ಸುತ್ತ ಭೂಕಂಪ ಆಯಿತು.
>>> ಅದನ್ನು ನಿಲ್ಲಿಸಲು ಸಾಧ್ಯವಾಗದೇ ಟೇಸ್ಲಾ ಸುತ್ತಿಗೆಯಿಂದ ಅದನ್ನು ಮುರಿಯುವದಕ್ಕೂ ಪೊಲೀಸರು
>>> ಬರುವದಕ್ಕೂ ಸರಿ ಆಯಿತಂತೆ.  ಭೂಮಿಯ ಫ್ರೀಕ್ವೆನ್ಸಿ ಯನ್ನು ಉಪಯೋಗಿಸಿ ಈ ಯಂತ್ರ ಕೆಲಸ
>>> ಮಾಡುತ್ತದೆ. ಇದನ್ನು ಉಪಯೋಗಿಸಿ ಯಾವುದೇ ಬಿಲ್ಡಿಂಗ ಬೀಳಿಸಬಹುದು.  ಬೇಕಾದರೆ ಇಡೀ
>>> ಭೂಮಿಯನ್ನು ಎರಡು ತುಂಡು ಮಾಡಬಹುದು ಅಂತ ಟೇಸ್ಲಾ ಹೇಳಿದ. ಈ ಭೂಕಂಪನದ ಯಂತ್ರ ದ ಬಗ್ಗೆ
>>> ನಂತರ ಸುಳಿವು ಸಿಕ್ಕಿಲ್ಲ.
>>>
>>> ಟೇಸ್ಲಾ 6.2 " hight . 64 ಕೆಜಿ.  ಸ್ಪುರದ್ರೂಪಿ.  ಆತನಿಗೆ ದಪ್ಪ ಇದ್ದವರನ್ನು
>>> ಕಂಡರೆ ಆಗುತ್ತಿರಲಿಲ್ಲ.
>>> ಟೇಸ್ಲಾ ತನ್ನ ಜೀವನದಲ್ಲಿ ಬ್ರಹ್ಮಚರ್ಯ ಮಾಡಿದ್ದರಿಂದ ತನಗೆ ಈ ತರ ಪವರ್ ಬಂದಿದೆ ಅಂತ
>>> ಹೇಳಿದ್ದ.  ಪ್ರತೀ ರಾತ್ರಿ ಕಾಲಿನ ಹೆಬ್ಬೆರಳು ಗಳನ್ನು ನೂರು ಬಾರಿ ಉಜ್ಜಿದರೆ ಮೆದುಳು
>>> ಚುರುಕಾಗುತ್ತದೆ ಅಂತ ನಂಬಿದ್ದ. ಸ್ವಾಮಿ ವಿವೇಕಾನಂದರ ನ್ನು ಭೇಟಿಯಾಗಿದ್ದ . ಈತನ ಪ್ರಯೋಗ
>>> ಶಾಲೆಗೆ ಯಾವುದೋ ರೇಡಿಯೋ ಸಂದೇಶಗಳು ಬಂದು ಅವು ಅನ್ಯ ಗ್ರಹ ಜೀವಿಯವು ಅಂತ
>>> ಸುದ್ದಿಯಾಗಿತ್ತು. ಟೇಸ್ಲಾ ತಾನು ಟೈಮ್ ಮಷೀನ ಕಂಡು ಹಿಡಿಯುತ್ತೇನೆ ಅಂತ ಕೂಡ ಹೇಳಿದ್ದ.
>>>
>>> 1897 ರಲ್ಲಿ ಒಂದು ವೈರ್ ಲೆಸ್ ಇಲೆಕ್ಟ್ರಿಸಿಟಿ ಪ್ರಯೋಗ ದಲ್ಲಿ ಆರು ಮೈಲಿ ದೂರದ ಪವರ್
>>> ಹೌಸ್‌ನ ಡೈನಮೋ ಹೆಚ್ಚಿನ ಕರೆಂಟ್ ಬಂದು ಸುಟ್ಟು ಹೋಯಿತು. ಅಲ್ಲಿನ ಕಿಟಕಿಗಳೆಲ್ಲ
>>> ಸ್ಪಾರ್ಕ್. ಸ್ವಿಚ್ ಆಫ್ ಇದ್ದರೂ ಬಲ್ಬ್ ಗಳೆಲ್ಲ ಹೊತ್ತಿ ಉರಿದವು.
>>> ಇಂದಿನ ಸ್ಪಾರ್ಕ್ ಪ್ಲಗ್ ಕಂಡುಹಿಡಿದಿದ್ದು ಟೇಸ್ಲಾ. ರಿಮೋಟ್ ಕಂಟ್ರೋಲ್, ಹೈಡ್ರೋ
>>> ಇಲೆಕ್ಟ್ರಿಸಿಟಿ,  ಟೇಸ್ಲಾ ಕಾಯ್ಲ್. ಇಂಡಕ್ಷನ್ ಮೋಟಾರ್ ಇತ್ಯಾದಿ ನೂರಾರು ಕೂಡ. ಅಮೆರಿಕದ
>>> ನೈಗರಾ ವಿದ್ಯುತ್ ಸ್ಥಾವರ ದಲ್ಲಿ  ಅಂದಿನಿಂದ ಇಂದಿನವರೆಗೆ ವಿದ್ಯುತ್ ಉತ್ಪಾದನೆ  ಟೇಸ್ಲಾ
>>> ತಯಾರಿಸಿದ  ಮೋಟಾರ್ ನಿಂದ.
>>>
>>> ಎಡಿಸನ್ ಗೂ ಮೊದಲು ಟೇಸ್ಲಾ ಎಕ್ಸ್ ರೇ ಕಂಡುಹಿಡಿದಿದ್ದ. ಎಡಿಸನ್ ಎಕ್ಸ್ ರೇ ತುಂಬಾ
>>> ರೇಡಿಯೇಶನ್ ನಿಂದ ಕೂಡಿತ್ತು. ಟೇಸ್ಲಾ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಎಡಿಸನ್ ತನ್ನ
>>> ಅಸಿಸ್ಟೆಂಟ್ ಸ್ಟಾನ್ಲಿ ಎಂಬಾತನ ಕೈಯಿನ ನೂರಾರು ಎಕ್ಸ್ ರೇ ತೆಗೆದು ನಂತರ ಆತನ ಕೈಯನ್ನೇ
>>> ಕತ್ತರಿಸಬೇಕಾಗಿ ಬಂತು.  ಇದಲ್ಲದೆ ಎಡಿಸನ್ ತನ್ನ ಕಣ್ಣಿಗೂ ಎಕ್ಸ್ ರೇ ಬಿಟ್ಟುಕೊಂಡಿದ್ದ.
>>>
>>> ಆದರೆ ದುಡ್ಡಿಗೆ ಆತ ಆಸೆ ಪಟ್ಟಿರಲೇ ಇಲ್ಲ. ಜಾರ್ಜ್ ವೆಲ್ಲಿಂಗಟನ್ ಟೇಸ್ಲಾ ನ ಜತೆ
>>> ಒಪ್ಪಂದ ಮಾಡಿಕೊಂಡು ಎಸಿ ಮೋಟಾರ್ ತಯಾರಿಕೆ ಆರಂಭಿಸಿತು. ಅವರು ಟೇಸ್ಲಾ ಗೆ  ಹತ್ತು ಲಕ್ಷ
>>> $  ಕೊಡಬೇಕಾಗಿತ್ತು. ಆದರೆ ನಮಗೆ ತೊಂದರೆ ಆಗಿದೆ ದಯವಿಟ್ಟು ಕೆಲವು ದಿನ ಹಣ ತೆಗೆದು
>>> ಕೂಳ್ಳಬೇಡಿ ಅಂತ ಅವರು ಟೇಸ್ಲಾ ಹತ್ತಿರ ವಿನಂತಿ ಮಾಡಿದರು.  ಟೇಸ್ಲಾ ಹಣ ಬೇಡ ಅಂತ
>>> ಕಾಂಟ್ರಾಕ್ಟ ಹರಿದು ರೈಟ್ಸ್ ಪುಕ್ಕಟೆ ಕೊಟ್ಟ.  ಆ ಕಾಂಟ್ರಾಕ್ಟ  ನ ಇಂದಿನ ಬೆಲೆ 300 ಕೋಟಿ
>>> ರೂಪಾಯಿ ಗೂ ಹೆಚ್ಚು.  ವೆಲ್ಲಿಂಗಟನ್ ಸಾವಿರಾರು ಕೋಟಿ ಡಾಲರ್ ದುಡಿಯಿತು. ಟೇಸ್ಲಾನ ಪ್ರಯೋಗ
>>> ಶಾಲೆ ನಿಗೂಢವಾಗಿ ಸುಟ್ಟು ಹೋಯಿತು. ಆತ ಮತ್ತೆ ಮೊದಲಿನಿಂದ ಶುರು ಮಾಡಿದ .
>>>
>>> ಟೇಸ್ಲಾ ತನ್ನ ಪಾಟೆಂಟ್ ಗಳನ್ನು ಬ್ಯಾಂಕ ನಲ್ಲಿ ಅಡವಿಟ್ಟು ಸಾಲ ಪಡೆದಿದ್ದ.  ಬ್ಯಾಂಕ
>>> ಅವನ್ನು ಮುಟ್ಟುಗೋಲು ಹಾಕಿತು. ಟೇಸ್ಲಾ ರಸ್ತೆಯ ಬದಿ ಹೊಂಡ ತೋಡುವುದು , ಮೋಟಾರ್ ರಿಪೇರಿ
>>> ಮಾಡುತ್ತಿದ್ದ.
>>>
>>> 1943 . ಟೇಸ್ಲಾ ಸಾಯುವಾಗ ಕೈಯಲ್ಲಿ ಕಾಸಿಲ್ಲದೇ ಬಿಸ್ಕಿಟ್ ತಿಂದು ಯಾವುದೋ ಹೋಟೆಲ್
>>> ನಲ್ಲಿ ಇದ್ದ. ಅರೆ ಹುಚ್ಚನಂತೆ ಪಾರಿವಾಳ ಗಳ ಜೊತೆ ಮಾತನಾಡುತ್ತಿದ್ದ.  ಸಾವಿರಾರು ಪಾರಿವಾಳ
>>> ಗಳಿಗೆ ಕಾಳು ನೀಡುತ್ತಿದ್ದ. ಅದರಲ್ಲಿ ಒಂದು ಬಿಳಿ ಪಾರಿವಾಳ ಈತ ಎಲ್ಲೇ ಇದ್ದರೂ
>>> ಬರುತ್ತಿತ್ತು.
>>>
>>> ಇಂದು ಟೇಸ್ಲಾ ಗಿಗಾಫ್ಯಾಕ್ಟರಿ ಸ್ಥಾಪಿಸಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಲಿಥಿಯಮ್
>>> ಆಯಾನ್ ಬ್ಯಾಟರಿ ಗಳನ್ನು ತಯಾರಿಸಲಾಗುತ್ತಿದೆ.  ಟೇಸ್ಲಾ ಇಲೆಕ್ಟ್ರಿಕ್ ಕಾರ್ ತಯಾರಿಸುವ
>>> ಟೇಸ್ಲಾ ಮೋಟಾರ್ಸ ಇದೆ.
>>> " Present is their's. The future for which I have really worked is mine
>>> " - Nikola Tesla
>>> ಒಂದು ದಿನ ಕೈಯಲ್ಲಿ ಚಿಕ್ಕ ಯಂತ್ರ ಹಿಡಿದು ಇಡೀ ಜಗತ್ತಿನ ಮಾಹಿತಿ ನೋಡುವಂತಾಗುತ್ತದೆ
>>> ಅಂತ ಇಂಟರ್‌ನೆಟ್ ಬಗ್ಗೆ ಟೇಸ್ಲಾ ಆಗ  ಹೇಳಿದ್ದ.
>>>
>>> ಇಂಟರ್‌ನೆಟ್ ನಲ್ಲಿ ಟೇಸ್ಲಾ ಅಭಿಮಾನಿ ನಂಘಗಳಿವೆ.  ನೀವು ಜಗತ್ತಿನಲ್ಲಿ ಯಾವುದೇ
>>> ವಿಜ್ಞಾನಿ ಯನ್ನು ಜೀವನ ದಲ್ಲಿ ಒಮ್ಮೆ ಭೇಟಿಯಾಗಲು ಬಯಸಿದರೆ ಯಾರನ್ನು?  ಅಂತ  ಕಳೆದ ವರ್ಷ
>>> ಆನ್ ಲೈನ್ ಪೋಲ್ ಮಾಡಿದ್ದರು.  ಯಾರನ್ನು ಜನ ಆಯ್ಕೆ ಮಾಡಿದರು ಅಂತ ಬಾಯಿ ಬಿಟ್ಟು
>>> ಹೇಳಬೇಕಿಲ್ಲ ತಾನೇ?
>>>
>>> Source..sreedhar mayya
>>> ...science hike 1gp
>>>
>>> --
>>> 1. If a teacher wants to join STF, visit
>>> http://karnatakaeducation.org.in/KOER/en/index.php/Become_a_STF_groups_member
>>> 2. For STF training, visit KOER -
>>> http://karnatakaeducation.org.in/KOER/en/index.php
>>> 4. For Ubuntu 14.04 installation, visit
>>> http://karnatakaeducation.org.in/KOER/en/index.php/Kalpavriksha
>>> 4. For doubts on Ubuntu, public software, visit
>>> http://karnatakaeducation.org.in/KOER/en/index.php/Frequently_Asked_Questions
>>> 5. Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Why_public_software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to mathssciencestf+unsubscr...@googlegroups.com.
>>> To post to this group, send email to mathssciencestf@googlegroups.com.
>>> Visit this group at https://groups.google.com/group/mathssciencestf.
>>> For more options, visit https://groups.google.com/d/optout.
>>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to